Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ರಾಷ್ಟ್ರೀಯ ವಿಜ್ಞಾನ ದಿನಾಚರಣೆ | ಮೂಢ ನಂಬಿಕೆಯನ್ನು ಬಿಟ್ಟು ವಿಜ್ಞಾನವನ್ನು ನಂಬಿ : ನಾಗರಾಜ್ ಸಂಗಂ ಕರೆ

04:55 PM Feb 28, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಫೆಬ್ರವರಿ 28 : ಮೂಢ ನಂಬಿಕೆಯನ್ನು ಕಳಚಿ, ಮಾಟ, ಮಂತ್ರವನ್ನು ನಂಬದೆ ವಿಜ್ಞಾನವನ್ನು ನಂಬುವುದರ ಮೂಲಕ ನಮ್ಮ ಬದುಕನ್ನು ಸರಿದಾರಿಗೆ ತೆಗೆದುಕೊಂಡು ಹೋಗಬೇಕಿದೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್‌ನ ಜಿಲ್ಲಾಧ್ಯಕ್ಷರಾದ ನಾಗರಾಜ್ ಸಂಗಂ ಕರೆ ನೀಡಿದರು.

Advertisement

ನಗರದ ಕರುವಿನ ಕಟ್ಟೆಯಲ್ಲಿನ ಶ್ರೀ ಸದ್ಗುರು ಕಬೀರಾನಂದಾಶ್ರಮದ ಆವರಣದಲ್ಲಿ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಫೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರವೂ ಸಹಾ ಫೆಬ್ರವರಿ 28 ಅನ್ನು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಎಲ್ಲಾ ಶಾಲೆಗಳಲ್ಲಿ ಆಚರಣೆಯನ್ನು ಮಾಡುವಂತೆ ಸುತ್ತೋಲೆಯನ್ನು ಹೂರಡಿಸಿದ್ದು ಇದ್ದಲ್ಲದೆ ಪ್ರತಿಜ್ಞಾ ವಿಧಿಯನ್ನು ಸಹಾ ನೀಡಿದೆ. ಇದನ್ನು ಎಲ್ಲರು ಪಾಲಿಸುವುದರ ಮೂಲಕ ವಿಜ್ಞಾನ ದಿನಾಚರಣೆಯನ್ನು ಆಚರಣೆ ಮಾಡಬೇಕಿದೆ ಎಂದರು.

ಇಂದಿನ ದಿನಮಾನದಲ್ಲಿ ಹಲವಾರು ಜನತೆಯನ್ನು ಕೆಲವರನ್ನು ಮೂಢನಂಬಿಕೆಗೆ ಒಳಪಡಿಸುವುದರ ಮೂಲಕ ದಾರಿ ತಪ್ಪಿಸುತ್ತಿದ್ದಾರೆ, ಇದರ ವಿರುದ್ದ ಹೋರಾಟವನ್ನು ಮಾಡಬೇಕಿದೆ ಯಾವುದೇ ಸಮಯದಲ್ಲಿಯೂ ಸಹಾ ಮಾಟ, ಮಂತ್ರಕ್ಕೆ ಒಳಗಾಗಬಾರದು ಏನಾದರೂ ಖಾಯಿಲೆ ಬಂದರೆ ಚಿಕಿತ್ಸಯನ್ನು ಪಡೆಯುವುದರ ಮೂಲಕ ಔಷಧಿಯನ್ನು ಪಡೆಯಬೇಕಿದೆ ಇದನ್ನು ಬಿಟ್ಟು ಬೇರೆ ಮಾಡಬಾರದು, ನಮ್ಮಲ್ಲಿನ ಮೂಢ ನಂಬಿಕೆಯನ್ನು ಬಿಟ್ಟು ವಿಜ್ಞಾನ ಕಡೆ ಬರಬೇಕಿದೆ, ನಮ್ಮ ಜೀವನದಲ್ಲಿ ವಿಜ್ಞಾನ ಹಾಸು ಹೊಕ್ಕಾಗಿದೆ. ಇದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕಿದೆ ಎಂದು ಸಂಗಂ ಕರೆ ನೀಡಿದರು.

ಕೆ.ಎಸ್.ಎಸ್.ಆರ್.ಸಿ. ಜಿಲ್ಲಾ ಘಟಕದ ಕಾರ್ಯದರ್ಶಿ ಪಿ. ಲೋಕೇಶ್ ಮಾತನಾಡಿ, ಸರ್.ಸಿ.ವಿ.ರಾಮನ್ ರವರು ಮಾಡಿದ ಸಂಶೋಧನೆಯನ್ನು ಹೂರ ಜಗತ್ತಿಗೆ ನೀಡಿದ ದಿನವನ್ನು ಸರ್ಕಾರ ವಿಜ್ಞಾನ ದಿನವನ್ನಾಗಿ ಆಚರಣೆಯನ್ನು ಮಾಡುತ್ತಿದೆ. ವಿಜ್ಞಾನಕ್ಕೆ ಎಲ್ಲರು ಪ್ರೋತ್ಸಾಹವನ್ನು ನೀಡಬೇಕಿದೆ, ಇದನ್ನು ಬಳಕೆ ಮಾಡುವುದರ ಮೂಲಕ ನಮ್ಮ ಜೀವನವನ್ನು ಸರಿಪಡಿಸಿಕೊಳ್ಳಬೇಕಿದೆ. ವಿಜ್ಞಾನದಿಂದ ನಮ್ಮ ಜೀವನದಲ್ಲಿ ಹಲವಾರು ರೀತಿಯ ಉಪಯೋಗಗಳಿವೆ. ಕಲಿಕೆಯಲ್ಲಿ ವಿಜ್ಞಾನವನ್ನು ಬಳಕೆ ಮಾಡಿಕೊಳ್ಳಿ, ಪಿಯುನಲ್ಲಿ ನಿಮ್ಮ ನೆಚ್ಚಿನ ವಿಷಯವಾಗಿ ವಿಜ್ಞಾನವನ್ನು ಆಯ್ಕೆ ಮಾಡಿಕೊಳ್ಳುವಂತೆ ಮಕ್ಕಳಿಗೆ ತಿಳಿ ಹೇಳಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನ ಕಾರ್ಯದರ್ಶಿಗಳಾದ ಹುರಳಿ ಎಂ. ಮಾತನಾಡಿ, ವಿಜ್ಞಾನ ದಿನಾಚರಣೆಯ ರೂವಾರಿ ಸರ್ ಸಿ.ವಿ.ರಾಮನ್ ರವರು ಅವರು ಕಂಡು ಹಿಡಿದ ಸಂಶೋಧನೆಯನ್ನು ಹೂರ ಪ್ರಪಂಚಕ್ಕೆ ತಿಳಿಸಿದ ದಿನ ಇದಾಗಿದ್ದರಿಂದ ಈ ದಿನವನ್ನು ವಿಜ್ಞಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ರಾಮನ್ ರವರು ನೋಬಲ್ ಪ್ರಶಸ್ತಿಯನ್ನು ಪಡೆಯುವುದರ ಮೂಲಕ ದೇಶಕ್ಕೆ ಕೂಡುಗೆಯನ್ನು ನೀಡಿದ್ದಾರೆ. ಇಂದು ನಾವು ಉಪಯೋಗ ಮಾಡುವ ಮೊಬೈಲ್, ಟಿ.ವಿ. ಲಾಪ್ ಟ್ಯಾಪ್ ಸೇರಿದಂತೆ ಹಲವಾರು ವಸ್ತುಗಳು ವಿಜ್ಞಾನದ ಕೂಡುಗೆಗಳಾಗಿವೆ.

ಮಾನವ ಇಂದು ಚಂದ್ರಯಾನ ಮಾಡಿದ್ದಾನೆ ಎಂದರೆ ಅದು ಸಹಾ ವಿಜ್ಞಾನದ ಕೂಡುಗೆಯಾಗಿದೆ. ದೇಶವೂ ಸಹಾ ವಿಜ್ಞಾನಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿದೆ, ವಿಜ್ಞಾನಿಗಳ ಸಂಶೋಧನೆಗೆ ಹೆಚ್ಚನ ಪ್ರಾಮುಖ್ಯತೆಯನ್ನು ನೀಡುವುದರ ಮೂಲಕ ಅವರಿಗೆ ಪ್ರೋತ್ಸಾಹ ಮಾಡುತ್ತಿದೆ. ನೀವು ಸಹಾ ಮುಂದೆ ವಿಜ್ಞಾನದ ವಿದ್ಯಾರ್ಥಿಗಳಾಗಿ ದೇಶಕ್ಕೆ ನಿಮ್ಮದೇ ಆದ ಕೂಡುಗೆಯನ್ನು ನೀಡಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆ.ಎಸ್.ಎಸ್.ಆರ್.ಸಿ. ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಜೆ.ಬಿ.ಕಿರಣ ಶಂಕರ್, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಆರ್.ಶೈಲಜಾ ಬಾಬು, ಸಂಘಟನಾ ಕಾರ್ಯದರ್ಶಿ ಎಂ.ರಂಗಪ್ಪ, ಪದಾಧಿಕಾರಿಗಳಾದ ಕೆಂಚಪ್ಪ ಭಾಗವಹಿಸಿದ್ದರು, ಅಧ್ಯಕ್ಷತೆಯನ್ನು ಶ್ರೀ ಸದ್ಗುರು ಕಬೀರಾನಂದಸ್ವಾಮಿ ಫೌಢಶಾಲೆಯ ಮುಖ್ಯೋಪಾಧ್ಯಾಯರಾದ ಹೆಚ್.ಟಿ.ಬಸವರಾಜು ವಹಿಸಿದ್ದರು. ಶ್ರೀ ಸದ್ಗುರು ಕಬೀರಾನಂದಸ್ವಾಮಿ ಫೌಢಶಾಲೆಯ ಮಕ್ಕಳು ಪ್ರಾರ್ಥಿಸಿದರೆ, ಲಕ್ಷ್ಮೀ ಸ್ವಾಗತಿಸಿದರು.

Advertisement
Tags :
believebengaluruchitradurgaleaveNagaraj sangamNational Science DaySciencesuddionesuddione newssuperstitionಕರೆಚಿತ್ರದುರ್ಗನಾಗರಾಜ್ ಸಂಗಂಬೆಂಗಳೂರುಮೂಢ ನಂಬಿಕೆರಾಷ್ಟ್ರೀಯ ವಿಜ್ಞಾನ ದಿನಾಚರಣೆವಿಜ್ಞಾನಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article