Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗದಲ್ಲಿ ಮಹಾತ್ಮಗಾಂಧಿಜಿಯವರ ಪ್ರತಿಮೆ ಇಲ್ಲದಿರುವುದು ನೋವಿನ ಸಂಗತಿ : ಎ.ಎಂ.ಇಮಾಮ್ ಬೇಸರ

05:00 PM Oct 01, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 01 : ಸತ್ಯ ಮತ್ತು ಅಹಿಂಸೆಯನ್ನು ಅಸ್ತ್ರವನ್ನಾಗಿಸಿಕೊಂಡು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ದ ಹೋರಾಡಿದ ರಾಷ್ಟ್ರಪಿತ ಮಹಾತ್ಮಗಾಂಧಿಜಿಯವರ ಪ್ರತಿಮೆ ಐತಿಹಾಸಿಕ ಚಿತ್ರದುರ್ಗದಲ್ಲಿ ಎಲ್ಲಿಯೂ ಇಲ್ಲದಿರುವುದು ನೋವಿನ ಸಂಗತಿ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಎಂ.ಇಮಾಮ್ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಹೆಸರಿಗಷ್ಟೆ ಗಾಂಧಿ ಸರ್ಕಲ್ ಎಂದು ನಾಮಕರಣ ಮಾಡಲಾಗಿದೆ. ಆದರೆ ಅಲ್ಲಿ ಗಾಂಧಿಜಿ ಪುತ್ಥಳಿಯೇ ಇಲ್ಲ. ಪ್ರತಿವರ್ಷ ಅ.2 ರಂದು ಗಾಂಧಿ ಜಯಂತಿ ಆಚರಿಸಿ ಗಾಂಧಿಯನ್ನು ನೆನಪು ಮಾಡಿಕೊಂಡರೆ ಸಾಲದು. ಜಿಲ್ಲಾಡಳಿತ, ನಗರಸಭೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ನಗರದ ಮುಖ್ಯ ವೃತ್ತದಲ್ಲಿ ಗಾಂಧಿ ಪ್ರತಿಮೆಯನ್ನು ಸ್ಥಾಪಿಸಿದಾಗ ಮಾತ್ರ ನಿಜವಾಗಿಯೂ ರಾಷ್ಟ್ರಪಿತನಿಗೆ ಬಹುದೊಡ್ಡ ಗೌರವ ಸಲ್ಲಿಸಿದಂತಾಗುತ್ತದೆಂದು ಎ.ಎಂ.ಇಮಾಮ್ ಮನವಿ ಮಾಡಿದ್ದಾರೆ.

 

Advertisement
Tags :
AM ImambengaluruchitradurgaCongressmahatma gandhistatuesuddionesuddione newsಎ.ಎಂ.ಇಮಾಮ್ಕಾಂಗ್ರೆಸ್ಚಿತ್ರದುರ್ಗಪ್ರತಿಮೆಬೆಂಗಳೂರುಬೇಸರಮಹಾತ್ಮಗಾಂಧಿಜಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article