For the best experience, open
https://m.suddione.com
on your mobile browser.
Advertisement

ನಮ್ಮ ಪೂರ್ವಿಕರು ಪ್ರತಿಯೊಂದು ಮಾಸವನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ನಿರೂಪಿಸಿ ಕೊಟ್ಟಿದ್ದಾರೆ : ಮೋಕ್ಷ ಪತಿ ಸ್ವಾಮೀಜಿ

07:14 PM Aug 06, 2024 IST | suddionenews
ನಮ್ಮ ಪೂರ್ವಿಕರು ಪ್ರತಿಯೊಂದು ಮಾಸವನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ನಿರೂಪಿಸಿ ಕೊಟ್ಟಿದ್ದಾರೆ   ಮೋಕ್ಷ ಪತಿ ಸ್ವಾಮೀಜಿ
Advertisement

ಚಿತ್ರದುರ್ಗ. ಆಗಸ್ಟ್. 06 : ಶ್ರಾವಣ ಮಾಸ ಅಂದರೆ ಅದು ಚಿನ್ನದಂತಹ ಸಮಯ. ಕಾರಣ ಆ ತಿಂಗಳಲ್ಲಿ ಜನರಲ್ಲಿ ಚಿಂತನೆಗಳ ಮೂಲಕ ಅರಿವು ಜ್ಞಾನ ಆ ಮೂಲಕ ಅನುಭಾವ ಬಿತ್ತಿ ಜನರಲ್ಲಿ ಜಾಗೃತಿ ಮೂಡಿಸುವಂತಹ ಸಂದರ್ಭವಿದು. ಅಂತಹ ಸನ್ನಿವೇಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ರಾವಂದೂರು ಮುರುಘಾಮಠದ  ಮೋಕ್ಷ ಪತಿ ಸ್ವಾಮೀಜಿಯವರು ಕರೆ ನೀಡಿದರು.

Advertisement
Advertisement

ಚಿತ್ರದುರ್ಗದ ಶ್ರೀ ಜಗದ್ಗುರುಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಆಯೋಜಿಸಿರುವ ಅನುಭಾವ ಶ್ರಾವಣ ಸರಣಿ ಚಿಂತನ ಮಾಲೆಯ ಉದ್ಘಾಟನಾ ಸಮಾರಂಭವು ತಾಲೂಕಿನ ಈಚಘಟ್ಟ ಗ್ರಾಮದಲ್ಲಿ ಸೋಮವಾರ ಸಂಜೆ ಆರಂಭವಾಯಿತು.

ಅಂದಿನ ಶಿವಾನುಭವ  ಗೋಷ್ಠಿ ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳವರು ನಮ್ಮ ಪೂರ್ವಿಕರು ಪ್ರತಿಯೊಂದು ಮಾಸದಲ್ಲಿ ಏನೇನು ಮಾಡಬೇಕೆಂಬುದನ್ನು,ಅದು ವೈಜ್ಞಾನಿಕ ಹಿನ್ನೆಲೆಯಲ್ಲಿ ನಿರೂಪಿಸಿ ಕೊಟ್ಟಿದ್ದಾರೆ. ಅವುಗಳನ್ನು ಅನುಸರಣೆ ಮಾಡುವ ಮೂಲಕ ನಮ್ಮ ಬದುಕನ್ನು ಹಸನು ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಮುಂದಾಗಬೇಕಿದೆ.
ಹೇಗೆ ನಾವು ಸೇವಿಸುವ ಆಹಾರದಲ್ಲಿ ಸವಿಯನ್ನ ಬಯಸುತ್ತೇವೆಯೋ ಹಾಗೆ ನಾವು ಅರಿವು ಜ್ಞಾನ ಪಡೆಯಲು ಅನುಭಾವದ ಸವಿಯ ಸಾರವನ್ನು ಪಡೆದರೆ  ಜೀವನ ಸಾರವಾಗುತ್ತದೆ ಎಂದು ನುಡಿದರು.

Advertisement

ಹಳ್ಳಿಗಳು ನಮ್ಮ ದೇಶದ ಜೀವನಾಡಿಗಳು ಇಲ್ಲಿ ಸುಸಂಸ್ಕೃತಿಯ ಅನಾವರಣವಾಗಿದೆ ಎಂಬುದಕ್ಕೆ ಇಲ್ಲಿನ ಗ್ರಾಮಸ್ಥರು ತೋರಿದ ನಡೆದುಕೊಂಡ ಪರಿ ನನ್ನನ್ನು ಮುಖ ವಿಸ್ಮಿತನನ್ನಾಗಿಸಿದೆ. ಎಲ್ಲೋ ಒಂದು ಕಡೆ ನವ ನಾಗರಿಕತೆಯ ಕಡೆಗೆ ಒಳಗಾಗಿ ನಮ್ಮ ನಡೆ-ನುಡಿ ಆಚಾರ ವಿಚಾರಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿರುವ ನಗರ ಪಟ್ಟಣಗಳ ಜನರು ಅದರಿಂದ ಹೊರತಾದ ಗ್ರಾಮೀಣರು ಹಿಂದಿ  ಸತ್ ಸಂಪ್ರದಾಯಗಳನ್ನು ರೂಡಿಸಿಕೊಂಡಿರುವುದು ನಿಜಕ್ಕೂಅಭಿನಂಧನೀ  ಎಂದು ಸಾನಿಧ್ಯ ವಹಿಸಿದ್ದ ಗುರುಮಠದಕ ಖಾಸಾ ಮಠದ ಶಾಂತವೀರ ಗುರು ಮುರುುಘರಾಜೇಂದ್ರ ಸ್ವಾಮೀಜಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಪ್ರತಿ ಹಳ್ಳಿ ನಗರ ಪಟ್ಟಣಗಳ ಹಿಂದೆ ಒಂದು ಚರಿತ್ರೆಯಿದೆ. ಹಾಗೆ ಈಚಘಟ್ಟ ಗ್ರಾಮಕ್ಕೂ ಇದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಸಮಾರಂಭವು ಮುಂದಿನ ಪೀಳಿಗೆಗೆ ಇತಿಹಾಸವಾಗುತ್ತದೆ. ನಾವು ಯಾವುದನ್ನು ಅಲಕ್ಷ್ಯ ಮಾಡುವಂತಿಲ್ಲ.  ಗ್ರಾಮದಲ್ಲಿ ಎಂತಹ ಸಂಸ್ಕಾರದ ಸೊಬಗು ಇದೆ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ. ಇದು  ಇನ್ನೂ ಮತ್ತಷ್ಟು ಬೆಳೆದು ಬೆಳಗಬೇಕು ಎಂದು ಸಾನಿಧ್ಯ ವಹಿಸಿದ್ದ ಚಿತ್ರದುರ್ಗ ಶ್ರೀ ಜಗದ್ಗುರು ಮುರುುುಘರಾಜೇಂದ್ರ ಬೃಹನ್ಮಠದ ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.

ಯಾವ ಗುರುವಿನ ನಡೆ - ನುಡಿ ಪರಿಶುದ್ಧವಾಗಿರುತ್ತದೋ ಅವರೇ ನಿಜವಾದ ಗುರು ಲಿಂಗ ಜಂಗಮ. ಅಂತಹ ವಾತಾವರಣವನ್ನು ಚಿತ್ರದುರ್ಗದ ಮುರುಘಾಮಠ ಹಾಕಿ ಕೊಟ್ಟಿದೆ ಎಂದ ಅವರು ಪೀಠದ ಜಯದೇವ, ಜಯವಿಭವ, ಮಲ್ಲಿಕಾರ್ಜುನ ಶ್ರೀಗಳವರು ಕಾಲ ಕಾಲಕ್ಕೆ  ಮಠವನ್ನ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಿಕವಾಗಿ ಪ್ರಗತಿ ಸಾಧಿಸಲು ಶ್ರಮಿಸಿದ್ದಾರೆ. ಮಲ್ಲಿಕಾರ್ಜುನ ಶ್ರೀಗಳು ಅವರು ಇಚ್ಛಾ ಮರಣಿ.  ಅವರ ವ್ಯಕ್ತಿತ್ವ ಆಸದೃಶವಾದದ್ದು, ಬಣ್ಣನೆಗೆ ನಿಲುಕದ್ದು. ಅಥಣಿ ಮುರುಘೇಂದ್ರರನ್ನು ಅನುಸರಿಸಿ ಧೀರೋದಾತ್ತ  ವ್ಯಕ್ತಿತ್ವವನ್ನು  ರೂಪಿಸಿಕೊಂಡಿದ್ದರು.

ಲಿಂಗೈಕ್ಯಶ್ರೀಗಳವರ  ಸ್ಮರಣೋತ್ಸವ  ಅಂದು ಚಿನ್ಮಾಲಾದ್ರಿ ಚಿತ್ಕಳೆ ಗ್ರಂಥ ಬಿಡುಗಡೆ ಆಗಸ್ಟ್ ಎಂಟಕ್ಕೆ ಇದೆ. ಎಲ್ಲರೂ ಬರುವ ಮೂಲಕ ಕಾರ್ಯಕ್ರಮವನ್ನು  ಯಶಸ್ವಿಗೊಳಿಸಬೇಕು. ಕೃಷಿಕರು ತಮ್ಮ ವ್ಯವಸಾಯದ ಜೊತೆಗೆ ಆರೋಗ್ಯ, ಶಿಕ್ಷಣದ ಬಗ್ಗೆ ಕಾಳಜಿ ವಹಿಸಿರುವ. ಜ್ಞಾನ ಸಂಪಾದನೆಗೆ ಓದು ಬಹಳ ಮುಖ್ಯ. ದಾರ್ಶನಿಕರ ಚಿಂತಕರ ಗ್ರಂಥಗಳನ್ನು ನೀವು ಓದಬೇಕು. ಅದಕ್ಕಾಗಿ ನಿಮ್ಮ ನಿಮ್ಮ ಗ್ರಾಮದಲ್ಲಿ ಬರುವ ವರ್ಷ ಒಂದು ಸಾರ್ವಜನಿಕ ಗ್ರಂಥಾಲಯ ನಿರ್ಮಿಸಬೇಕೆಂದು ಸಲಹೆ ನೀಡಿದರು.ಆ ಮೂಲಕ ಜಗತ್ತಿನ ವಿದ್ಯಮಾನ ತಿಳಿದುಕೊಳ್ಳಲು ಅಲ್ಲಿ ದಿನಪತ್ರಿಕೆ ವೃತ್ತ ಪತ್ರಿಕೆಗಳನ್ನು ಇಟ್ಟು ಓದಿಸಬೇಕೆಂದು ಸಲಹೆ ಮಾಡಿದರು.

ಅಥಣಿ ಶಿವಯೋಗಿಗಳು ಎಂದರೆ ಆಧ್ಯಾತ್ಮಿಕ ಮೌಂಟ್ ಎವರೆಸ್ಟ್ .ಭಕ್ತರ ಸಂಕಷ್ಟಗಳಿಗೆ ಸದಾ ಮಿಡಿದ ಜೀವ ಅದು. ಅವರ ಬಗ್ಗೆ ಇಷ್ಟು ಸಮಯ ಮಾತನಾಡಲು ಸಾಕಾಗದು, ದಿನಗಟ್ಟಲೆ ಹೇಳಿದರು ಅವರ ಬಗ್ಗೆ ಇನ್ನೂ ಉಳಿಯುತ್ತದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜಯದೇವ ಗುರುಗಳು ಹಾಗೂ ಮಹಾತ್ಮ ಗಾಂಧೀಜಿಯವರು ಹಾವೇರಿ ಹೊಂಡದ ಮಠದಲ್ಲಿ ಭೇಟಿಯಾಗಿ ಸಮಾಜದ ಅಭಿವೃದ್ಧಿಗೆ ಇಬ್ಬರು ಮಹಾನ್ ವ್ಯಕ್ತಿಗಳು ಸುಧೀರ್ಘ ಚರ್ಚೆ ನಡೆಸಿದ್ದರ ವಿವರವನ್ನು ಸಭೆಯಲ್ಲಿ ದಾವಣಗೆರೆ ವಿರಕ್ತಮಠದ ಬಸವ ಪ್ರಭು ಸ್ವಾಮೀಜಿ ಅವರು ಹಂಚಿಕೊಂಡರು.

ಮುಖ್ಯ ಅತಿಥಿಗಳಾಗಿದ್ದ ಹೊಳಲ್ಕೆರೆಯ ಮಾಜಿ ಶಾಸಕರಾದ ಪಿ .ರಮೇಶ್ ವಕೀಲಾದ ಜಿ.ಎಚ್. ಶಿವಕುಮಾರ್ ,ರೈತ ಮುಖಂಡ ಈಚಘಟ್ಟದ ಸಿದ್ಧವಿರಪ್ಪ ಹಾಗೂ ನಿವೃತ್ತ ಪ್ರಾಚಾರ ಎಸ್.ಎಂ.  ಕೊಟ್ರೇಶಪ್ಪ ಅವರುಗಳು ಸಭೆಯ ವಿಷಯ ಕುರಿತು ಮಾತನಾಡಿದರು.

ನಿವೃತ್ತ  ಉಪನ್ಯಾಸಕರಾದ ಜ.  ಟಿ .ನಂದೀಶ್ ಅವರು ಅಥಣಿಯ ಮುರುಘೇಂದ್ರ ಶಿವಯೋಗಿ"ಗಳವರ  ಸಮಗ್ರ ಜೀವನ ಸಾಧನೆ ಕುರಿತು ಚಿಂತನ ನೀಡಿದರು. ವೇದಿಕೆಯಲ್ಲಿ ಮುರುಘೇಶ ಶ್ರೀಗಳವರು ತಿಪ್ಪೇರುದ್ರ ಸ್ವಾಮಿಗಳು, ಗ್ರಾಮದ ಧರ್ಮದರ್ಶಿ ಎಂ. ಪ್ರಸನ್ನ ಕುಮಾರ್, ವೀರಭದ್ರ ಸ್ವಾಮಿ ದೇವಾಲಯದ ಹಿರಿಯ ಅರ್ಚಕರಾದ ವೀರಭದ್ರಪ್ಪ  ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕರು ದೇವಾಲಯ  ನಿತ್ಯ ರುದ್ರಾಭಿಷೇಕ ಸಮಿತಿಯ ಕಾರ್ಯದರ್ಶಿ ಕೆ.ಎಸ್. ಮಾದೇವಪ್ಪ ಅವರು ವಹಿಸಿ ಮಾತನಾಡಿದರು.
ಜಮುರಾ ಕಲಾವಿದರು ಸಮಾರಂಭದ ಆರಂಭಕ್ಕೆ  ವಚನ ಪ್ರಾರ್ಥನೆ ಮಾಡಿದರು. ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಯು  ಎಸ್ .ತಿಪ್ಪೇಸ್ವಾಮಿ ಸ್ವಾಗತಿಸಿದರು .ವಕೀಲರ ಮೂಲೆ ಮನೆ ಪರಮೇಶ್ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದ ಮುನ್ನ ಗ್ರಾಮದಲ್ಲಿ ಸಸಿ ನೆಡಲಾಯಿತು, ಶ್ರೀಗಳವರನ್ನು, ಅತಿಥಿಗಳನ್ನು ಜಾನಪದ ವಾದ್ಯ ವೈಭವಗಳೊಂದಿಗೆ ವೇದಿಕೆಗೆ ಕರೆತರಲಾಯಿತು.

ಇದಕ್ಕೂ ಮುನ್ನ ಬೆಳಿಗ್ಗೆಯಿಂದ  ಮಧ್ಯಾಹ್ನದವರೆಗೂ ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತಜ್ಞ ವೈದ್ಯರುಗಳಿಂದ ತ ಗ್ರಾಮದಲ್ಲಿ "ಉಚಿತ ಆರೋಗ್ಯ ತಪಾಸಣಾ" ಶಿಬಿರ ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆಯಿತು. ತಜ್ಞ ವೈದ್ಯರುಗಳಾದ  ಸ್ತ್ರೀರೋಗ ತಜ್ಞರಾದ ಡಾ. ಅಂಕಿತ, ಡಾ.ರೂಬಿನ, ಆರ್ಥೋ ವಿಭಾಗದ  ಡಾ. ಭೋಪಾಲ್ ಇ ಅಂಡ್ ಟಿ ವಿಭಾಗದ ಡಾ. ಮನೋಜ್, ಆಫ್ತಲ್ ವಿಭಾಗದ  ಡಾ. ಭೀಮ್ ಸೇನ್, ಡಾ. ಶ್ರೀಕಾ, ಸರ್ಜರಿ ವಿಭಾಗದ ಡಾ. ಐಶ್ವರ್ಯ, ಚರ್ಮರೋಗ ತಜ್ಞರಾದ ಡಾ. ರಚನಾ, ಸಿಸ್ಟರ್ ಯಶೋಧಾ, ಮೂರ್ತಿ  ಹಾಗೂ ಸಂಪರ್ಕಾ ಧಿಕಾರಿ ಪ್ರಸಾದ್ ಅವರುಗಳ ತಂಡ ಗ್ರಾಮದಲ್ಲಿ ಸುಮಾರು 113 ಜನರ ವಿವಿಧ ಬಗೆಯ ಕಾಯಿಲೆಗಳಿಗೆ ಉಚಿತ ತಪಾಸಣೆ ಮಾಡಿ ಜತೆಗೆ ಔಷಧಿಯನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರುಗಳಾದ  ನಿವೃತ್ತ ಶಿಕ್ಷಕರಾದ ಮಹದೇವಪ್ಪ, ಮೂಲೆಮನೆ
ವೀರಭದ್ರಪ್ಪ, ಯು .ಆರ್. ಮಂಜುನಾಥ್, ಯು ಎಸ್. ತಿಪ್ಪೇಸ್ವಾಮಿ, ರೈತ ಮುಖಂಡರಾದ ಸಿದ್ದ ವೀರಪ್ಪ , ಎಲ್ ಆರ್. ಮಹರುದ್ರಪ್ಪ,ಸಿ.ಡಿ. ಲೋಕೇಶ್, ಎಂ  ಕುಬೇರ್, ಜಿ. ಆರ್. ರಾಜಪ್ಪ ವಕೀಲರಾದ ಪ್ರಸನ್ನ ಕುಮಾರ್,ಮೂಲೆಮನೆ ಪರಮೇಶ್ ಮತ್ತಿತರರು ಹಾಜರಿದ್ದರು.

Tags :
Advertisement