For the best experience, open
https://m.suddione.com
on your mobile browser.
Advertisement

ಭಯದಿಂದ ಭಕ್ತಿ, ಜ್ಞಾನ, ವೈರಾಗ್ಯ : ಶತಾಯುಷಿ ಹೊನ್ನೂರ್ ಸಾಬ್

06:10 PM Sep 08, 2024 IST | suddionenews
ಭಯದಿಂದ ಭಕ್ತಿ  ಜ್ಞಾನ  ವೈರಾಗ್ಯ   ಶತಾಯುಷಿ ಹೊನ್ನೂರ್ ಸಾಬ್
Advertisement

ಸುದ್ದಿಒನ್, ಚಿತ್ರದುರ್ಗ, ಸೆಪ್ಟಂಬರ್. 08 : ಭಯದಿಂದ ಭಕ್ತಿ ಉದಯಿಸುತ್ತದೆ. ಭಕ್ತಿಯಿಂದ ಜ್ಞಾನ ಸಿದ್ದಿಯಾಗುತ್ತದೆ. ಜ್ಞಾನದಿಂದ ವೈರಾಗ್ಯ ಉಂಟಾಗಿ ಈ ಬದುಕನ್ನು ಸಾರ್ಥಕಗೊಳಿಸುತ್ತದೆ ಎಂದು ಶತಾಯುಷಿ, ಸಂಸ್ಕ್ರತಿ ಚಿಂತಕ, ನಿವೃತ್ತ ಶಿಕ್ಷಕ ಹೊನ್ನೂರುಸಾಬ್ ತಿಳಿಸಿದರು.

Advertisement
Advertisement

ಅವರು ತಾಲ್ಲೂಕಿನ ಭರಮಸಾಗರ ಹೋಬಳಿ ನವಗ್ರಾಮ ನೆಲ್ಲಿಕಟ್ಟೆಯಲ್ಲಿ ಏರ್ಪಡಿಸಿದ್ದ ನೆಲ್ಲಿಕಟ್ಟೆ ಮಾರಕ್ಕಮಾತೆ ಜ್ಞಾನಸಿರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

Advertisement

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು ಹೆತ್ತಹೊತ್ತವರ ಸಾಕುವುದರೊಳಗೆ ಜೀವನ ತೃಪ್ತಿಯಿದೆ. ಅಂತಹ ಸಂತೃಪ್ತ ಜೀವನ ಮಾರಕ್ಕಮಾತೆಯ ಮಕ್ಕಳದು. ಆ ಮಹಾತಾಯಿಯ ಹೆಸರನ್ನು ಚಿರಾಯುವಾಗಿಸಲಾಗಿದೆ ಎಂದರು.

Advertisement

ನೆಲ್ಲಿಕಟ್ಟೆ ಮಾರಕ್ಕ ಮಾತೆ ಸಂಗೀತ ಸಿರಿ ಪ್ರಶಸ್ತಿಯನ್ನು ಅನನ್ಯಕಲಾವಿದ ಬಸವರಾಜ್ ಹುಲ್ಲೆಹಾಳು ಅವರಿಗೆ ಪ್ರದಾನ ಮಾಡಿದ ಯುಗ ಧರ್ಮ ರಾಮಣ್ಣ ಅವರು ಈ ಲೋಕದ ಸಂಕಟಗಳಿಂದ ಪಾರಾಗಲು ಜನಸೇವೆಯು ಸರಿದಾರಿ ತೋರಿಸುವುದು ಎಂದರು.

Advertisement

ಬೆಳಗಟ್ಟದ ಕರಿಬಸವೇಶ್ವರಜ್ಜಯ್ಯಸ್ವಾಮಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಅಮ್ಮಮಹದೇವಮ್ಮ ಅವರು ಅಧ್ಯಕ್ಷತೆ ವಹಿಸಿದ್ದರು. ದಿವ್ಯಸಾನಿದ್ಯ ವಹಿಸಿ ಮಾತಾಡಿದ ಬಸವನಾಗೀದೇವಶರಣರು ಆಶೀರ್ವಾದದ ನುಡಿಗಳ್ಳನ್ನಾಡಿದರು.

ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಅತಿಥಿ ಪ್ರಹ್ಲಾದ್ ಜೆ.ನಾಡಿಗ್ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ನವೀನ್ ನಿರೂಪಿಸಿದರು. ಸಿ.ಎಂ.ನೇತ್ರಾವತಿ ವಂದಿಸಿದರು.

Tags :
Advertisement