Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ನಾಟ್ಯ ರಂಜನಿ ನೃತ್ಯ ಕಲಾ ಕೇಂದ್ರ ಕಲೆ ಉಳಿಸಿ ಬೆಳೆಸುವ ಕೆಲಸ ಸ್ತುತ್ಯಾರ್ಹ : ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ

09:07 PM Dec 17, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 17 : ಕಲೆ, ಸಾಹಿತ್ಯ, ನಾಟ್ಯಗಳು ನಶಿಸಿ ಹೋಗುತ್ತಿರುವ ಇಂದಿನ ಆಧುನಿಕ ಕಾಲದಲ್ಲಿ ನಾಟ್ಯ ರಂಜನಿ ನೃತ್ಯ ಕಲಾ ಕೇಂದ್ರ ಕಳೆದ 25 ವರ್ಷಗಳಿಂದಲೂ ಕಲೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿರುವುದು ಸ್ತುತ್ಯಾರ್ಹ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement


ನಾಟ್ಯ ರಂಜನಿ ನೃತ್ಯ ಕಲಾ ಕೇಂದ್ರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ತ.ರಾ.ಸು.ರಂಗಮಂದಿರದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಕಲಾ ಕೇಂದ್ರದ ರಜತ ಮಹೋತ್ಸವದ ನಾಟ್ಯ ರಂಜನಿ ನೃತ್ಯ ಹಬ್ಬ-2024 ಉದ್ಘಾಟಿಸಿ ಮಾತನಾಡಿದರು.

 

ಮೊಬೈಲ್, ಟಿ.ವಿ. ಹಾವಳಿಗಳ ನಡುವೆ ಭಾರತೀಯ ಸಂಸ್ಕøತಿ ನಾಟ್ಯ ಕಲೆಯನ್ನು ರಕ್ಷಿಸಿದರೆ ಕಲಾವಿದರು ಉಳಿಯುತ್ತಾರೆ. ಇದಕ್ಕಾಗಿ ಸರ್ಕಾರದ ವತಿಯಿಂದ ನಮ್ಮ ಪ್ರೋತ್ಸಾಹವಿರುತ್ತದೆ. ಎಲ್ಲಿಯಾದರೂ ಸಿ.ಎ. ಸೈಟ್‍ಗಳಿದ್ದರೆ ಮಕ್ಕಳ ತರಬೇತಿಗೆ ಅವಕಾಶ ಮಾಡಿಕೊಡುವುದಾಗಿ ಅಪರ ಜಿಲ್ಲಾಧಿಕಾರಿ ಭರವಸೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಮಾತನಾಡಿ ಕೋಟೆ ನಾಡು ಚಿತ್ರದುರ್ಗದಲ್ಲಿ ರಾಜರು ಕೇವಲ ಆಳ್ವಿಕೆ ನಡೆಸಿರುವುದಷ್ಟೆ ಅಲ್ಲ. ಕಲೆ, ಸಾಹಿತ್ಯ, ನಾಟ್ಯ, ಸಂಸ್ಕøತಿಗೂ ಅವಕಾಶವಿತ್ತು. ನಾಟ್ಯ ರಂಜನಿ ಕಲಾ ಕೇಂದ್ರದ ಕಿರಣ್‍ರವರು ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಅಮೋಘವಾದ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತರುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ತರಬೇತಿ ಪಡೆದಿರುವ ಮಕ್ಕಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆದಿದ್ದಾರೆ. ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದೆಂದರು.

 

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್.ಮಂಜುನಾಥ್ ಮಾತನಾಡುತ್ತ ನಾಟ್ಯ ರಂಜನಿ ನೃತ್ಯ ಕಲಾ ಕೇಂದ್ರದ ಜಿ.ಕಿರಣ್‍ರವರು ಇಪ್ಪತ್ತೈದು ವರ್ಷಗಳಿಂದ ಪ್ರತಿ ವರ್ಷವೂ ನಾಟ್ಯ ರಂಜನಿ ಹಬ್ಬವನ್ನು ಆಚರಿಸಿಕೊಂಡು ಬರುತ್ತಿರುವುದರ ಹಿಂದೆ ಅಪಾರ ಪರಿಶ್ರಮವಿದೆ. ಮಕ್ಕಳಿಗೆ ನಾಟ್ಯ ತರಬೇತಿ ನೀಡಲು ನಿರ್ಧಿಷ್ಟವಾಧ ನೆಲೆಯಿಲ್ಲ. ಹಾಗಾಗಿ ಸರ್ಕಾರದ ವತಿಯಿಂದ ಎಲ್ಲಿಯಾದರೂ ಜಾಗದ ಅವಕಾಶ ಮಾಡಿಕೊಡುವಂತೆ ಜಿಲ್ಲಾಡಳಿತವನ್ನು ಕೋರಿದರು.

 

ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಆಯುಕ್ತೆ ಎಲ್.ಸವಿತಾ ಶಿವಕುಮಾರ್ ಮಾತನಾಡಿ ಕಲಾವಿದರ ಸ್ಥಿತಿ ಶೋಚನೀಯವಾಗಿದೆ. ಕಲೆ ಮತ್ತು ಕಲಾವಿದರು ಉಳಿಯಬೇಕಾಗಿರುವುದರಿಂದ ಸರ್ಕಾರ ಎಲ್ಲಾ ರೀತಿಯ ನೆರವು ನೀಡಬೇಕೆಂದು ಮನವಿ ಮಾಡಿದರು.
ಇಬ್ಬರು ಮೃದಂಗ ಬಡ ಕಲಾವಿದರನ್ನು ಸನ್ಮಾನಿಸಿ ಮಾತನಾಡಿದ ನಾಟ್ಯ ರಂಜನಿ ನೃತ್ಯ ಕಲಾ ಕೇಂದ್ರದ ಜಿ.ಕಿರಣ್ ಕಲಾವಿದರ ಬದುಕು ಶೋಚನೀಯವಾಗಿದೆ. ಸರ್ಕಾರದಿಂದ ಯಾವುದೇ ರೀತಿಯ ನೆರವು ಸಿಗುತ್ತಿಲ್ಲ. ಬಡ ಕಲಾವಿದರು ವೃದ್ದಾಪ್ಯ ಕಾಲದಲ್ಲಿ ನೆಮ್ಮದಿಯಾಗಿ ಬದುಕಬೇಕಾದರೆ ಸರ್ಕಾರ ಸೌಲಭ್ಯಗಳನ್ನು ನೀಡಬೇಕೆಂದು ಅಪರ ಜಿಲ್ಲಾಧಿಕಾರಿಯವರಲ್ಲಿ ವಿನಂತಿಸಿದರು.

 

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್, ಕ್ರಿಯೇಟಿವ್ ಸ್ಟುಡಿಯೋ ಚಿತ್ರಕಲಾವಿದ ಟಿ.ಎಂ.ವೀರೇಶ್ ವೇದಿಕೆಯಲ್ಲಿದ್ದರು.
ಕನ್ನಡದ ಖ್ಯಾತ ಭಾವಗೀತೆಗಳ ಆಧಾರಿತ ವಿಶೇಷ ನೃತ್ಯ ರೂಪಕ ರಾಧ-ಕೃಷ್ಣರ ವಿರಹಗಾತೆ, ಶಿವನ ಸಪ್ತ ತಾಂಡವಗಳ ನೃತ್ಯ ರೂಪಕ ನವಶಕ್ತಿ ವೈಭವ ನಾಟ್ಯಗಳು ಪ್ರದರ್ಶನಗೊಂಡವು.

Advertisement
Tags :
Additional District CollectorbengaluruBT KumaraswamychitradurgaNatya RanjaniNritya Kala Kendrasuddionesuddione newsಅಪರ ಜಿಲ್ಲಾಧಿಕಾರಿಎಡಿಸಿ ಬಿ.ಟಿ.ಕುಮಾರಸ್ವಾಮಿಚಿತ್ರದುರ್ಗನಾಟ್ಯ ರಂಜನಿನೃತ್ಯ ಕಲಾ ಕೇಂದ್ರಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article