ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ: ಶೇ.100ರಷ್ಟು ಗುರಿ ಸಾಧಿಸಿ : ಗ್ರೇಡ್-2 ತಹಶೀಲ್ದಾರ್ ನಾಗರಾಜ್
ಚಿತ್ರದುರ್ಗ. ಡಿ.07: ಚಿತ್ರದುರ್ಗ ತಾಲ್ಲೂಕಿನ 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಜಂತು ನಿವಾರಕ ಮಾತ್ರೆಯನ್ನು ತಪ್ಪದೇ ನುಂಗಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಚಿತ್ರದುರ್ಗ ತಾಲ್ಲೂಕು ಗ್ರೇಡ್-2 ತಹಶೀಲ್ದಾರ್ ಕೆ.ಎಚ್.ನಾಗರಾಜ್ ಹೇಳಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಶನಿವಾರ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದ ತಾಲ್ಲೂಕು ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದ ಯಶಸ್ವಿಗೆ ಸಂಬಂಧಿಸಿದ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಮುಖ್ಯಸ್ಥರು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ ಶೇ.100ರಷ್ಟು ಗುರಿ ಸಾಧಿಸಿ ಎಂದರು.
ತಾಲ್ಲೂಕು ಆರೋಗ್ಯಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ಇದೇ ಡಿ.09ರಂದು ಜಂತು ನಿವಾರಕ ಮಾತ್ರೆಯನ್ನು ತಾಲ್ಲೂಕಿನದ್ಯಂತ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಮತ್ತು ಶಾಲೆಗಳಲ್ಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ನುಂಗಿಸಲಾಗುತ್ತದೆ. ಈ ದಿನಗಳಂದು ಪೆÇೀಷಕರು ತಮ್ಮ ಮಕ್ಕಳನ್ನು ಶಾಲೆಗೆ ಅಂಗನವಾಡಿಗೆ ಗೈರು ಹಾಜರಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಕಾರಣಾಂತರಗಳಿಂದ ಆ ದಿನದಂದು ತಪ್ಪಿ ಹೋದ ಮಕ್ಕಳಿಗೆ ಡಿ.16ರಂದು ಮಾಪ್ ಅಪ್ ರೌಂಡ್ ನಡೆಸಲಾಗುತ್ತದೆ. ಮನೆ ಮನೆಗೆ ಭೇಟಿ ನೀಡಿ, ತಪ್ಪಿ ಹೋದ ಎಲ್ಲ ಮಕ್ಕಳಿಗೂ ಜಂತು ನಿವಾರಕ ಮಾತ್ರೆಯನ್ನು ನುಂಗಿಸಲಾಗುತ್ತದೆ ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ತಾಲೂಕಿನಲ್ಲಿ ಒಟ್ಟು 530 ಅಂಗನವಾಡಿಗಳು, 516 ಸರ್ಕಾರಿ ಖಾಸಗಿ ಶಾಲೆಗಳು, 125 ಐಟಿಐ, ಡಿಪೆÇ್ಲೀಮೋ ಕಾಲೇಜುಗಳು 7 ಇದ್ದು, 1 ರಿಂದ 19 ವರ್ಷದ ಮಕ್ಕಳ ಸಂಖ್ಯೆ 113054 ಇರುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವಿವಿಧ ಇಲಾಖೆಗಳ ಮುಖ್ಯಸ್ಥರು ಮೇಲ್ವಿಚಾರಣ ವರದಿಯನ್ನು ಆನ್‍ಲೈನ್ ಮೂಲಕ ಸಲ್ಲಿಸಲು ಎಲ್ಲಾ ಅಧಿಕಾರಿಗಳಿಗೂ ಎಪಿಕೆ ಆಪ್ ನೀಡಲಾಗಿದೆ. ಅದರಂತೆ ಮೇಲ್ವಿಚಾರಣ ವರದಿಯನ್ನು ಸಲ್ಲಿಸಲು ತಿಳಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಸುಧಾ, ಮಂಜುಳಾ, ಹೇಮಾವತಿ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ವೈದ್ಯಾಧಿಕಾರಿಗಳಾದ ಡಾ.ಮಹೇಂದ್ರ, ಡಾ.ಮಂಜುಳಾ, ಡಾ.ವಾಣಿ ನಸಿರ್ಂಗ್ ಅಧಿಕಾರಿ ಅಕ್ಷತಾ, ಆಶಾ ಬೋಧಕಿ ತಬಿತಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ, ಬಿಸಿಎಂ ಅಧಿಕಾರಿ ರಾಜಪ್ಪ, ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ಕಾತ್ಯಾಯನಮ್ಮ ಸೇರಿದಂತೆ ಮತ್ತಿತರರು ಇದ್ದರು.