For the best experience, open
https://m.suddione.com
on your mobile browser.
Advertisement

ಮಾಡುವ ಕೆಲಸವನ್ನು ಶ್ರದ್ದೆಯಿಂದ ಮಾಡಿದರೆ ನೂರರಷ್ಟು ಪ್ರಗತಿ ಸಾಧ್ಯ : ಅರುಣ್‍ಕುಮಾರ್

05:46 PM Jan 18, 2024 IST | suddionenews
ಮಾಡುವ ಕೆಲಸವನ್ನು ಶ್ರದ್ದೆಯಿಂದ ಮಾಡಿದರೆ ನೂರರಷ್ಟು ಪ್ರಗತಿ ಸಾಧ್ಯ   ಅರುಣ್‍ಕುಮಾರ್
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ ಜ. 18 : ನಾವು ಮಾಡುವ ಕೆಲಸವನ್ನು ಶ್ರದ್ದೆಯಿಂದ ಮಾಡಿದಾಗ ನೂರರಷ್ಟು ಪ್ರಗತಿಯನ್ನು ಸಾಧಿಸಬಹುದಾಗಿದೆ ಎಂದು ಅಹೋಬಲ ಟಿ.ವಿ.ಎಸ್ ಹಾಗೂ ಅಹೋಬಲ ಸ್ಟೀಲ್ಸ್ ಮತ್ತು ಸಿಮೆಂಟ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಅರುಣ್‍ಕುಮಾರ್ ಪಿ.ವಿ ತಿಳಿಸಿದರು.

Advertisement

ಭಾರತ ಸರ್ಕಾರ, ನೆಹರು ಯುವ ಕೇಂದ್ರ ಚಿತ್ರದುರ್ಗ ಮತ್ತು ಮದಕರಿ ಯುವಕ ಸಂಘ (ರಿ) ಚಿತ್ರದುರ್ಗ ಇವುಗಳ ಸಂಯುಕ್ತಾಶ್ರಯದಲ್ಲಿ ಬಸವೇಶ್ವರ ಟಾಕೀಸ್ ರಸ್ತೆಯ ಸಿಲಿಕಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ, ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಯುವ ಸಪ್ತಾಹ ಮತ್ತು ಕೌಶಲ್ಯ ಅಭೀವೃಧ್ದಿ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Advertisement
Advertisement

ಇಂದಿನ  ದಿನಮಾನದಲ್ಲಿ ಕಂಪ್ಯೂಟರ ಜ್ಞಾನ ಅತಿ ಅಗತ್ಯವಾಗಿದೆ ಎಲ್ಲಿ ಹೋದರು ಸಹಾ ಕಂಪ್ಯೂಟರ್ ಬಗ್ಗೆ ಕೇಳುತ್ತಾರೆ ಆದ್ದರಿಂದ ಕಂಪ್ಯೂಟರ್ ಬಗ್ಗೆ ತಿಳಿಯುವುದು ಅಗತ್ಯವಾಗಿದೆ. ಇದರೊಂದಿಗೆ ಬರೀ ಕಂಪ್ಯೂಟರ್ ಬಗ್ಗೆ ತಿಳಿಯುವುದು ಮಾತ್ರವಲ್ಲದೆ ಅದಕ್ಕಿಂತ ಹೆಚ್ಚಾಗಿ ಜಾವ ಸೇರಿದಂತೆ ಇತರೆ ವಿಷಯಗಳ ಬಗ್ಗೆ ತಿಳಿಯುವ ಪ್ರಯತ್ನವನ್ನು ಮಾಡಿ ಇದರಿಂದ ನಿಮ್ಮ ಬದುಕಿಗೆ ಮುಂದೆ ಉಪಯೋಗವಾಗುತ್ತದೆ ಎಂದು ಕಿವಿ ಮಾತು ಹೇಳಿದರು.

ಭಾರತ ಸರ್ಕಾರದ ನೆಹರು ಯುವ ಕೇಂದ್ರದ ಜಿಲ್ಲಾ ಯವಜನ ಅಧಿಕಾರಿಗಳು ಸುಹಾಸ್ ಎನ್ ಮಾತನಾಡಿ, ವಿವೇಕಾನಂದರಂತೆ ಎಲ್ಲಾ ಯುವ ಜನತೆಯೂ ಸಹಾ ದೇಶದ ಬಗ್ಗೆ ಅಭೀಮಾನವನ್ನು ಬೆಳಸಿಕೊಳ್ಳಬೇಕಿದೆ. ವಿವೇಕಾನಂದರು ದೇಶದ ಬಗ್ಗೆ ಆಪಾರವಾದ ಕಾಳಜಿಯನ್ನು ಹೊಂದಿದ್ದರು, ಅಷ್ಟೇ ಪ್ರಮಾಣದಲ್ಲಿ ದೇಶಕ್ಕೆ ಕೊಡುಗೆಯನ್ನು ಸಹಾ ನೀಡಿದ್ದಾರೆ. ಚಲನಚಿತ್ರ ನಟರನ್ನು ಮಾದರಿಯನ್ನಾಗಿ ಇಟ್ಟುಕೊಳ್ಳುವುದಕ್ಕಿಂತ ಸ್ವಾಮಿ ವಿವೇಕಾನಂದರನ್ನು ಮಾದರಿಯನ್ನಾಗ ಇಟ್ಟುಕೊಳ್ಳಿ ಇವರ ಜನ್ಮ ದಿನದ ಅಂಗವಾಗಿ ಜ. 12 ರಿಂದ 19ರವರೆಗೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಮ್ಮ ನೆಹರು ಯುವ ಕೇಂದ್ರದಿಂದ ಹಮ್ಮಿಕೊಳ್ಳಲಾಗುತ್ತದೆ. ಇದರ ಪ್ರಯೋಜನವನ್ನು ಪಡೆಯಬೇಕಿದೆ ಎಂದರು.

ಇಂದಿನ  ದಿನಮಾನದಲ್ಲಿ ಶಿಕ್ಷಣದ ಜೊತೆಗೆ ಯಾವುದಾದರೂ ಕೌಶಲ್ಯ ಹೊಂದಿರುವುದು ಅಗತ್ಯವಾಗಿದೆ, ಕೌಶಳ್ಯ ಇಲ್ಲದಿದ್ದರೆ ಏನು ಪ್ರಯೋಜನವಾಗುವುದಿಲ್ಲ, ನಿಮ್ಮಲ್ಲಿ ಕೌಶಲ್ಯ ಇದ್ದರೆ ಬೇರೆಯವರು ಕರೆದು ಕೆಲಸವನ್ನು ನೀಡುತ್ತಾರೆ. ನಮ್ಮಲ್ಲಿ ಲಕ್ಷಾಂತರ ಮಂದಿ ವಿದ್ಯಾವಂತರಿದ್ದಾರೆ ಆದರೆ ಕೌಶಲ್ಯವನ್ನು ಹೊಂದಿರುವವರ ಸಂಖ್ಯೆ ಕಡಿಮೆ ಇದೆ ಇದರಿಂದ ನಿರುದ್ಯೋಗ ತಾಂಡವಾಡುತ್ತಿದೆ, ಆದರೆ  ಕೌಶಲ್ಯವನ್ನು ಹೊಂದಿರುವ ಯಾವ ವ್ಯಕ್ತಿಯೂ ಸಹಾ ನಿರುದ್ಯೋಗಿಯಾಗಿರುವುದಿಲ್ಲ ಆತ ಸ್ವಯಂ ಉದ್ಯೋಗಿಯಾಗಿ ಬೇರೆಯವರಿಗೆ ಕೆಲಸವನ್ನು ನೀಡುವಂತನಾಗಿರುತ್ತಾನೆ ಎಂದು ಸುಹಾಸ್ ತಿಳಿಸಿದರು.

ಕಂಪ್ಯೂಟರ್ ತರಬೇತಿದಾರರಾದ ಜಾವಿದ್ ಉಪನ್ಯಾಸ ನೀಡುತ್ತಾ, ಯುವ ಜನತೆಯಲ್ಲಿ ಇರುವ ಕೌಶಲ್ಯವನ್ನು ಹೊರ ತೆಗೆಯುವ ಕಾರ್ಯವನ್ನು ಕೇಂದ್ರ ಸರ್ಕಾರ ಕೌಶಲ್ಯ ತರಬೇತಿಯನ್ನು ನೀಡುವುದರ ಮೂಲಕ ಮಾಡುತ್ತಿದೆ. ಕೌಶಲ್ಯತೆ ನಿರುದ್ಯೋಗವನ್ನು ದೂರ ಮಾಡುತ್ತದೆ, ಬದುಕನ್ನು ರೂಪಿಸಿಕೊಂಡುತ್ತದೆ. ಯುವ ಜನತೆ ತಮ್ಮಲ್ಲಿನ ಕೌಶಲ್ಯತೆಯನ್ನು ಹೆಚ್ಚಿಗೆ ಮಾಡಿಕೊಳ್ಳಬೇಕಿದೆ, ಇದಕ್ಕಾಗಿ ಇರುವ ತರಬೇತಿಗಳನ್ನು ಪಡೆಯುವಂತೆ ಮನವಿ ಮಾಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಸಿಲಿಕಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಸ್ಥಾಪಕರಾದ ಡಿ ಗೋಪಾಲಸ್ವಾಮಿ ನಾಯಕ ಮಾತನಾಡಿ, ನಿಮ್ಮಲ್ಲಿನ ಕೌಶಲ್ಯವನ್ನು ಅಭೀವೃದ್ದಿ ಪಡಿಸಿಕೊಂಡು ಕೆಲಸವನ್ನು ಪಡೆಯಿರಿ, ಇದೇ ರೀತಿ ಕೌಶಲ್ಯವನ್ನು ಕಾಲ ಕಾಲಕ್ಕೆ ತಕ್ಕಂತೆ ಅಭೀವೃದ್ದಿಯನ್ನು ಮಾಡಿಕೊಳ್ಳಬೇಕು, ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸಿ ಸಾಧ್ಯವಾಗದಿದ್ದರೆ ನಿಮ್ಮಕೌಶಲ್ಯದಿಂದ ಸ್ವಯಂ ಆಗಿ ಕೆಲಸವನ್ನು ಪ್ರಾರಂಭ ಮಾಡಿ ಬೇರೆಯವರಿಗೆ ಕೆಲಸವನ್ನು ನೀಡಿ ಎಂದು ಕರೆ ನೀಡಿದರು.

ಮದಕರಿ ಯುವಕ ಸಂಘದ ಅಧ್ಯಕ್ಷರಾದ ಕೆ ಸೋಮಶೇಖರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Advertisement
Tags :
Advertisement