ಬಸವ ಪುತ್ಥಳಿ ಯೋಜನೆಯಲ್ಲಿ ಹಣ ದುರುಪಯೋಗವಾಗಿಲ್ಲ : ಬಸವ ಪ್ರಭು ಸ್ವಾಮೀಜಿ ಸ್ಪಷ್ಟನೆ
ಬಸವ ಪುತ್ಥಳಿ ಯೋಜನೆಯಲ್ಲಿ ಹಣ ದುರುಪಯೋಗವಾಗಿಲ್ಲ : ಬಸವ ಪ್ರಭು ಸ್ವಾಮೀಜಿ ಸ್ಪಷ್ಟನೆ
No misappropriation of money in Basava Putthali project: Basava Prabhu Swamiji clarifies
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ಡಿ.15 :
ಮಾಜಿ ಸಚಿವರಾದ ಏಕಾಂತಯ್ಯರವರು ಬಸವ ಪುತ್ಥಳಿ ಯೋಜನೆಯಲ್ಲಿ ಹಣ ದುರುಪಯೋಗ ಆಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಇಲ್ಲಿ ಯಾವುದೇ ಹಣ ದುರುಪಯೋಗ ಆಗಿಲ್ಲ. ದ್ವೇಷದ ಮನೋಭಾವದಿಂದ ಈ ರೀತಿ ಮನವಿ ಸಲ್ಲಿಸಿದ್ದಾರೆ. ಇದು ಸುಳ್ಳು. ಎಂದು ಚಿತ್ರದುರ್ಗ ಬೃಹನ್ಮಠದ ಉಸ್ತುವಾರಿ ಶ್ರೀಗಳಾದ ಶ್ರೀ ಬಸವ ಪ್ರಭು ಶ್ರೀಗಳು ತಿಳಿಸಿದ್ದಾರೆ.
ಚಿತ್ರದುರ್ಗದ ಬೃಹನ್ಮಠದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಚಿತ್ರದುರ್ಗ ಜಿಲ್ಲೆ ಬರದ ಜಿಲ್ಲೆ ಬಸವ ಪುತ್ಥಳಿ ನಿರ್ಮಾಣ ಮಾಡುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ಪ್ರೇಕ್ಷಣೀಯ ಸ್ಥಳ ಮಾಡುವ ಉದ್ದೇಶವಿದೆ. ಬಸವ ಪುತ್ಥಳಿ ನಿರ್ಮಾಣದ ಯೋಜನೆ ಸುಮಾರು 10 ವರ್ಷಗಳಿಂದ ನಡೆಯುತ್ತಿದೆ. ಶ್ರೀಗಳ ಆಶಯದಂತೆ ಮಠದ ಹಿಂಭಾಗ 275 ಅಡಿ ಎತ್ತರದ ಬಸವ ಪುತ್ಥಳಿ ನಿರ್ಮಾಣವಾಗುತ್ತಿದೆ. 270 ಕೋಟಿ ರೂ ವೆಚ್ಚದಲ್ಲಿ ಬಸವ ಪುತ್ಥಳಿ ಯೋಜನೆಯ ಕಾಮಗಾರಿ ಪ್ರಾರಂಭವಾಗಿದೆ ಎಂದರು.
ಬಸವ ಪುತ್ಥಳಿ ನಿರ್ಮಾಣ ಯೋಜನೆಗೆ 05 ಜನರ ಕಮಿಟಿಯನ್ನು ರಚನೆ ಮಾಡಲಾಗಿದೆ.. ಪ್ರತಿಯೊಂದು ವೆಚ್ಚಕ್ಕೂ ರಸೀದಿಯಿದೆ.. ಯಾವುದೇ ಹಣ ದುರುಪಯೋಗ ಆಗಿಲ್ಲ.. ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ.. ಇದಕ್ಕೆ ಭಕ್ತರು ಕಿವಿಗೊಡಬಾರದು. ಜಿಲ್ಲಾಧಿಕಾರಿಗಳಿಗೆ ನೀಡಿರುವ ದೂರಿನ ಮೇರೆಗೆ ತಂಡ ಮಠಕ್ಕೆ ಬಂದಾಗ ಸಂಪೂರ್ಣ ಸಹಕಾರ ನೀಡಲಿದ್ದೇವೆ. ಈ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಇದು ಶ್ರೀಗಳ ಕನಸು.ಆಸೆ.. ಇದನ್ನು ಯಾವುದೇ ಕಾರಣಕ್ಕು ನಿಲ್ಲಿಸುವುದಿಲ್ಲ. ಕಾಮಗಾರಿ ಪ್ರಾರಂಭವಾಗಲಿದೆ.. ಶೀಘ್ರವಾಗಿ ಪೂರ್ಣಗೊಳಿಸಲಿದ್ದೇವೆ.. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸರ್ಕಾರ ಇದುವರೆವಿಗೂ 35 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು ಇದರಲ್ಲಿ 25 ಕೋಟಿ ರೂ.ಗಳನ್ನು ಇಗಾಗಲೇ ವೆಚ್ಚ ಮಾಡಲಾಗಿದೆ ಇದಕ್ಕೆ ಎಲ್ಲಾ ರೀತಿಯ ರಸೀದಿಗಳು ಇವೆ ಉಳಿದ 10 ಕೋಟಿ ಹಣ ಬ್ಯಾಂಕ್ ನಲ್ಲಿದೆ. ಸರ್ಕಾರ ಬಿಡುಗಡೆ ಮಾಡಿದ ಹಣಕ್ಕೆ ನಾವುಗಳು ಉಪಯೋಗದ ರಸೀದಿಯನ್ನು ನೀಡಿದಾಗ ಮಾತ್ರ ಬಾಕಿ ಹಣವನ್ನು ಬಿಡುಗಡೆ ಮಾಡುತ್ತದೆ ಅದೇ ರೀತಿ ನಾವು ಮಾಡಿದ್ದೇವೆ ಸರ್ಕಾರವೂ ಸಹಾ ಅದೇ ರೀತಿಯಲ್ಲಿ ಹಣವನ್ನು ಬಿಡುಗಡೆ ಮಾಡಿದೆ ಅಲ್ಲದೆ ಪ್ರತಿ 2-3 ತಿಂಗಳಿಗೊಮ್ಮೆ ಇಂಜಿನಿಯರ್‌ಗಳ ತಂಡವೂಂದು ಬಂದು ನಮ್ಮ ಕಾಮಗಾರಿಯನ್ನು ಪರಿಶೀಲಿಸುತ್ತಿದೆ ಎಂದರು.
ಗೋಷ್ಠಿಯಲ್ಲಿ 2023ರ ಶರಣ ಸಂಸ್ಕೃತಿ ಉತ್ಸವದ ಅದ್ಯಕ್ಷರಾದ ನಾಗರಾಜ್ ಸಮಾಜದ ಮುಖಂಡರಾಧ ಜಿತೇಂದ್ರ, ಪರಮೇಶ್ ಭಾಗವಹಿಸಿದ್ದರು.