Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಜಿ.ಎಸ್.ಮಂಜುನಾಥ್ ಹಾಗೂ ವೇಣುಗೋಪಾಲ‌ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವಂತೆ ಎನ್.ಡಿ.ಕುಮಾರ್ ಒತ್ತಾಯ

06:19 PM May 25, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಮೇ. 25 :  ಕಾಂಗ್ರೆಸ್ ವಿಭಾಗದ ಅಸಂಘಟಿತ ಕಾರ್ಮಿಕರ ರಾಜ್ಯಧ್ಯಕ್ಷರಾದ ಜಿ.ಎಸ್.ಮಂಜುನಾಥ್ ಹಾಗೂ ವೇಣುಗೋಪಾಲರವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವಂತೆ

Advertisement

 

ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರಾದ ಎನ್.ಡಿ.ಕುಮಾರ್ ಕಾಂಗ್ರೆಸ್ ಮುಖಂಡರನ್ನು ಒತ್ತಾಯಿಸಿದ್ದಾರೆ.

ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು, ಜಿ.ಎಸ್.ಮಂಜುನಾಥ್ರವರು ಹಲವಾರು ವರ್ಷಗಳ ಕಾಲ ಕಾಂಗ್ರೆಸ್ನಲ್ಲಿ ಸಕ್ರಿಯವಾಗಿ ಕಾರ್ಯಕರ್ತರಾಗಿ ಸೇವೆಯನ್ನು ಮಾಡಿದ್ದಾರೆ ಅಲ್ಲದೆ ಪಕ್ಷದಲ್ಲಿ ವಿವಿಧ ರೀತಿಯ ಹುದ್ದೆಗಳನ್ನು ನಿರ್ವಹಿಸಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ಒತ್ತು ನೀಡಿದ್ದಾರೆ. ಇವರು ಪದವೀಧರರಾಗಿದ್ದು, ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದವರಾಗಿದ್ದಾರೆ.

ವಿದ್ಯಾರ್ಥಿಯಿಂದಲೂ ಸಹಾ ವಿದ್ಯಾರ್ಥಿ ಕಾಂಗ್ರೆಸ್, ಯುವ ಕಾಂಗ್ರೆಸ್ ಮುಖಾಂತರ ಸುಮಾರು ಕಳೆದ 36 ವರ್ಷಗಳಿಂದಲೂ ಕಾಂಗ್ರೆಸ್ನಲ್ಲಿ ಸಕ್ರಿತವಾಗಿ ಇದ್ದಾರೆ.

ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದಾರೆ. ಇದ್ದಲ್ಲದೆ ಅನೇಕ ಚುನಾವಣೆಗಳಲ್ಲಿ ಆವಕಾಶ ವಂಚಿತರಾಗಿದ್ದಾರೆ. ಕಳೆದ 8 ವರ್ಷಗಳಿಂದ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈಗ ಕಾಂಗ್ರೆಸ್ ಪಕ್ಷದ ಆಸಂಘಟಿತ ಕಾರ್ಮಿಕ ವಿಭಾಗದಲ್ಲಿ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರಿಂದ ಕನಿಷ್ಠ 20,ಸಾವಿರಕ್ಕೂ ಹೆಚ್ಚು ಕುಟುಂಬಗಳು ನಿಮ್ಮದಿಯ ಜೀವನವನ್ನು ನಡೆಸುತ್ತಿವೆ. ಅವರ ಜೀವನಕ್ಕೆ ಭದ್ರತೆÀಯನ್ನು ಕಲ್ಪಿಸಿದ್ದಾರೆ. ರಾಜ್ಯದಲ್ಲಿ ಈಗಲೂ ಸಹಾ ಅವರು ಅಭೀಮಾನಿ ಬಳಗವನ್ನು ಹೊಂದಿದ್ದು ಅವರಿಂದ ಸಮಾಜ ಸೇವೆಯ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.

ಎಲ್ಲಾ ಸಮಾಜದವರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಶಕ್ತಿ ಇವರಿಗಿದೆ.  ಅತಿ ಹಿಂದುಳಿದ ಸೂಕ್ಷ್ಮ ಅತಿ ಸೂಕ್ಷ್ಮ ಜನಾಂಗದವನ್ನು ಗುರುತಿಸಿ ಅವರನ್ನು ಮೇಲೆತ್ತುವ ಜಾಣ್ಮೆ ಇದೆ ಜಿಲ್ಲೆಯಲ್ಲಿ ಯಾವುದೇ ಸಂಘಟನೆ ಬಂದರೂ ಸಹಾ ಜಿ.ಎಸ್.ಮಂಜುನಾಥ್ ರವರ ಹೆಸರು ಮುಂಚೂಣಿಯಲ್ಲಿರುತ್ತದೆ ಎಂದಿದ್ದಾರೆ.

ಸವಿತಾ ಸಮಾಜದ ಮುಖಂಡರಾದ ವೇಣುಗೋಪಾಲರವರನ್ನು ಸಹಾ ಕಾಂಗ್ರೆಸ್ ಪಕ್ಷ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕಿದೆ, ಇವರು ಸಹಾ ಅತಿ ಹಿಂದುಳಿದ ಜಾತಿಯಾದ ಸವಿತಾ ಸಮಾಜದ ಮುಖಂಡರಾಗಿದ್ದಾರೆ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಸಿದ್ದಾಂತವಾದ ಸಮಬಾಳು ಸಮಪಾಲು ಅಡಿಯಲ್ಲಿ ಇವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕಿದೆ ಎಂದು ಎನ್.ಡಿ.ಕುಮಾರ್ ಒತ್ತಾಯಿಸಿದ್ದಾರೆ.

Advertisement
Tags :
bengaluruchitradurgaGS Manjunathamembers of Legislative Councilnd kumarsuddionesuddione newsurgesvenugopalಎನ್.ಡಿ.ಕುಮಾರ್ಒತ್ತಾಯಚಿತ್ರದುರ್ಗಜಿ.ಎಸ್.ಮಂಜುನಾಥ್ಬೆಂಗಳೂರುವಿಧಾನ ಪರಿಷತ್ ಸದಸ್ಯವೇಣುಗೋಪಾಲಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article