For the best experience, open
https://m.suddione.com
on your mobile browser.
Advertisement

ಚಿತ್ರದುರ್ಗದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಪಂಚರಾತ್ರೋತ್ಸವ : ಇಲ್ಲಿದೆ ಕಾರ್ಯಕ್ರಮಗಳ ವಿವರ

05:15 PM Aug 14, 2024 IST | suddionenews
ಚಿತ್ರದುರ್ಗದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಪಂಚರಾತ್ರೋತ್ಸವ   ಇಲ್ಲಿದೆ ಕಾರ್ಯಕ್ರಮಗಳ ವಿವರ
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ, ಆ.14 : ಶ್ರೀ ಗುರುಸಾರ್ವಭೌಮರು ಮಂತ್ರಾಲಯ ಮಹಾಕ್ಷೇತ್ರದಲ್ಲಿ ಸಶರೀರರಾಗಿ ಬೃಂದಾವನ ಪ್ರವೇಶ ಮಾಡಿದ ಸ್ಮರಣಾರ್ಥವಾಗಿ ಆಚರಿಸುವ 353ನೇ ಆರಾಧನಾ ಪಂಚರಾತ್ರೋತ್ಸವ ಆಗಸ್ಟ್. 20ರಿಂದ 22 ರವರೆಗೆ ಈ ಮೂರು ದಿನಗಳಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ನಡೆಸಲು ಸಂಕಲ್ಪಿಸಲಾಗಿದೆ.

ಮಂತ್ರಾಲಯದ ಮಹಾಪ್ರಭುಗಳು, ಮಾನವ ಕಲ್ಯಾಣಕ್ಕಾಗಿ ಅವತರಿಸಿ ಜಾತಿ, ಮತ, ಪಂಥಗಳ ಭೇದವಿಲ್ಲದೆ ಆರ್ತರನ್ನು ರಕ್ಷಿಸುತ್ತಿರುವುದು ಮನೆಮಾತಾಗಿದೆ. ಇಂಥ ಮಹಾನುಭಾವರು ಐತಿಹಾಸಿಕ ಪೌರಾಣಿಕ ಪ್ರಸಿದ್ಧವಾದ ಚಿತ್ರದುರ್ಗ ನಗರಕ್ಕೆ ಆಗಮಿಸಿದಾಗ ನೀರಿನ ವೆಂಕಣ್ಣನಿಗೆ ಮೋಕ್ಷವನ್ನು ಕೊಟ್ಟುದರ ಸ್ಮಾರಕವು ಇಂದಿಗೂ ಶ್ರೀಮಠದಲ್ಲಿ ಸಾಕ್ಷಿಯಾಗಿ ನಿಂತಿದೆ. ಪಾಂಡವರು ಪೂಜಿಸಿದ ಪ್ರಾಣದೇವರು ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳು ತಮ್ಮ ಬೃಂದಾವನವು ಹೀಗಿರಬೇಕೆಂದು ಸ್ವ-ಹಸ್ತದಿಂದ ನಿರ್ಮಿಸಿ ತೋರಿಸಿದ ಮಾದರಿ ಬೃಂದಾವನದಿಂದಲೂ, ಮೊದಲು ಶ್ರೀ ಸುಮತೀಂದ್ರತೀರ್ಥರು ಪೂಜಿಸಿ, ನಂತರ 1962 ರಲ್ಲಿ ಶ್ರೀ ಸುಯಮೀಂದ್ರತೀರ್ಥರಿಂದ ಸ್ಥಿರ ಬೃಂದಾವನ ಪ್ರತಿಷ್ಠಾಪನೆಗೊಂಡು ಹಾಗೂ 1985ರಲ್ಲಿ ಶ್ರೀ ಸುಜಯೀಂದ್ರತೀರ್ಥರು ಹಾಗೂ ಶ್ರೀ ಸುಶಮೀಂದ್ರತೀರ್ಥರಿಂದ ಪುನ: ಪ್ರತಿಷ್ಠಾಪನೆಗೊಂಡು ಶ್ರೀ ರಾಘವೇಂದ್ರ ಗುರುಸಾರ್ವಭೌಮರ ವಿಶೇಷ ಸನ್ನಿಧಾನವು ಶೋಭಿಸುತ್ತಿದೆ. ಹೀಗೆ ಭಕ್ತರು ಬೇಡಿದ ಇಷ್ಟಾರ್ಥಗಳನ್ನು ಈಡೇರಿಸುವುದರಲ್ಲಿ ಪ್ರತ್ಯಕ್ಷ ಸಾಕ್ಷಿಯಾಗಿ ಶ್ರೀ ಗುರುಸಾರ್ವಭೌಮರು ಮಂತ್ರಾಲಯ ಮಹಾಕ್ಷೇತ್ರದಲ್ಲಿ ಸಶರೀರರಾಗಿ ಬೃಂದಾವನ ಪ್ರವೇಶ ಮಾಡಿದ ಸ್ಮರಣಾರ್ಥವಾಗಿ ಆಚರಿಸುವ 353ನೇ ಆರಾಧನಾ ಪಂಚರಾತ್ರೋತ್ಸವವಾಗಿದೆ.

Advertisement

353ನೇ ಆರಾಧನಾ ಮಹೋತ್ಸವದ ಕಾರ್ಯಕ್ರಮಗಳಲ್ಲಿ  ಆ.19 ನೇ ಸೋಮವಾರ ಬೆಳಗ್ಗೆ 7.30 ರಿಂದ ಋಗ್ವದ, ಯಜುರ್ವೇದ, ನಿತ್ಯ, ನೂತನ ಉಪಾಕರ್ಮ ಸಂಜೆ 6.30ರಿಂದ ಪಂಚರಾತ್ರೋತ್ಸವದ ಅಂಗವಾಗಿ ಧ್ವಜಾರೋಹಣ, ಗೋಪೂಜೆ, ಧನ-ಧಾನ್ಯ ಪೂಜೆ, ಲಕ್ಷ್ಮೀ ಪೂಜೆ, ಸ್ವಸ್ತಿ ವಾಚನ, ಮಹಾಮಂಗಳಾರತಿ. ಈ ಸಂದರ್ಭದಲ್ಲಿ ಬ್ರಾಹ್ಮಣ ಸಂಘ(ರಿ)ದ ಅಧ್ಯಕ್ಷರಾದ ಪಿ.ಎಸ್ ಮಂಜುನಾಥ್, ಕಾರ್ಯದರ್ಶಿ ದೀಪಾನಂದ ಉಪಾಧ್ಯ ಮತ್ತು ಸಹೋದರರು ಶ್ರೀ ಗುರುರಾಜ ಸೇವಾ ಸಂಘದ ಅಧ್ಯಕ್ಷರಾದ ವೇದವ್ಯಾಸಾಚಾರ್, ಶ್ರೀ ಹರಿವಾಯು ಗುರು ಸೇವಾ ಟ್ರಸ್ಟ್‍ನ ಅಧ್ಯಕ್ಷರಾದ ಟಿ.ಕೆ. ನಾಗರಾಜ್ ರಾವ್ ಭಾಗವಹಿಸಲಿದ್ದಾರೆ.

ಆ. 20ರ  ಮಂಗಳವಾರ : ಶ್ರೀ ಗುರುಸಾರ್ವಭೌಮರ ಪೂರ್ವಾರಾಧನೆ ಆ. 21ನೇ ಬುಧವಾರ : ಶ್ರೀ ಗುರುಸಾರ್ವಭೌಮರ ಮಧ್ಯಾರಾಧನೆ ಆ. 22ನೇ ಗುರುವಾರ : ಶ್ರೀ ಗುರುಸಾರ್ವಭೌಮರ ಉತ್ತರಾರಾಧನೆ ಪ್ರಾತ: 10.00 ಗಂಟೆಗೆ ಶ್ರೀ ಗುರುಸಾರ್ವಭೌಮರ ಉತ್ತರಾರಾಧನೆ ಪ್ರಯುಕ್ತ ಮಹಾರಥೋತ್ಸವವು ಚಿತ್ರದುರ್ಗದ ರಾಜಬೀದಿಗಳಲ್ಲಿ ವಿವಿಧ ಭಜನಾಮಂಡಳಿಗಳು ಹಾಗೂ ಶ್ರೀ ಗುರುಸಾರ್ವಭೌಮರ ಭಕ್ತರೊಂದಿಗೆ ಜರುಗುವುದು. ಆ 23 ನೇ ಶುಕ್ರವಾರ : ಶ್ರೀ ಸುಜ್ಞಾನೇಂದ್ರತೀರ್ಥರ ಆರಾಧನೆ, ಪವಮಾನ ಹೋಮ, ಸರ್ವಸಮರ್ಪಣೋತ್ಸವ ಕಾರ್ಯಕ್ರಮ ನಡೆಯಲಿದೆ.

ಆರಾಧನಾ ದಿನತ್ರಯಗಳಲ್ಲಿ ಬೆಳಿಗ್ಗೆ 05.30ಕ್ಕೆ ಬೆಳಿಗ್ಗೆ 07.30ಕ್ಕೆ : ನಿರ್ಮಾಲ್ಯ ಅಷ್ಟೋತ್ತರ ಸಹಿತ ಫಲಪಂಚಾಮೃತ ಅಭಿಷೇಕ ಬೆಳಿಗ್ಗೆ 09.30ಕ್ಕೆ : ಉತ್ಸವರಾಯರ ಪಾದಪೂಜೆ, ಕನಕಾಭಿಷೇಕ ಬೆಳಿಗ್ಗೆ 12.00ಕ್ಕೆ : ನೈವೇದ್ಯ, ಅಲಂಕಾರ ಪಂಕ್ತಿ, ಹಸ್ತೋದಕ, ಮಹಾಮಂಗಳಾರತಿ, ತೀರ್ಥಪ್ರಸಾದ ಬೆಳಿಗ್ಗೆ 11.00 ರಿಂದ : ಭಜನಾ ಕಾರ್ಯಕ್ರಮ ಸಂಜೆ 05.30 ರಿಂದ 07.30ವರೆಗೆ : ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ 07.30 ರಿಂದ 09.00ವರೆಗೆ : ರಜತ ರಥೋತ್ಸವ, ಸ್ವಸ್ತಿವಾಚನ, ಅಷ್ಟಾವಧಾನ, ಮಹಾಮಂಗಳಾರತಿ. ಮಹಾ ಅನ್ನಸಂತರ್ಪಣೆ (ರಾಯರ ಮಹಾಪ್ರಸಾದ) ವಿತರಿಸಲಾಗುವುದು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆ. 20 ರಂದು  ಬೆಳಿಗ್ಗೆ 11.00 ರಿಂದ ಭಜನೆ - ಶ್ರೀ ಪಾಂಡುರಂಗ ಭಜನಾ ಮಂಡಳಿ ಸಂಜೆ 5.30 ರಿಂದ 7.30 ರವರೆಗೆ ಭರತನಾಟ್ಯ ಕಾರ್ಯಕ್ರಮ ನಾಟ್ಯಶ್ರೀ ಭರತನಾಟ್ಯ ಶಾಲೆ, ಬೆಂಗಳೂರು ಇವರಿಂದ ಆ. 21 ನೇ ಬುಧವಾರ ಬೆಳಿಗ್ಗೆ 11.00 ರಿಂದ ಭಜನೆ - ಶ್ರೀ ಸಪ್ತಗಿರಿ ಭಜನಾ ಮಂಡಳಿಯವರಿಂದ ಸಾಯಂಕಾಲ 5.30 ರಿಂದ 7.30 ರವರೆಗೆ ದಾಸವಾಣಿ ಕಾರ್ಯಕ್ರಮ (ಹಿಂದುಸ್ತಾನಿ) ಶ್ರೀ ಸುಜೀತ್ ಕುಲಕರ್ಣಿ ಇವರಿಂದ ಆ. 22 ನೇ ಗುರುವಾರ ಸಾಯಂಕಾಲ 5.30 ರಿಂದ ಶ್ರೀ ರಾಘವೇಂದ್ರ ಸ್ವಾಮಿಗಳವರ ಸ್ಮರಣೆ ರೂಪಕ, ಚಿತ್ರದುರ್ಗದ ಶ್ರೀ ಗುರುರಾಜರ ಭಕ್ತರಿಂದ ಆ 23 ನೇ ಶುಕ್ರವಾರ ಬೆಳಿಗ್ಗೆ 11.00 ರಿಂದ ಭಜನೆ ಶ್ರೀ ಬ್ರಹ್ಮಚೈತನ್ಯ ಮಹಿಳಾ ಭಜನಾ ಮಂಡಳಿಯವರಿಂದ ಸಂಜೆ 5.30 ರಿಂದ 7.30ರವರೆಗೆ ಚಂಪಕ ಶ್ರೀಧರ್ ಮತ್ತು ಶಿಷ್ಯವೃಂದದವರಿಂದ ಕರ್ನಾಟಿಕ್ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಶ್ರೀ ಗುರುರಾಜರ ಆರಾಧನಾ ವೈಭವವನ್ನು ಕಂಡು ಭಕ್ತರು ಕಣ್ಮನ ತುಂಬಿಕೊಳ್ಳಬಹುದಾಗಿದೆ. ಕಾರಣ ಆಸ್ತಿಕ ಸಜ್ಜನರು ಈ ಮೂರು ದಿವಸಗಳ ಕಾಲ ಶ್ರೀಮಠಕ್ಕೆ ಆಗಮಿಸಿ ಶ್ರೀ ಗುರುರಾಜರ ದರ್ಶನ, ಸೇವಾ ಸೌಭಾಗ್ಯವನ್ನು ಪಡೆದು ಆರಾಧನಾ ಮಹೋತ್ಸವದಲ್ಲಿ ಭಾಗವಹಿಸುವಂತೆ ಭಕ್ತರಲ್ಲಿ ಮನವಿ ಮಾಡಲಾಗಿದೆ.

Advertisement
Tags :
Advertisement