ಚಿತ್ರದುರ್ಗದ ಈರುಳ್ಳಿ ಬೆಳೆಗಾರರಿಗೆ ಫುಲ್ ಖುಷಿ : ಮಾರುಕಟ್ಟೆಯಲ್ಲಿ ಬಂಪರ್ ಆಫರ್
ಚಿತ್ರದುರ್ಗ: ಬಾರೀ ಮಳೆಯಿಂದಾಗಿ ರಾಜ್ಯದ ಹಲವು ಬೆಳೆಗಳು ನಷ್ಟದತ್ತ ಸಾಗಿದೆ. ಇನ್ನೇನು ಕೈಗೆ ಸಿಗುವ ಬೆಳೆ ಮಾರುಕಟ್ಟೆಗೆ ಬರದಂತೆ ಆಗಿದೆ. ಮಳೆಯಿಂದಾಗಿಯೇ ಚಿತ್ರದುರ್ಗದಲ್ಲೂ ಈರುಳ್ಳಿ ಬೆಳೆಗಾರರು ನಷ್ಟ ಅನುಭವಿಸಿದ್ದರು. ಇದೀಗ ಚಿತ್ರದುರ್ಗದ ಈರುಳ್ಳಿ ಬೆಳೆಗಾರರಿಗೆ ಬಂಪರ್ ಅದೃಷ್ಟ ಸಿಕ್ಕಿದೆ. ಈರುಳ್ಳಿ ಬೆಲೆ ಒಳ್ಳೆಯ ಆಫರ್ ಬೆಲೆಗೆ ಮಾರಾಟವಾಗಿದೆ.
ಜಿಲ್ಲೆಯಾದ್ಯಂತ ಬಹುತೇಕ ಈರುಳ್ಳಿ ಬೆಳೆ ಹಾಳಾಗಿತ್ತು. ಇದರಿಂದ ಈರುಳ್ಳಿ ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸಿದ್ದರು. ಇದೀಗ ಇರುವ ಈರುಳ್ಳಿಗೆ ಮಾರುಕಟ್ಟೆಯಲ್ಲಿಯೇ ಒಳ್ಳೆಯ ಬೆಲೆ ನಿಗಧಿಯಾಗಿದೆ. ಜಿಲ್ಲೆಯ ನಿಡಗುಂದಿ, ಬಸವನಬಾಗೇವಾಡಿ, ಕೊಲ್ಹಾರ, ಮುದ್ದೆಬಿಹಾಳ, ಇಂಡಿ, ಸಿಂದಗಿ ಸೇರಿದಂತೆ ಹಲವು ಭಾಗದಲ್ಲಿ ಅದರಲ್ಲೂ ನೀರಾವರಿ ಹೊಂದಿದ್ದ ಪ್ರದೇಶ ಹಾಗೂ ಕಾಲುವೇ ಜಾಲಗಳಲ್ಲಿ ಈರುಳ್ಳಿಯನ್ನು ಹೆಚ್ಚಾಗಿ ಬೆಳೆಯಲಾಗಿತ್ತು. ಅಳಿದುಳಿದ ಈರುಳ್ಳಿ ಈಗ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಇದು ರೈತರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಸಾವಿರಾರು ಹೆಕ್ಟೇರ್ ನಲ್ಲಿ ಈರುಳ್ಳಿ ಬೆಳೆದಿದ್ದ ರೈತರು ಈ ಸಲ ಒಳ್ಳೆಯ ಲಾಭ ಮಾಡುವ ನಿರೀಕ್ಷೆ ಹೊಂದಿದ್ದರು. ಆದರೆ ಮಳೆಯಿಂದಾಗಿ ಬಾರೀ ಸಮಸ್ಯೆ ಎದುರಾಗಿತ್ತು. ಈಗ ಉತ್ತಮ ಬೆಲೆ ಸಿಗುತ್ತಿದೆ. ಸದ್ಯ ಚಿತ್ರದುರ್ಗ ರೈತರು ಬೆಂಗಳೂರು ಮಾರುಕಟ್ಟೆಯನ್ನು ನಂಬಿದ್ದಾರೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ ಉತ್ತಮ ಈರುಳ್ಳಿಗೆ 2000-4,400 ರೂಪಾಯಿ ತನಕ ದರವಿದೆ. ಹೀಗಾಗಿ ಬೆಂಗಳೂರಿನತ್ತ ಈರುಳ್ಳಿಗಳ ಸಾಗಾಟ ನಡೆಯುತ್ತಿದೆ. ಅಷ್ಟೇ ಅಲ್ಲ ಸ್ಟಾಕ್ ಇಟ್ಟುಕೊಂಡಿದ್ದ ಈರುಳ್ಳಿಗೆ ಈಗ ಬಂಪರ್ ಬೆಲೆ ಸಿಗುತ್ತಿದೆ. ಇದರಿಂದಾನೂ ರೈತರ ಲಾಭ ಹೆಚ್ಚಾಗಲಿದೆ. ಮಾರುಕಟ್ಟೆಯಲ್ಲೂ ರೈತರಿಗೆ ಮೊದಲೇ ಸೂಚನೆ ನೀಡುತ್ತಿದ್ದಾರೆ. ಡ್ಯಾಮೇಜ್ ಆಗಿರುವ ಈರುಳ್ಳಿ ತರಬೇಡಿ. ತೇವಾಂಶವಿಲ್ಲದ, ಒಣಗಿದ ಉತ್ತಮ ಗುಣಮಟ್ಟದ ಈರುಳ್ಳಿಯನ್ನು ತನ್ನಿ ಎನ್ನುತ್ತಿದ್ದಾರೆ.