Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಡಿಸೆಂಬರ್ 23ರಂದು ರಾಷ್ಟ್ರೀಯ ರೈತ ದಿನಾಚರಣೆ

07:08 PM Dec 22, 2023 IST | suddionenews
Advertisement

ಚಿತ್ರದುರ್ಗ. ಡಿ.22: ಕೃಷಿ ಇಲಾಖೆ ವತಿಯಿಂದ ಇದೇ ಡಿಸೆಂಬರ್ 23ರಂದು ಬೆಳಿಗ್ಗೆ 10.30ಕ್ಕೆ ನಗರದ ಕೃಷಿ ತಂತ್ರಜ್ಞರ ಸಂಸ್ಥೆ ಸಭಾಂಗಣದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Advertisement

ದೇಶದಲ್ಲಿ ಪ್ರತಿ ವರ್ಷವೂ ಡಿಸೆಂಬರ್-23ನ್ನು ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತದೆ. ಭಾರತದ 5ನೇ ಪ್ರಧಾನಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಸ್ಮರಣಾರ್ಥ ಅವರ ಜನ್ಮ ದಿನವನ್ನು ರೈತ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಈ ವರ್ಷ “ಸುಸ್ಥಿರ ಹಾಗೂ ಚೇತರಿಕೆಯತ್ತ ಆಹಾರ ಸುರಕ್ಷತೆಗಾಗಿ ಕ್ರಿಯಾಶೀಲ ಪರಿಹಾರಗಳು” ಧ್ಯೇಯ ವಾಕ್ಯದೊಂದಿಗೆ ರೈತ ದಿನಾಚರಣೆ ಆಚರಿಸಲಾಗುವುದು. ಈ ವಿಷಯದ ಕುರಿತು ನುರಿತ ಉಪನ್ಯಾಸಕರು ಉಪನ್ಯಾಸ ನೀಡುವರು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

 

Advertisement

 

Advertisement
Tags :
chitradurgaNational Farmers Daysuddioneಡಿಸೆಂಬರ್ 23ರಾಷ್ಟ್ರೀಯ ರೈತ ದಿನಾಚರಣೆಸುದ್ದಿಒನ್
Advertisement
Next Article