Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಜೂನ್ 16 ರಂದು ಎರಡು ಕೃತಿಗಳು ಲೋಕಾರ್ಪಣೆ : ಡಾ.ದೊಡ್ಡಮಲ್ಲಯ್ಯ

04:08 PM Jun 13, 2024 IST | suddionenews
Advertisement

ವರದಿ ಮತ್ತು ಫೋಟೋ ಕೃಪೆ

Advertisement

ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಜೂ. 13 : ಜೂನ್ 16ರ ಭಾನುವಾರ ಬೆಳಗ್ಗೆ 11 ಗಂಟೆಗೆ ನಗರದ ತ.ರಾ.ಸು.ರಂಗಮಂದಿರದಲ್ಲಿ ನನ್ನ ಚೊಚ್ಚಲ ಕೃತಿಗಳಾದ ಕಂಡುಂಡ ಕತೆಗಳು ಮತ್ತು ಮೂಕ ಲಹರಿ ಲೋಕಾರ್ಪಣೆಗೊಳ್ಳುವ ಸಮಾರಂಭವನ್ನು ಇಟ್ಟುಕೊಳ್ಳಲಾಗಿದೆ ಎಂದು ಕೃತಿಕಾರರು ಹಾಗೂ ಕಸಾಪದ ನಿಕಟಪೂರ್ವಜಿಲ್ಲಾಧ್ಯಕ್ಷರಾದ ಡಾ.ದೊಡ್ಡಮಲ್ಲಯ್ಯ ತಿಳಿಸಿದ್ದಾರೆ.

Advertisement

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇವೆರಡೂ ಕೃತಿಗಳು ನನ್ನ ಸಾಹಿತ್ಯ ಕೃಷಿಯ ಮೊದಲ ಕೃತಿಗಳು: ಕಂಡುಂಡ ಕಥೆಗಳು ನನ್ನ ಬಾಲ್ಯದ ಮತ್ತು ನಂತರದ ನನ್ನ ಪರಿಸರದ ಅನುಭವಗಳನ್ನು ಸೃಜನಶೀಲ ಚೌಕಟ್ಟಿನಲ್ಲಿ ಕಥೆಗಳನ್ನಾಗಿಸಿ ಕೃತಿಯನ್ನು ರಚಿಸಿದ್ದೇನೆ. ಒಟ್ಟು ಹದಿನೆಂಟು ಕಥೆಗಳಿರುವ ಈ ಕೃತಿಯಲ್ಲಿ ವಿಭಿನ್ನ ರೀತಿಯ ಅಥವಾ ವಸ್ತು ವಿಶೇಷತೆ ಇರುವ ವಿಷಯಗಳನ್ನು ಆರಿಸಿಕೊಂಡಿದ್ದೇನೆ. ಮಾನವ ಪ್ರಕೃತಿಯ ಒಂದು ಭಾಗವಾಗಿ ಪರಿಸರದ ಸ್ವಾಸ್ಥ್ಯಕ್ಕಾಗಿ ಅವನ ವರ್ತನೆಗಳು ಹೇಗಿರಬೇಕು ಎನ್ನುವುದನ್ನು ಪ್ರತಿಪಾದಿಸಿದ ಅನೇಕ ಚಿತ್ರಣಗಳು ಇಲ್ಲಿವೆ. ಹಾಗೆ ಮಾನವೀಯ ನೆಲೆಯಲ್ಲಿ ತಾನು ವಹಿಸಬೇಕಾದ ಜವಾಬ್ದಾರಿಗಳ ಅರಿವಿದೆ. ಮಾನವ ಮತ್ತು ಪ್ರಾಣಿಗಳ ನಡುವಿನ ಬಾಂಧವ್ಯದ ಅಂದರೆ ಭೂತ ದಯೆಯ ಚಿತ್ರಗಳು ಇವೆ. ಇಲ್ಲಿನ ಬಹುತೇಕ ಕಥೆಗಳಲ್ಲಿ ಕೃಷಿ ಮತ್ತು ಪ್ರಾಣಿಗಳ ಸಂಗತಿಗಳು ವಸ್ತು ವಿಷಯಗಳಾಗಿವೆ. ಹಾಗೆ ಪರಿಸರದ ಕಾಣೆ ಇಲ್ಲಿನ ಅಮೂರ್ತ ದೃಷ್ಟಿಕೋನ. ಮಾನವ ಅಥವಾ ಸೃಷ್ಟಿಯ ಸಮಸ್ತವೂ ಪರಿಸರವಾದದ ಪರಿಧಿಯಲ್ಲೇ ಚಲಿಸಿದರೂ ಅನೇಕ ಸಾರಿ ಪರಿಸರವನ್ನು ಮರೆತು ಅಥವಾ ವಿರೋಧಿಸಿ ಹೆಜ್ಜೆ ಹಾಕುವುದರ ಬಗ್ಗೆ ಇಲ್ಲಿ ಎಚ್ಚರವಿದೆ. ಹಾಗೆ ಸಮಾಜದಲ್ಲಿ ಪರಿಸರ ಸಿದ್ಧಾಂತಕ್ಕೆ ವಿರೋಧವಾದ ಕತೆಗಳಲ್ಲಿ ಹಾಗೆ ದಿಕ್ಕರಿಸಿದ ಮನೋಭಾವವನ್ನು ಲೇವಡಿ ಮಾಡುವ ಆಗಿದೆ ಎಂದರು.

ಇನ್ನೊಂದು ಕೃತಿ ಮೂಕಲಹರಿಯಲ್ಲಿ ನನ್ನ ಪಶುವೈದ್ಯಕೀಯ ವೃತ್ತಿಯಲ್ಲಿನ ವಿಶೇಷ ಘಟನೆಗಳನ್ನು ದಾಖಲಿಸಿದ್ದೇನೆ. ಸರ್ಕಾರಿ ನೌಕರನ ಪಾತ್ರ ಅವನ ನಡವಳಿಕೆ, ಅವನ ಜವಾಬ್ದಾರಿಗಳ, ಸರ್ಕಾರಿ ಅಧಿಕಾರಿಗಳ ಮತ್ತು ಸಮಾಜ ಬಾಂಧವರ ಸಂಬಂಧಗಳ, ಮಾನವೀಯತೆಯ ಪ್ರತಿಪಾದನೆ, ಭೂತದಯೆಯ ಪ್ರತಿಪಾದನೆಗಳು ಪ್ರಧಾನವಾಗಿ ದಾಖಲಾಗಿವೆ. ಪ್ರಾಣಿಗಳ ಸರ್ವತೋಮುಖ ಕಲ್ಯಾಣಕ್ಕೆ ತನ್ಮೂಲಕ ಮಾನ್ನವರ ಉಪಯೋಗಕ್ಕೆ ಪ್ರಾಣಿ ಪ್ರಪಂಚದ ಅಗತ್ಯವನ್ನು ಅನನ್ಯವಾಗಿ ಪ್ರತಿಪಾದಿಸಿದ ಚಿತ್ರಣಗಳು ಇಲ್ಲಿವೆ. ಮನುಷ್ಯರಿಗೆ ಅವುಗಳ ಬಳಕೆ ಮತ್ತು ಪರಿಸರ ಕ್ಷೇತ್ರದಲ್ಲಿ ಪರಸ್ಪರ ಸಂಬಂಧಗಳ ಒಳನೋಟವಿದೆ. ಹಾಗೆಯೇ ಮನುಷ್ಯ ಮತ್ತು ಪ್ರಾಣಿಗಳ ಸಂಬಂಧದ ಸೃಷ್ಟಿಯ ವಿವಿಧ ಆಯಾಮಗಳನ್ನು ಪರಿಶೋಧಿಸುವ ಸಂಗತಿಗಳು ಇಲ್ಲಿವೆ.

ಇಲ್ಲಿನ ಕತೆಗಳಲ್ಲಿ ಮುಖ್ಯವಾಗಿ ಪ್ರಾಣಿ ಕಲ್ಯಾಣಕ್ಕೆ ಒತ್ತು ಕೊಟ್ಟಿದ್ದರೂ ಮನುಷ್ಯ ಮತ್ತು ಪ್ರಾಣಿಗಳ ಸಂಬಂಧ, ಪರಿಸರ ಕಾಳಜಿ, ಮಾನವೀಯತೆ, ಅಂತಃಕರಣ, ನಿಷ್ಕಲ್ಮಷತೆ ಮತ್ತು ಆಡಳಿತದಲ್ಲಿ ಪ್ರಾಣಿ ಬದುಕಿನ ವಿಶೇಷತೆಗಳಿಗೆ ಗಮನ ಕೊಟ್ಟಿದ್ದೇನೆ. ಸೃಷ್ಟಿಯ ವಿಕಾಸಪಥದಲ್ಲಿ ಮನುಷ್ಯ ಅತ್ಯಂತ ತುತ್ತ ತುದಿಯಲ್ಲಿದ್ದರೂ ಅದರ ಆದಿ ಪ್ರಾಣಿಗಳೇ ಎನ್ನುವುದು ನಿಸರ್ಗ ಸತ್ಯ ಪ್ರಾಣಿಗಳು ಯೊಚಿಸಲಾರವು ಮತ್ತು ಚಿಂತಿಸಲಾರವು. ಆದರೆ ಅವುಗಳ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದು ಮತ್ತು ಅವು ನಿಷ್ಟರಾಗಿರುವುದು ಪ್ರಕೃತಿಯ ಆದೇಶಕ್ಕೆ. ಪ್ರಕೃತಿಯ ಆದೇಶದಲ್ಲಿ ಯಾವುದೇ ವ್ಯತಿರಿಕ್ತ ನಡೆ ಕಾಣಿಸುವುದಿಲ್ಲ. ಕಾಣಿಸಲಾರದು. ಹಾಗೊಂದು ವೇಳೆ ವ್ಯತಿರಿಕ್ತತೆ ಉಂಟಾದರೆ ಪ್ರಕೃತಿಯಲ್ಲಿ ಅಲ್ಲೋ ಕಲ್ಲೋಲ ಉಂಟಾಗುತ್ತದೆ. ಇದನ್ನು ತಡೆಯಬೇಕೆಂದರೆ ಪ್ರಾಣಿಗಳ ನಡೆಯಲ್ಲಿ ವ್ಯತಿರಿಕ್ತತೆ ಉಂಟಾಗಬಾರದು ಹೀಗಾದಾಗ ಪ್ರಾಣಿಗಳು ಜೀವಜಾಲವನ್ನು ಸುಗಮವಾಗಿ ಕಾಪಾಡಿಕೊಂಡು ಹೋಗುತ್ತವೆ. ಆದ್ದರಿಂದಲೇ ಮಾನವನಿಗ ಇಂದೂ ಪ್ರಾಣಿಗಳೇ ಮಾದರಿ ಎನ್ನುವ ಮಾತು ಅತಿಶಯೋಕ್ತಿಯಲ್ಲಾ. ಅವುಗಳ ನಡೆಯಲ್ಲಿ ತಪ್ಪುಗಳೇನಾದರೂ ಉಂಟಾದರೆ ಅದು ಮನುಷ್ಯನ ಹಸ್ತಕ್ಷೇಪದಿಂದ ಮಾತ್ರ ಅಂತಹ ಎಲ್ಲಾ ಕ್ರಿಯೆಗಳು ಇಂದು ನಮ್ಮೆದುರಿಗೆ ಕಾಣಿಸುತ್ತಿವೆ. ಅದನ್ನು ತಡೆಯುವಲ್ಲಿ ಮನುಷ್ಯನ ಪಾತ್ರ ಅತಿ ಮುಖ್ಯ ಅದರೂ ಮನುಷ್ಯ ಸುಧಾರಣೆ ಕಂಡಿಲ್ಲಾ ಎನ್ನುವುದು ವಾಸ್ತವ ಅಂತಿಮವಾಗಿ ಪ್ರಾಣಿಗಳ ಗುಣದಲ್ಲಿ ಮೇಲು ಮಾನವನದಕಿಂತ ಕೀಳು ಎನ್ನುವ ಕವಿವಾಣಿ ಇಲ್ಲಿ ಸಾಫಲ್ಯತೆಯನ್ನು ಕಂಡಿದೆ. ಇಲ್ಲಿನ ಎಲ್ಲಾ ಕತೆಗಳು ಈ ಸತ್ಯವನ್ನು ಹೇಳುವ ದಿಕ್ಕಿನಲ್ಲಿ ಸಾಗಿವೆ ಎನ್ನಬಹುದಾಗಿದೆ.

ಎರಡೂ ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ಸಾಹಿತಿಗಳೂ ಹಾಗೂ ಸಂಸ್ಕೃತಿಚಿಂತಕರಾದ ಮೈಸೂರಿನ ಪೊಫೆಸ್ಸರ್ ಕಾಳೇಗೌಡ ನಾಗವಾರರು ಉದ್ಘಾಟಿಸುತ್ತಾರೆ. ಚಿತ್ರದುರ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳೂ ಹಾಗೂ ಸಾಹಿತಿಗಳಾದ ಬಿ.ಟಿ.ಕುಮಾರಸ್ವಾಮಿಯವರು ಕೃತಿಗಳನ್ನು ಲೋಕಾರ್ಪಣೆ ಗೊಳಿಸಲಿದ್ದಾರೆ. ಅಧ್ಯಕ್ಷತೆ ಅಭಿರುಚಿಯ ಸಹ ಸಂಚಾಲಕರು ಹಾಗೂ ಸಾಹಿತಿಗಳಾದ ಸಿ.ಸೋಮಶೇಖರಯ್ಯನವರು ವಹಿಸಲಿದ್ದಾರೆ.ಕಂಡುಂಡ ಕಥೆಗಳು ಕೃತಿಯನ್ನು ಕುರಿತು ಜಿಲ್ಲೆಯ ಖ್ಯಾತ ಸಾಹಿತಿಗಳಾದ ಪ್ರೊ.ಬಿ.ಪಿ. ವೀರೇಂದ್ರಕುಮಾರ್ ಮತ್ತು ಮೂಕಲಹರಿ ಕೃತಿಯನ್ನು ಕುರಿತು ಸಾಹಿತಿಗಳೂ ಹಾಗೂ ಹೋರಾಟಗಾರರಾದ ಬೆಂಗಳೂರಿನ ಮಂಜುನಾಥ್ ಎಂ.ಅದ್ದೆಯವರು ಮಾತನಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಪಶುವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷರಾದ ಡಾ.ಶಿವಶರಣಪ್ಪ ಯಲಗೋಡು, ಕನ್ನಡ ಪಶುವೈದ್ಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಸ್.ಬಿ.ರವಿಕುಮಾರ್, ಕರ್ನಾಟಕ ಪಶುವೈದ್ಯಕೀಯ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಡಾ.ಎಸ್.ಕಲ್ಲಪ್ಪನವರು ಹಾಗೂ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರದ ಪ್ರಾಧ್ಯಾಪಕರಾದ ಸಿ.ಜಿ.ಲಕ್ಷ್ಮೀಪತಿಯವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಹಿತಿಗಳಾದ ಪ್ರೊ:ಲಿಂಗಪ್ಪ ಎಚ್., ಶ್ರೀಮತಿ ಶೈಲಾಜಯಕುಮಾರ್ ಹಾಗೂ ಬೆಳಗಟ್ಟನಾಗರಾಜರನ್ನು ಸನ್ಮಾನಿಸಲಾಗುತ್ತಿದೆ ಎಂದರು.

ಗೋಷ್ಟಿಯಲ್ಲಿ ದಾಸೇಗೌಡ, ಗೋವಿಂದರಾಜು, ಯೂಸೆಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement
Tags :
bengaluruchitradurgadedicatedDr. Doddamallaiahpublicsuddionesuddione newsಕೃತಿಗಳುಚಿತ್ರದುರ್ಗಡಾ.ದೊಡ್ಡಮಲ್ಲಯ್ಯಬೆಂಗಳೂರುಲೋಕಾರ್ಪಣೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article