Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಯಾರೇ ಅಧಿಕಾರಕ್ಕೆ ಬಂದರೂ ಯಾರಿಂದಲೂ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ : ಡಾ.ಕೆ.ಎಂ ಸಂದೇಶ್

07:29 PM Jun 11, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಜೂ.11 :  ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ಹಿರೇಹಳ್ಳಿ ಗ್ರಾಮದಲ್ಲಿ ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ, ಡಾ.ಬಿ.ಆರ್ ಅಂಬೇಡ್ಕರ್ ರವರ 133 ನೇಯ ಜಯಂತಿ ಹಾಗೂ ಬಾಬು ಜಗಜೀವನ್ ರಾಂ ರವರ 117 ನೇ ಜಯಂತಿ ಹಾಗೂ ಪ್ರೊ.ಬಿ. ಕೃಷ್ಣಪ್ಪ ರವರ ಜಯಂತಿ ಆಚರಣೆಯನ್ನು ತುಂಬಾ ಅದ್ದೂರಿಯಾಗಿ ಆಚರಿಸಲಾಯಿತು.

Advertisement

ಈ ಕಾರ್ಯಕ್ರಮಕ್ಕೆ ಕೋಲಾರ ಜಿಲ್ಲೆಯ ದಲಿತರ ಫೈರ್ ಬ್ರಾಂಡ್ ಎಂದೇ ಖ್ಯಾತಿ ಗಳಿಸಿರುವ ಎ.ಎಸ್ ಎಸ್.ಕೆ. ಸಂಸ್ಥಾಪಕ ರಾಜ್ಯಾಧ್ಯಕ್ಷರು, ದಲಿತರ ಆಶಾ ಕಿರಣ, ಬಡವರ ಬಂಧು,ದಲಿತರ ಕಣ್ಮಣಿ,ನೊಂದ ಜೀವಗಳ ಬೆಳಕು, ರಾಜ್ಯ ದಲಿತ ಹೋರಾಟಗಾರರು ಹಾಗೂ ದ ರೊಲರ್ಸ್ ಚಲನ ಚಿತ್ರದ ನಾಯಕ ನಟರಾದ ಡಾ.ಕೆ.ಎಂ.ಸಂದೇಶ್ ರವರು ಈ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಉತ್ಸವದಲ್ಲಿ ಭಾಗಿಯಾಗಿ ರಾಜ್ಯದಲ್ಲಿ ಸಂವಿಧಾನ ಬದಲಾವಣೆಯ ಚರ್ಚೆ ತುಂಬಾ ನಡೆಯುತ್ತಿದೆ ಅಷ್ಟು ಸುಲಭವಾಗಿ ಯಾರೂ ಕೂಡ ಅದರ ಒಂದು ತುದಿಯನ್ನು ಮುಟ್ಟಲು ಸಾಧ್ಯವಿಲ್ಲ ಹಾಗಾಗಿ ಬಾಬಾ ಸಾಹೇಬರು ನಮಗೆ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಎಂಬ ಆಯುಧವನ್ನು ನಮಗೆ ಕೊಟ್ಟು ಹೋಗಿದ್ದಾರೆ ಅದನ್ನು ನಾವು ಯಾವ ಕಾರಣಕ್ಕೂ ಆಸೆ ಆಕಾಂಕ್ಷೆ, ಆಮಿಷಗಳಿಗೆ ಬಲಿಯಾಗದೆ ಮತದಾನದ ಮಹತ್ವ ತಿಳಿದು ನಾವು ಒಗ್ಗಟ್ಟಾಗಿ ಮತ ಚಲಾಯಿಸಿದ್ದಲ್ಲಿ ನಾವು ಆ ಯುದ್ದಲ್ಲಿ ಗೆಲ್ಲುತ್ತೇವೆ, ಈ ನಮ್ಮ ಭಾರತ ದೇಶದಲ್ಲಿ ದಲಿತ ಸಮುದಾಯವು ಎಲ್ಲ ಸಮುದಾಯಗಳಿಗೆ ಹೋಲಿಸಿದರೆ ಅತೀ ಹೆಚ್ಚು ಜನಸಂಖ್ಯೆಯನ್ನು  ಹೊಂದಿದೆ ಆದರೂ ನಾವು ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿಲ್ಲ ಯಾಕೆ ಎಂಬುದನ್ನು ಒಮ್ಮೆ ಯೋಚಿಸಿ ನೋಡಿ ಹಾಗಾಗಿ ನಮ್ಮ ಎಲ್ಲ ದಲಿತ ಸಮುದಾಯದ ಎಲ್ಲ ಹಿರಿಯರಿಗೆ ಮತ್ತು ಯುವ ಜನತೆಗೆ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಪ್ರತಿಯೊಬ್ಬ ಪ್ರಜ್ಞಾವಂತರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಒಂದು ಮಂದಿರ ಕಟ್ಟಿಸಿದರೆ ಸಾವಿರ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ, ಒಂದು ಗ್ರಂಥಾಲಯ ಕಟ್ಟಿಸಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ" ಎಂಬ ಅಂಬೇಡ್ಕರ್ ರವರ ಮಾತು ನಾವೆಲ್ಲರೂ ಇಲ್ಲಿ ಸ್ಮರಿಸಿಕೊಳ್ಳಬೇಕು ಎಂದು ಹೇಳಿದರು.

Advertisement

ಈ  ಸಂದರ್ಭದಲ್ಲಿ ಇನ್ನೂ ಮುಂತಾದ ಅನೇಕ ಗಣ್ಯರು ಸಮಾರಂಭದಲ್ಲಿ ಅವರ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.

ಮಹಾನಾಯಕ ಸಂವಿಧಾನ ಶಿಲ್ಪಿ ಡಾ|| ಬಿ.ಆರ್ ಅಂಬೇಡ್ಕರ್ ಯುವಕ ಸಂಘ, ಕೋಡಿಹಳ್ಳಿ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರಿಂದ ಹಾಗೂ ಹಿರೇಹಳ್ಳಿ ಗ್ರಾಮದ ಅಂಬೇಡ್ಕರ್ ಯುವಕ ಸಂಘದ,ಎಲ್ಲ ಪದಾಧಿಕಾರಿಗಳು  ಸದಸ್ಯರಿಂದ ಡಾ.ಕೆ.ಎಂ ಸಂದೇಶ್ ರವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು, ಅಲ್ಲದೆ 2023-24 ಸಾಲಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ಆದ ಶ್ರೀಯುತ  ಶಿವಲಿಂಗಪ್ಪ.ಜಿ
ಉಪಾಧ್ಯಕ್ಷರಾದ ಸಿದ್ದೇಶ್.ಎಸ್ ಕಾರ್ಯದರ್ಶಿಯಾದ
ಮಲ್ಲೇಶ್. ಟಿ
ಖಜಾಂಚಿಯಾದ ಮಹೇಂದ್ರ.ಏಚ್.ಎನ್,  ದಯಾನಂದ, ನಾಗರಾಜ್ ಫೋಟೋ, ನಿವೃತ್ತ ತಹಶೀಲ್ದಾರ್ ಶ್ರೀ ಮಲ್ಲಿಕಾರ್ಜುನ್ ಮತ್ತು  ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ  ಹಿರೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಆದ ಶ್ರೀಯುತ ರಾಜಣ್ಣ.ಜಿ ಮತ್ತು  ಉಪದ್ಯಾಕ್ಷರು ಆದ ರವಿ. ಓ , ದುರುಗೇಶ್, ಇತರರು ಉಪಸ್ಥಿತರಿದ್ದರು.

ಶ್ರೀ ಬಿ.ಡಿ ನಿಂಗರಾಜು ಶ್ರೀ.ಸಿ.ಆರ್ ನವೀನ್  ಮತ್ತು ಸಂಗಡಿಗರು ಕ್ರಾಂತಿ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಹೆಚ್.ಎನ್ ಮಹೇಂದ್ರ ನಿರೂಪಿಸಿದರು, ಶ್ರೀ.ಎಂ ದುರುಗೇಶ್    ಸ್ವಾಗತಿಸಿದರು, ಟಿ.ಮಲ್ಲೇಶಪ್ಪ ವಂದಿಸಿದರು.
ದಲಿತ ಸಮುದಾಯದ ಯಜಮಾನರು, ವಿವಿಧ ಸಂಘಟನೆಗಳ ಕಾರ್ಯಕರ್ತರು,  ಮಹಿಳೆಯರು, ಯುವಕರು ಡಿ.ಜೆ. ಸೌಂಡ್ ಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು ಈ ಕಾರ್ಯಕ್ರಮವು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಅತ್ಯಂತ ಯಶಸ್ವಿಯಾಗಿ ನೆರವೇರಿತು.

Advertisement
Tags :
bengaluruchitradurgaDr KM Sandeshsuddionesuddione newsಚಿತ್ರದುರ್ಗಡಾ.ಕೆ.ಎಂ ಸಂದೇಶ್ಬೆಂಗಳೂರುಸಂವಿಧಾನ ಬದಲಾವಣೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article