Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದೊಡ್ಡ ಸಿದ್ದವ್ವನಹಳ್ಳಿಯಲ್ಲಿ ಪೋಷಣ ಮಾಸಾಚರಣೆ ಹಾಗೂ ಬಾಲ್ಯ ವಿವಾಹ ನಿಷೇಧ ಅರಿವು ಕಾರ್ಯಕ್ರಮ

06:37 PM Sep 25, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 25 : ತಾಲ್ಲೂಕಿನ ದೊಡ್ಡ ಸಿದ್ದವ್ವನಹಳ್ಳಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಪಂಚಾಯತ್ ಹಾಗೂ ಶಿಶು ಅಭಿವೃದ್ಧಿ ಯೋಜನೆ ಚಿತ್ರದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಅಂಗನವಾಡಿ ಎ ಕೇಂದ್ರದಲ್ಲಿ ಪೋಷಣ ಮಾಸಾಚರಣೆ ಹಾಗೂ ಬಾಲ್ಯ ವಿವಾಹ ನಿಷೇಧ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಜಿಲ್ಲಾ ನಿರೂಪನಾಧಿಕಾರಿಗಳಾದ ವಿಜಯಕುಮಾರ್ ಅವರು ಸೆಪ್ಟೆಂಬರ್ ಮಾಹೆನಲ್ಲಿ ಪೋಷನ್ ಮಾಸಾಚರಣೆ ಮಾಡುತ್ತೇವೆ. 8 ಥೀಮ್ ನಂತೆ ಮಾಸಾಚರಣೆಯನ್ನು ಮಾಡುವುದಾಗಿ ತಿಳಿಸಿದರು. ಬಾಲ್ಯವಿವಾಹ ದ ಕುರಿತು ಮಾತನಾಡಿದರು. ತಾಯಂದಿರಿಗೆ ಪೌಷ್ಟಿಕತೆ ಬಗ್ಗೆ ತಿಳಿಸಿದರು. ಈ ವರ್ಷದ ಘೋಷವಾಕ್ಯ ಸುಪೋಷಿತ ಕಿಶೋರಿ ಸಶಕ್ತ ನಾರಿ ಎಂದು ಹೇಳಿ ಕಿಶೋರಿಯರ ಪೌಷ್ಟಿಕತೆ ಬಗ್ಗೆ ಹೇಳಿದರು.

Advertisement

ಶ್ರೀಮತಿ ವೀಣಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಾತನಾಡಿ ಅಂಗನವಾಡಿ ಕೇಂದ್ರಗಳಲ್ಲಿ ವಿತರಿಸುತ್ತಿರುವ ಆಹಾರ ಪದಾರ್ಥಗಳನ್ನು ಫಲಾನುಭವಿಗಳು ಸರಿಯಾಗಿ ಉಪಯೋಗಿಸಿಕೊಳ್ಳಬೇಕು,ಮೊಟ್ಟೆಯು ಒಂದು ಸಂಪೂರ್ಣ ಆಹಾರವಾಗಿರುತ್ತದೆ ಮಕ್ಕಳು,ಗರ್ಭಿಣಿ ಮತ್ತು ಬಾಣಂತಿಯರು ಮೊಟ್ಟೆಯನ್ನು ಸೇವಿಸಬೇಕು ಎಂದು ತಿಳಿಸಿದರು.

ಆರೋಗ್ಯ ಇಲಾಖೆಯ ಶ್ರೀಧರ್ ಅವರು ಪೌಷ್ಟಿಕತೆ ಬಗ್ಗೆ ಹೇಳಿದರು. ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಯುತ ರಾಜಶೇಖರ್ ಅವರು ಮಾತನಾಡಿ ಬಾಲ್ಯ ವಿವಾಹ ನಿಷೇಧದ ಬಗ್ಗೆ ತಿಳಿಸಿದರು. ಶ್ರೀಮತಿ ಸುಧಾ ಗ್ರಾಮ ಪಂಚಾಯತ್ ಸದಸ್ಯರು ಮಾತನಾಡಿ ಗರ್ಭಿಣಿ ಮತ್ತು ಬಾಣಂತಿಯರ ಶುಚಿತ್ವದ ಬಗ್ಗೆ ಹೇಳಿದರು. ಅಂಗನವಾಡಿ ಕಾರ್ಯಕರ್ತೆಯರ ಪೋಷಣ್ ಮಾಸಾಚರಣೆ ಆಯೋಜಿಸಿರುವುದನ್ನು ನೋಡಿ ಶ್ಲಾಘಿಸಿದರು.

ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಶ್ರೀಮತಿ ಶೋಭಾ ನಾವಳ್ಳಿ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಗುರುಲಿಂಗಮ್ಮರವರು, ವೈದ್ಯಾಧಿಕಾರಿಗಳಾದ ಶ್ರೀಮತಿ ನಾಸಿಯಾ ಶಮಾಯ್ಲ ರವರು, ಹಿರಿಯ ಆರೋಗ್ಯ ಸಹಾಯಕರಾದ ಶ್ರೀಮತಿ ರೇಣುಕಮ್ಮ ಅವರು, ಪೋಷಣ ಅಭಿಯಾನ ಸಂಯೋಜಕಾರದ ಶ್ರೀಯುತ ಪ್ರದೀಪ್ ರವರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Advertisement
Tags :
awareness programbengalurucelebrationchild marriagechitradurgaDoddavavanahallinutritionposhan monthsuddionesuddione newsಅರಿವುಕಾರ್ಯಕ್ರಮಚಿತ್ರದುರ್ಗದೊಡ್ಡ ಸಿದ್ದವ್ವನಹಳ್ಳಿ‌ನಿಷೇಧಪೋಷಣ ಮಾಸಾಚರಣೆಬಾಲ್ಯ ವಿವಾಹಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article