Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹಿರಿಯೂರು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನವಜಾತ ಶಿಶು ಪತ್ತೆ

07:25 PM Jun 07, 2024 IST | suddionenews
Advertisement

ಸುದ್ದಿಒನ್, ಹಿರಿಯೂರು, ಜೂ. 07  : ನಗರದ ಸಾರ್ವಜನಿಕ ಆಸ್ಪತ್ರೆ ಆವರಣದ ಹಿಂಭಾಗದಲ್ಲಿ ನವಜಾತ ಶಿಶು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

Advertisement

ಇತ್ತೀಚಿಗಷ್ಟೇ ಜನಿಸಿರುವ ನವಜಾತ ಶಿಶುವಾಗಿದ್ದು ಪೋಷಕರು ಶೌಚಾಲಯದ ಬಳಿ ಬಿಸಾಕಿ ಹೋಗಿದ್ದಾರೆ. ಇನ್ನು ಬಿಸಾಡಿರುವ ನವಜಾತ ಶಿಶು ಸಾವನ್ನಪ್ಪಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪುಲ್ ವೈರಲ್ ಆಗಿದೆ.

ಶೌಚಾಲಯಕ್ಕೆ ಹೋದ ವೇಳೆ, ಸ್ಥಳೀಯರು ಮಗು ಕಂಡು ಭಯಭೀತರಾಗಿದ್ದಾರೆ. ಸಾರ್ವಜನಿಕರು ವೀಡಿಯೋ ಮಾಡಿ ಹರಿ ಬಿಟ್ಟಿದ್ದಾರೆ.  ನವಜಾತ ಶಿಶು ಹೆಣ್ಣು ನವಜಾತ ಶಿಶು ಎಂದು ತಿಳಿದು ಬಂದಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹಿರಿಯೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

Advertisement
Tags :
bengaluruchitradurgahiriyurNewborn babyPublic Hospital premisessuddionesuddione newsಚಿತ್ರದುರ್ಗನವಜಾತ ಶಿಶು ಪತ್ತೆಬೆಂಗಳೂರುಸಾರ್ವಜನಿಕ ಆಸ್ಪತ್ರೆಸುದ್ದಿಒನ್ಸುದ್ದಿಒನ್ ನ್ಯೂಸ್ಹಿರಿಯೂರು
Advertisement
Next Article