Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸ್ಪಾಟ್ ನಲ್ಲೇ ಡೈಲಾಗ್ ಡೆಲಿವರಿ : ಚಿತ್ರದುರ್ಗದ ಗಗನ ಬಾರಿ ಟ್ಯಾಲೆಂಟ್ ಗೆ ವೇದಿಕೆಯಲ್ಲೇ ಅಡ್ವಾನ್ಸ್ ನೀಡಿದ ತರುಣ್ ಸುಧೀರ್

02:29 PM Apr 08, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.08 : ಜೀ ಕನ್ನಡದಲ್ಲಿ ಕಳೆದ ವಾರದಿಂದ ಮಹಾನಟಿ ರಿಯಾಲಿಟಿ ಶೋ ಶುರುವಾಗಿದೆ. ಒಳ್ಳೆಯ ಪ್ರತಿಭೆಗಳನ್ನೇ ಆಯ್ಕೆ ಮಾಡಿ, ಈ ಶೋ ನಡೆಸಲಾಗುತ್ತಿದೆ. ನಾನಾ ಜಿಲ್ಲೆಯಿಂದ ಫೈನಲಿಸ್ಟ್ ಗಳು ತಮ್ಮ ನಟನಾ ಕೌಶಲ್ಯ ತೋರಿಸುತ್ತಿದ್ದಾರೆ. ರಮೇಶ್ ಅರವಿಂದ್, ಪ್ರೇಮಾ, ತರುಣ್ ಸುದೀರ್, ನಿಶ್ವಿಕಾ ನಾಯ್ಡು ತೀರ್ಪುಗಾರರಾಗಿದ್ದಾರೆ.

Advertisement

ಚಿತ್ರದುರ್ಗ ಜಿಲ್ಲೆಯ ಮೊಳಕಾಳ್ಮೂರು ತಾಲ್ಲೂಕಿನ ಬಿ.ಜಿ.ಕೆರೆ ಗ್ರಾಮದ ಗಗನ ಬಾರಿ ಎಂಬ ಕಲಾವಿದೆ ಬಂದಿದ್ದಾರೆ. ಅವರಿಗೆ ರಮೇಶ್ ಅರವಿಂದ್ ಅವರು ಅಂಬಾನಿ ಮದುವೆಯಲ್ಲಿದ್ದೀನಿ, ಅಲ್ಲಿನ ವಾತಾವರಣವನ್ನು ವಿವರಿಸಿ ಎಂದು ಹೇಳಿದ್ದಾರೆ. ಈಗ ಗಗನ ಬಾರಿ ಆ ಕ್ಷಣದಲ್ಲಿಯೇ ಎಲ್ಲವನ್ನು ಊಹೆ ಮಾಡಿಕೊಳ್ಳಬೇಕು. ಊಹೆ ಮಾಡಿಕೊಂಡು ಜಡ್ಜಸ್ ಗಳು ನೀಡಿದ ಸಮಯಕ್ಕೆ ಸರಿಯಾಗಿ ಆ ಸ್ಕಿಟ್ ಅನ್ನು ಮುಗಿಸಬೇಕು. ಅವರೇ ಸ್ಕ್ರಿಪ್ಟ್ ರೈಟರ್, ಅವರೇ ನಟನಾ ಮಾಸ್ಟರ್, ಅವರೇ ಡೈಲಾಗ್ ರೈಟರ್ ಕೂಡ ಆಗಿರುತ್ತಾರೆ. ಯೋಚನೆ ಮಾಡುವುದಕ್ಕೂ ಹೆಚ್ಚಿನ ಸಮಯವೇನು ಇರುವುದಿಲ್ಲ. ಅವರ ಪ್ರತಿಭೆ, ಟೈಮ್ ಸೆನ್ಸ್ ಕೂಡ ಇದರಲ್ಲಿ ಚೆಕ್ ಮಾಡಿದಂತೆ ಆಗುತ್ತದೆ. ಆದರೆ ಜಡ್ಜಸ್ ಗಳ ನಿರೀಕ್ಷೆ ಮೀರಿ ಅಭಿನಯಿಸುತ್ತಿದ್ದಾರೆ.

Advertisement

 

ರಮೇಶ್ ಅರವಿಂದ್ ಅವರು ಗಗನ ಬಾರಿಗೆ ಅಂಬಾನಿ ಮದುವೆಯಲ್ಲಿನ ವಾತಾವರಣವನ್ನು ವಿವರಿಸುವಂತೆ ಹೇಳಿದಾಗ, 'ಅಂಬಾನಿ ಮಗನ ಮದುವೆಗೆ ಬಂದಿದ್ದೀನಿ ಕಣೇ. ಅಮಿರ್ ಖಾನ್, ಶಾರುಖ್ ಖಾನ್ ಬ್ಯಾಗ್ರೌಂಡ್ ಡ್ಯಾನ್ಸರ್ಸ್ ಹ, ಜಾಹ್ನವಿ ಕಪೂರ್ ನ ಹೋಗೋ ಬರೋರಿಗೆಲ್ಲಾ ಹೂ ಹಾಕೋಕೆ ನಿಲ್ಸವ್ರೆ' ಅಂತ ತಮ್ಮದೇ ಸ್ಟೈಲ್ ನಲ್ಲಿ ಫುಲ್ ಜೋಶ್ ಆಗಿ ಹೇಳಿದ್ದಾರೆ. ಇದನ್ನು ಕೇಳುತ್ತಿದ್ದಂತೆ ಪ್ರೇಮಾ, ರಮೇಶ್ ಅರವಿಂದ್ ನಕ್ಕು ಎಂಜಾಯ್ ಮಾಡಿದ್ದಾರೆ.

ಸ್ಪಾಟ್ ನಲ್ಲೇ‌ ಡೈಲಾಗ್ ಬರೆದುಕೊಳ್ಳುವುದು ಅಂದ್ರೆ ಸುಮ್ನೆ ಅಲ್ಲ. ಇದು ತರುಣ್ ಸುಧೀರ್ ಅವರನ್ನು ಇಂಪ್ರೆಸ್ ಮಾಡಿದೆ. ಗಗನಾ ಬಾರಿ ಡೈಲಾಗ್ ಗೆ ಫಿದಾ ಆಗಿದ್ದಾರೆ. ವೇದಿಕೆ ಮೇಲೆ ಬಂದು ರೈಟರ್ ಆಗಿ ನೀನು ಸಿನಿಮಾ ಇಂಡಸ್ಟ್ರಿಗೆ ಬಾರಮ್ಮ. ಯಾವಾಗ ಬೇಕಾದರೂ ಬಾ ಅಂತ ಹೇಳಿ ಅಡ್ವಾನ್ಸ್ ಹಣವನ್ನು ನೀಡಿದ್ದಾರೆ. ಆ ಅಡ್ವಾನ್ಸ್ ತೆಗೆದುಕೊಂಡ ಗಗನ ಬಾರಿ, ಈ ಹಣ ನಂಗೆ ಐದು ಕೋಟಿಗೆ ಸಮ ಎಂದು ಕಣ್ಣೀರು ಹಾಕಿದ್ದಾರೆ. ಇದನ್ನು ನೋಡಿದ ಚಿತ್ರದುರ್ಗದ ನೆಟ್ಟಿಗರೊಬ್ಬರು ನಮ್ಮ ದುರ್ಗದ ಹುಡುಗಿ ಅಂದ್ರೆ ಸುಮ್ನೇನಾ ಅಂತ ಕಮೆಂಟ್ ಹಾಕುತ್ತಿದ್ದಾರೆ.

Advertisement
Tags :
advancebengaluruchitradurgadialogue deliveryGagan Barispot!stagesuddionesuddione newstalentTarun Sudhirಅಡ್ವಾನ್ಸ್ಗಗನ ಬಾರಿಚಿತ್ರದುರ್ಗಟ್ಯಾಲೆಂಟ್ಡೈಲಾಗ್ ಡೆಲಿವರಿತರುಣ್ ಸುಧೀರ್ಬೆಂಗಳೂರುವೇದಿಕೆಸುದ್ದಿಒನ್ಸುದ್ದಿಒನ್ ನ್ಯೂಸ್ಸ್ಪಾಟ್
Advertisement
Next Article