Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಬಳಿ ಅನಾಮಧೇಯ ಶವ ಪತ್ತೆ : ವಾರಸುದಾರರ ಪತ್ತೆಗೆ ಮನವಿ

05:45 PM Dec 20, 2023 IST | suddionenews
Advertisement

 

Advertisement

ಚಿತ್ರದುರ್ಗ. ಡಿ.20:  ನಗರದ ಜಿಲ್ಲಾ ಆಸ್ಪತ್ರೆಯ ಪಾರ್ಕ್ ಹಿಂಭಾಗ ಸುಮಾರು 35 ರಿಂದ 40 ವರ್ಷದ ಗಂಡಸಿನ ಅನಾಮಧೇಯ ಶವ ಪತ್ತೆಯಾಗಿರುವ ಪ್ರಕರಣ 2023ರ ಡಿ.15 ರಂದು ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಸುಮಾರು 35-40 ವರ್ಷ, ಸುಮಾರು 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ತಲೆಯಲ್ಲಿ ಸುಮಾರು 2 ಇಂಚು ಕಪ್ಪು ಕೂದಲು, ಕುರುಚಲು ಗಡ್ಡ, ವ್ಯಕ್ತಿಯ ಮೈಮೇಲೆ ಕ್ರೀಮ್‍ಬಣ್ಣದ ಸಣ್ಣ ಚೆಕ್ಸ್‍ವುಳ್ಳ ಅರ್ಧತೋಳಿನ ಶರ್ಟ್, ನೀಲಿ ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದಾನೆ.

Advertisement

ಮೃತ ಅನಾಮಧೇಯ ವ್ಯಕ್ತಿಯ ವಿಳಾಸ ಪತ್ತೆಯಾಗದ ಕಾರಣ ಜಿಲ್ಲಾ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ಈ ಗಂಡಸಿನ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ನಗರ ಪೊಲೀಸ್ ಠಾಣೆ 9480803146, ಜಿಲ್ಲಾ ಕಂಟ್ರೋಲ್ ರೂಂ 9480803100 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಚಿತ್ರದುರ್ಗ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Tags :
anonymousappealchitradurgadead bodyDistrict hospitalsuddioneಅನಾಮಧೇಯಚಿತ್ರದುರ್ಗಜಿಲ್ಲಾ ಆಸ್ಪತ್ರೆಪತ್ತೆಮನವಿವಾರಸುದಾರರುಶವಸುದ್ದಿಒನ್
Advertisement
Next Article