For the best experience, open
https://m.suddione.com
on your mobile browser.
Advertisement

ನಂದಿನಿ ಶಿವಪ್ರಕಾಶ್ ದಂಪತಿ ಕರ್ನಾಟಕ ಮಾತ್ರವಲ್ಲದೆ ವಿದೇಶಗಳಲ್ಲಿಯೂ ನೃತ್ಯ ಪ್ರದರ್ಶಿಸಿ ಜನಮನ ಗೆದ್ದಿದ್ದಾರೆ : ಶಿವಲಿಂಗಾನಂದ ಮಹಾಸ್ವಾಮಿಗಳ ಶ್ಲಾಘನೆ

04:05 PM Aug 26, 2024 IST | suddionenews
ನಂದಿನಿ ಶಿವಪ್ರಕಾಶ್ ದಂಪತಿ ಕರ್ನಾಟಕ ಮಾತ್ರವಲ್ಲದೆ ವಿದೇಶಗಳಲ್ಲಿಯೂ ನೃತ್ಯ ಪ್ರದರ್ಶಿಸಿ ಜನಮನ ಗೆದ್ದಿದ್ದಾರೆ   ಶಿವಲಿಂಗಾನಂದ ಮಹಾಸ್ವಾಮಿಗಳ ಶ್ಲಾಘನೆ
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 26 : ನೃತ್ಯದಲ್ಲಿ ತನ್ಮತೆಯಿದ್ದವರು ಸಾಧನೆಗೈದು ಜನಮಾನಸದಲ್ಲಿ ಉಳಿಯುತ್ತಾರೆಂದು ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳು ಹೇಳಿದರು.

Advertisement

ಅಂಜನಾ ನೃತ್ಯ ಕಲಾ ಕೇಂದ್ರ ಚಿತ್ರದುರ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ತ.ರಾ.ಸು.ರಂಗಮಂದಿರದಲ್ಲಿ ಎರಡು ದಿನಗಳ ಕಾಲ ನಡೆದ ನಾಟ್ಯ ನೈದಿಲೆ ನೃತ್ಯೋತ್ಸವ-2024 ನ್ನು ಭಾನುವಾರ ಉದ್ಗಾಟಿಸಿ ಮಾತನಾಡಿದರು.

ಕಳೆದ ನಲವತ್ತು ವರ್ಷಗಳಿಂದಲೂ ಅಂಜನಾ ನೃತ್ಯ ಕಲಾ ಕೇಂದ್ರದ ದಂಪತಿಗಳಾದ ನಂದಿನಿ ಶಿವಪ್ರಕಾಶ್ ಇವರುಗಳು ಕೇವಲ ಕರ್ನಾಟಕವಲ್ಲದೆ ವಿದೇಶಗಳಲ್ಲಿಯೂ ನೃತ್ಯ ಪ್ರದರ್ಶಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ತಿರುಪತಿಯಲ್ಲಿಯೂ ನೃತ್ಯ ಪ್ರದರ್ಶನ ನೀಡಿ ಜನಮನ ಗೆದ್ದು, ಪ್ರೇಕ್ಷಕರಿಗೆ ನವರಸ ಉಣ ಬಡಿಸುತ್ತಿದ್ದಾರೆಂದು ಶ್ಲಾಘಿಸಿದರು.

ಕೆ.ಡಿ.ಪಿ.ಸದಸ್ಯ ಕೆ.ಸಿ.ನಾಗರಾಜ್ ಮಾತನಾಡಿ ಕಳೆದ ಮೂವತ್ತು ವರ್ಷಗಳಿಂದಲೂ ಅಂಜನಾ ನೃತ್ಯ ಕಲಾ ಕೇಂದ್ರದ ಜೊತೆ ಒಡನಾಟವಿಟ್ಟುಕೊಂಡಿದ್ದೇನೆ. ನೃತ್ಯದ ಮೂಲಕ ನಂದಿನಿ ಶಿವಪ್ರಕಾಶ್ ದಂಪತಿಗಳು ಭಾರತೀಯ ಪರಂಪರೆ, ಸಂಸ್ಕøತಿಯನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಈ ಮಣ್ಣಿನ ಗುಣವೇ ಅಂತಹುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್ ಮಾತನಾಡಿ ನಲವತ್ತು ವರ್ಷಗಳಿಂದಲೂ ಚಿತ್ರದುರ್ಗದಲ್ಲಿ ಅಂಜನಾ ನೃತ್ಯ ಕಲಾಕೇಂದ್ರ ಮನರಂಜನೆ ನೀಡುತ್ತ ಬರುತ್ತಿರುವುದು ಸುಲಭದ ಕೆಲಸವಲ್ಲ. ಇದರ ಹಿಂದೆ ದಂಪತಿಗಳ ಪರಿಶ್ರಮವಿದೆ. ಹಿಂದಿನ ಕಾಲದಲ್ಲಿ ಕಲೆ, ಸಂಸ್ಕøತಿ, ನೃತ್ಯಕ್ಕೆ ರಾಜಾಶ್ರಯವಿತ್ತು. ಈಗ ಅಂತಹ ಅವಕಾಶವಿಲ್ಲ. ಕಲೆಗಳ ಪ್ರದರ್ಶನಕ್ಕೆ ಇಂತಹ ವೇದಿಕೆ ಅತ್ಯವಶ್ಯಕ. ನವರಸಗಳ ಮೂಲಕ ಪ್ರದರ್ಶಿಸುವ ನೃತ್ಯವನ್ನು ಉಳಿಸಿ ಬೆಳೆಸಬೇಕಿದೆ ಎಂದು ಹೇಳಿದರು.

ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷೆ ಬೆಂಗಳೂರಿನ ವಿಧುಷಿ ಶುಭಾ ಧನಂಜಯ್, ಹಿನ್ನೆಲೆ ಗಾಯಕಿ ಜ್ಯೋತಿ ರವಿಪ್ರಕಾಶ್, ನೃತ್ಯ ಕಲಾವಿದ ಹಾಗೂ ಶಿಕ್ಷಕ ವಿದ್ವಾನ್ ಅನಿಲ್‍ಕುಮಾರ್, ಅಂಜನಾ ನೃತ್ಯ ಕಲಾ ಕೇಂದ್ರದ ಪ್ರಾಂಶುಪಾಲರಾದ ಶಿವಪ್ರಕಾಶ್ ವೇದಿಕೆಯಲ್ಲಿದ್ದರು. ನಂದಿನಿ ಶಿವಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

Tags :
Advertisement