For the best experience, open
https://m.suddione.com
on your mobile browser.
Advertisement

ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿವ್ವಳ ಲಾಭ 83 ಲಕ್ಷ : ಶಿವಕುಮಾರ್ ಪಟೇಲ್

03:47 PM Jul 21, 2024 IST | suddionenews
ವೀರಶೈವ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿವ್ವಳ ಲಾಭ 83 ಲಕ್ಷ   ಶಿವಕುಮಾರ್ ಪಟೇಲ್
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜು. 21:  ನಗರದ ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ,ಲಿ.ನಲ್ಲಿ 2023-24ನೇ ಸಾಲಿಗೆ 83,03,755.80 ರೂ.ಗಳ ನಿವ್ವಳ ಲಾಭವನ್ನು ಪಡೆದಿದ್ದು ಅದನ್ನು ಸೊಸೈಟಿ ಮತ್ತು ಸಿಬ್ಬಂದಿಯ ಕಲ್ಯಾಣದ ವಿವಿಧ ಕಾರ್ಯಕ್ರಮಗಳಿಗೆ ಹಾಗೂ ಷೇರುದಾರರಿಗೆ ಹಂಚಿಕೆಯನ್ನು ಮಾಡಲಾಗುವುದು ಎಂದು ಸೊಸೈಟಿಯ ಅಧ್ಯಕ್ಷರಾದ ಶಿವಕುಮಾರ್ ಪಟೇಲ್ ತಿಳಿಸಿದರು.

Advertisement


ನಗರದ ಪಂಚಚಾರ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 23ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸೊಸೈಟಿಯು 1734 ಸದಸ್ಯರನ್ನು ಹೊಂದಿದ್ದು, 79,46,900.00ರೂ.ಗಳನ್ನು ಷೇರು ಬಂಡವಾಳವಾಗಿ ಪಡೆದಿದೆ. ಇದ್ದಲ್ಲದೆ 13,50,58,801.00 ರೂ.ಗಳನ್ನು ಠೇವಣಿಯಾಗಿ, 5,68,41,890.00ವಿವಿಧ ಕಡೆಗಳಲ್ಲಿ ಹೊಡಿಕೆಯನ್ನು ಮಾಡಲಾಗಿದ್ದು, 20,51,05,233.00 ರೂ.ಗಳನ್ನು ದುಡಿಯುವ ಬಂಡವಾಳವಾಗಿ ಮಾಡಲಾಗಿದೆ. ಇದರೊಂದಿಗೆ 12,36,97,942.00 ರೂ.ಗಳನ್ನು ಸಾಲ ಮತ್ತು ಮುಂಗಡವಾಗಿ ನೀಡಲಾಗಿದೆ ಎಂದ ಅವರು. ಕಳೆದ ಸಾಲಿನಲ್ಲಿಯೇ ಮುಂದಿನ ಸಾಲಿನಲ್ಲಿ ಲಾಭವನ್ನು ಹೆಚ್ಚಳ ಮಾಡುವುದಾಗಿ ತಿಳಿಸಿತ್ತು ಅದರಂತೆ ಈ ಸಾಲಿನಲ್ಲಿ ಲಾಭವನ್ನು ಹೆಚ್ಚಳ ಮಾಡಲಾಗಿದೆ ಎಂದರು.


ನಮ್ಮ ಸೊಸೈಟಿಯಲ್ಲಿ ಗ್ರಾಹಕರು ನಂಬಿಕೆಯನ್ನು ಇಟ್ಟು ಈ ಸಾಲಿನಲ್ಲಿ 59 ಲಕ್ಷ ರೂ.ಗಳನ್ನು ಠೇವಣಿಯಾಗಿ ಇರಿಸಿದ್ದಾರೆ. ಈ ಸಮಯದಲ್ಲಿ ಸಮಾಜದವರು 60 ಲಕ್ಷ ರೂ.ಗಳನ್ನು ತೆಗೆದರು ಸಹಾ ಹೆಚ್ಚಿನ ಪ್ರಮಾಣದಲ್ಲಿ ಠೇವಣಿಯನ್ನು ಪಡೆಯಲಾಗಿದೆ. ಇದ್ದಲ್ಲದೆ ಸೊಸೈಟಿಯಲ್ಲಿ ಭದ್ರತಾ ಕಪಾಟು, ಚಿನ್ನಾಭರಣದ ಮೇಲೆ ಸಾಲ, ಉಳಿತಾಯ ಖಾತೆ, ಠೇವಣಿ, ಸಾಲ ವಸೂಲಾತಿಯಲ್ಲಿಯೂ ಸಹಾ ಮುಂದಿದೆ. 2015-16ರಿಂದಲೂ ಸಹಾ ಸೊಸೈಟಿಯು ಆಡಿಟ್‍ನಲ್ಲಿ ಎ. ವರ್ಗವನ್ನು ಪಡೆದಿದ್ದು, ತನ್ನ ಷೇರುದಾರರಿಗೆ ಅಂದಿನಿಂದಲೂ ಸಹಾ ಶೇ.20 ರಷ್ಟು ಡಿವಿಡೆಂಡ್‍ನ್ನು ನೀಡಲಾಗುತ್ತಿದೆ. ನಗರದ ಬಿವಿಕೆ ಬಡಾವಣೆಯಲ್ಲಿ ಸೊಸೈಟಿಯ ನಿವೇಶನ ಇದೆ. ಅದರಲ್ಲಿ ಏನನ್ನು ನಿರ್ಮಾಣ ಮಾಡಬೇಕೆಂದು ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷರಾದ ಶಿವಕುಮಾರ್ ಸದಸ್ಯರು ಅಭಿಪ್ರಾಯವನ್ನು ಕೇಳಿದಾಗ ಹಲವಾರು ಸದಸ್ಯರು ವಿವಿಧ ರೀತಿಯ ಅಭಿಪ್ರಾಯಗಳನ್ನು ಮಂಡಿಸಿದರು.


ಇದರಲ್ಲಿ ಸಮುದಾಯಭವನ, ಗೋದಾಮು, ಕಾಂಪ್ಲೆಕ್ಸ್, ಕಲ್ಯಾಣ ಮಂಟಪವನ್ನು ನಿರ್ಮಾಣ ಮಾಡುವಂತೆ ತಿಳಿಸಿದಾಗ ಅಂತಿಮವಾಗಿ ನಿರ್ಮಾಣವನ್ನು ಸೊಸೈಟಿಯ ಆಡಳಿತ ಮಂಡಳಿಯ ತೀರ್ಮಾನಕ್ಕೆ ಬಿಡಲಾಯಿತು.

ಸೊಸೈಟಿಯು ಮುಂದಿನ ದಿನದಲ್ಲಿ 25 ವರ್ಷ ತುಂಬಲಿದೆ, ಇದರ ಕಾರ್ಯಕ್ರಮಕ್ಕೆ ಈಗಿನಿಂದಲೇ ಹಣವನ್ನು ತೆಗೆದಿರಿಸಲಾಗಿದೆ, ಈ ಸಾಲಿನಲ್ಲಿಯೂ ಸಹಾ ಹಣವನ್ನು ತೆಗೆಯಲಾಗಿದೆ. ಸರ್ವ ಸದಸ್ಯರ ಸಭೆಯೂ 2023-24ನೇ ಸಾಲಿನ ಆಯವ್ಯಯಕ್ಕಿಂತ ಹೆಚ್ಚಿಗೆ ಆಗಿದ್ದಕ್ಕೆ ಹಾಗೂ 2024-25ನೇ ಸಾಲಿನ ಆಯ-ವ್ಯಯಕ್ಕೆ ಸರ್ವ ಸದಸ್ಯರ ಸಭೆ ಅನುಮೋದನೆಯನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುನಲ್ಲಿ ಶೇ.80ಕ್ಕಿಂತ ಹೆಚ್ಚಿಗೆ ಅಂಕವನ್ನು ಪಡೆದ ಸೊಸೈಟಿಯ ಷೇರುದಾರರ ಮಕ್ಕಳನ್ನು ಸನ್ಮಾನಿಸಲಾಯಿತು. ಕಳೆದ ಒಂದು ವರ್ಷದಲ್ಲಿ ನಿಧನರಾದ ಸೊಸೈಟಿಯ ಷೇರುದಾರರಿಗೆ ಒಂದು ನಿಮಿಷ ಮೌನವನ್ನು ಆಚರಿಸ ಸಂತಾಪ ಸೂಚಿಸಲಾಯಿತು.

ಸೊಸೈಟಿಯ ನಿರ್ದೇಶಕರಾದ ಆರ್, ಶೈಲಜಾ ಪ್ರಾರ್ಥಿಸಿದರೆ, ಉಪಾಧ್ಯಕ್ಷರಾದ ಜಿ.ಟಿ.ಸುರೇಶ್ ಸ್ವಾಗತಿಸಿದರು. ವ್ಯವಸ್ಥಾಪಕರಾದ ಶ್ರೀಮತಿ ಕುಸುಮ ಜವಳಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸೊಸೈಟಿಯ ನಿರ್ದೇಶಕರಾದ ಎಸ್.ಪರಮೇಶ್ವರಪ್ಪ, ಎಸ್.ವಿ.ನಾಗರಾಜ್, ಎಸ್.ಷಣ್ಮುಖಪ್ಪ, ಬಿ.ಎಂ.ಕರಿಬಸವಯ್ಯ, ಸಿ.ಚಂದ್ರಪ್ಪ, ಶ್ರೀಮತಿ ಜಯಶ್ರೀ ಭಾಗವಹಿಸಿದ್ದರು.

Tags :
Advertisement