Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ವಸತಿ ನಿಲಯಗಳಿಗೆ ಗುಣಮಟ್ಟದ ಆಹಾರ ನೀಡಲು ಹೊಸ ಟೆಂಡರ್ : ಸಚಿವ ಡಿ. ಸುಧಾಕರ್ ಸೂಚನೆ

07:14 PM Jan 16, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ.16 :  ಜಿಲ್ಲೆಯ ವಸತಿ ನಿಲಯಗಳಿಗೆ ಗುಣಮಟ್ಟದ ಆಹಾರ ಸಾಮಗ್ರಿ ಸರಬರಾಜು, ಪ್ರತಿ ದಿನ ತಾಜಾ ಸೊಪ್ಪು, ತರಕಾರಿ ಖರೀದಿಸುವ ವ್ಯವಸ್ಥೆಯಾಗಬೇಕು. ಇದು ಸಮರ್ಪಕವಾಗಿ ಅನುಷ್ಠಾನವಾಗಬೇಕು. ಈ ಹಿನ್ನಲೆಯಲ್ಲಿ ಹೊಸದಾಗಿ ಟೆಂಡರ್ ಕರೆಯುವಂತೆ ಸಚಿವ ಡಿ. ಸುಧಾಕರ್ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗೆ ಸೂಚನೆ ನೀಡಿದರು.

ಅಧಿಕಾರಿಗಳು ಹಾಸ್ಟೆಲ್‍ಗೆ ತೆರಳಿ ಪರಿಶೀಲಿಸಿ ವಿದ್ಯಾರ್ಥಿಗಳ ಕುಂದುಕೊರತೆ ಆಲಿಸಿ, ಅವರ ಸಮಸ್ಯೆಗಳು, ದೂರುಗಳಿಗೆ ಸ್ಪಂದಿಸಬೇಕು ಎಂದು ತಿಳಿಸಿದರು.

Advertisement

ಮಕ್ಕಳ ಊಟದಲ್ಲಿ ರಾಜಕೀಯ ಮಾಡುವಂತಹ ಟೆಂಡರ್‍ದಾರರು ನಮಗೆ ಬೇಡ. ಹೈಕೋರ್ಟ್ ಹೊಸ ಟೆಂಡರ್ ಕರೆಯಲು ತಿಳಿಸಿದೆ. ಹೀಗಾಗಿ ಹೊಸ ಟೆಂಡರ್ ಕರೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದರು. ಹಾಸ್ಟೆಲ್‍ಗೆ ಖುದ್ದು ಭೇಟಿ ನೀಡಲಾಗಿದ್ದು, ತಾಜಾ ತರಕಾರಿ, ಉತ್ತಮ ಆಹಾರ, ಪರಿಕರ ವಿತರಣೆಗೆ ನಿರ್ದೇಶನ ನೀಡಲಾಗಿದೆ ಎಂದು ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್ ತಿಳಿಸಿದರು.

Advertisement
Tags :
chitradurgaDistrict in-charge minister D. Sudhakargovernment hostelsNew tenderprovide quality foodಗುಣಮಟ್ಟದ ಆಹಾರಚಿತ್ರದುರ್ಗವಸತಿ ನಿಲಯಸಚಿವ ಡಿ.ಸುಧಾಕರ್ಹೊಸ ಟೆಂಡರ್
Advertisement
Next Article