Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ರಂಗಭೂಮಿ ಕಲೆಯಿಂದ ಯಾವ ಕಲೆಗಳೂ ಹೊರತಾಗಿಲ್ಲ : ಎಸ್.ಸಂದೀಪ್

05:46 PM Apr 24, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.24  : ರಂಗಭೂಮಿ ಕಲೆಯಿಂದ ಯಾವ ಕಲೆಗಳೂ ಹೊರತಾಗಿಲ್ಲ. ಸಂಗೀತ, ನಾಟಕ, ನೃತ್ಯ ಮುಂತಾದ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ರಂಗಭೂಮಿ ಹಾಸುಹೊಕ್ಕಾಗಿದೆ. ಪ್ರಶಿಕ್ಷಣಾರ್ಥಿಗಳು ರಂಗಭೂಮಿಯ ಪ್ರತಿಯೊಂದೂ ಅಂಶಗಳನ್ನು ಕಲಿಯಬೇಕು ಎಂದು ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಸಂದೀಪ್ ಅಭಿಪ್ರಾಯಪಟ್ಟರು.

Advertisement

ರಂಗಸೌರಭ ಕಲಾ ಸಂಘ ವತಿಯಿಂದ ನಗರದ ಕೋಟೆ ಮುಂಭಾಗವಿರುವ ಶ್ರೀಮತಿ ಹೇಮಾವತಿ ಕುವೆಂಪು ಶಿಕ್ಷಣ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ದ್ವಿತೀಯ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗಾಗಿ ಏರ್ಪಡಿಸಿದ್ದ ಶಿಕ್ಷಣದಲ್ಲಿ ರಂಗಭೂಮಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಶಾಲೆಯ ಆರಂಭದ ತರಗತಿಗಳು ಸಾಂಸ್ಕೃತಿಕವಾಗಿ ಪ್ರಾರಂಭಗೊಂಡು ಶಾಲಾ ವಾರ್ಷಿಕೋತ್ಸವದಿಂದ ಅಂತ್ಯಗೊಳ್ಳುತ್ತದೆ. ಮನರಂಜನೀಯವಾಗಿ ಪ್ರಶಿಕ್ಷಣಾರ್ಥಿಗಳು ಬೋಧನಾ ಪ್ರಕ್ರಿಯೆಯಲ್ಲಿ ತೊಡಗಬೇಕು. ಅದಕ್ಕೆ ಬೇಕಾದ ಸವಲತ್ತುಗಳು ರಂಗಭೂಮಿಯಿಂದ ಪಡೆಯಬಹುದು. ವೇಷಭೂಷಣ, ಪ್ರಸಾಧನ, ಪರಿಕರ, ಮುಖವಾಡ, ವರ್ಣಕಲೆ ಮುಂತಾದ ಕಸರತ್ತಿನಿಂದ ಕೂಡಿದ ಪಾಠೋಪಕರಣಗಳು ಮತ್ತು ಪೀಠೋಪಕರಣಗಳನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳಬಹುದು. ಇದರಿಂದ ಪರಿಣಾಮಕಾರಿ ಬೋಧನೆಗೆ ಉತ್ತಮ ಫಲಿತಾಂಶವನ್ನು ಕಂಡುಕೊಳ್ಳಬಹುದು ಎಂದರು.

ಪ್ರಾಚಾರ್ಯ ಡಾ.ಜಿ.ದಾಸಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಶಿಕ್ಷಣಾರ್ಥಿಗಳು ಚಟುವಟಿಕೆಯಿಂದಿರಲು ರಂಗಭೂಮಿ ಸಹಕಾರಿಯಾಗಿದೆ. ಸ್ಪಷ್ಟ ಮಾತುಕತೆ, ದೇಹದ ನಿಲುವು ಪ್ರತಿಯೊಬ್ಬ ಶಿಕ್ಷಕನ ಸಂಪತ್ತಾಗಬೇಕು ಎಂದರು.

ಉಪನ್ಯಾಸಕರಾದ ಡಾ.ಪಿ.ರಾಧಮ್ಮ, ಡಾ.ಎಂ.ಎಸ್.ಲಕ್ಷ್ಮೀದೇವಿ, ಕೆ.ತ್ರಿವೇಣಿ, ಎಂ.ಉಷಾಕಿರಣ, ಟಿ.ತಿಪ್ಪೇರುದ್ರಯ್ಯ ಹಾಗೂ ಬಿ.ಪಾತಲಿಂಗಪ್ಪ ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದರು. ನೀನಾಸಂ ಪದವೀಧರ ಹಾಗೂ ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ನಿರ್ದೇಶನದಲ್ಲಿ ದ್ವಿತೀಯ ಬಿಇಡಿ ಪ್ರಶಿಕ್ಷಣಾರ್ಥಿಗಳು ಮೂಢನಂಬಿಕೆ, ಬಾಲ್ಯವಿವಾಹ, ಮತದಾನ, ವರದಕ್ಷಿಣೆ, ಬಾಲಕಾರ್ಮಿಕ, ಅನಕ್ಷರತೆ, ಭ್ರಷ್ಟಾಚಾರ ಹಾಗೂ ಜಾತಿಪದ್ಧತಿ ನಾಟಕಗಳನ್ನು ಪ್ರದರ್ಶನ ನೀಡಿದರು. ಐಶ್ವರ್ಯ, ಗೀತಾಂಜಲಿ, ಶಿವಮ್ಮ ಪ್ರಾರ್ಥಿಸಿದರು. ಚಿತ್ರ ಸ್ವಾಗತಿಸಿದರು. ಸಂತೋಕುಮಾರಿ ನಿರೂಪಿಸಿದರು.

Advertisement
Tags :
bengaluruchitradurgaexemptS.Sandeepsuddionesuddione newsಎಸ್.ಸಂದೀಪ್ಚಿತ್ರದುರ್ಗಬೆಂಗಳೂರುರಂಗಭೂಮಿ ಕಲೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article