Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗದಲ್ಲಿ ಯಾವುದಾದರೂ ವೃತ್ತಕ್ಕೆ ಡಾ.ಪುನೀತ್‍ರಾಜ್‍ಕುಮಾರ್ ಹೆಸರಿಡಿ : ಜಗದೀಶ್ ಆಗ್ರಹ

05:58 PM Nov 24, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 24 : ಈಡಿಗ ಸಮುದಾಯವು ಸಣ್ಣ ಸಮುದಾಯವಾಗಿದ್ದು, ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿದ್ದಾರೆ. ಈಡಿಗ ಸಮೂದಾಯದವರೇ ಆದ ಡಾ.ರಾಜ್‍ಕುಮಾರ್, ಡಾ.ಪುನೀತ್ ರಾಜ್‍ಕುಮಾರ್ ಜೊತೆಗೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಆದರ್ಶಗಳು ಜನಸಮುದಾಯಕ್ಕೆ ಉತ್ತಮ ಮಾರ್ಗದರ್ಶಕವಾಗಿದೆ ಎಂದು ಹೊಳಲ್ಕೆರೆ ಶಾಸಕರಾದ ಎಂ.ಚಂದ್ರಪ್ಪ ಅಭಿಪ್ರಾಯಪಟ್ಟರು.

Advertisement

 

ಚಳ್ಳಕೆರೆ ರಸ್ತೆಯಲ್ಲಿರುವ ಈಡಿಗರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ದಿನಾಂಕ 24-11-2024 ರಂದು ಭಾನುವಾರ ಬೆಳಿಗ್ಗೆ 10-30ಕ್ಕೆ ಏರ್ಪಡಿಸಿದ ತಾಲ್ಲೂಕು ಈಡಿಗರ ಸಂಘ ಚಿತ್ರದುರ್ಗ (ರಿ), ಪದಾಧಿಕಾರಿಗಳ ಪದಗ್ರಹಣ ಮತ್ತು ಸರ್ಕಾರಿ ಸೇವೆಸಲ್ಲಿಸುತ್ತಿರುವ ಹಾಗೂ ಸರ್ಕಾರಿ ಸೇವೆಸಲ್ಲಿಸಿ ನಿವೃತ್ತಿ ಹೊಂದಿದ ಈಡಿಗ ಸಮಾಜ ಬಾಂಧವರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Advertisement

 

ಈಡಿಗ ಸಮುದಾಯವು ಇದೂವರೆಗೂ ಯಾವುದೇ ರೀತಿಯ ಸರ್ಕಾರಿ ಸೌಲಭ್ಯಗಳನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ನೇರವಾಗಿ ನಮ್ಮನ್ನು ಸಂಪರ್ಕಿಸಿ ಸರ್ಕಾರದ ಯೋಜನೆಗಳನ್ನು ಪಡೆಯಬೇಕೆಂದು ಹೇಳಿದರು.
ತಾಲ್ಲೂಕು ಈಡಿಗರ ಸಂಘದ ಅಧ್ಯಕ್ಷರು ಹಾಗೂ ವಕೀಲರಾದ ಹೆಚ್.ಓ ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಈಡಿಗ ಸಮಾಜದಲ್ಲಿ ಬಡತನದಲ್ಲಿರುವ ಕುಟುಂಬಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಬರುವ ಅನುದಾನಗಳನ್ನು ಕೊಡಿಸಿಕೊಡಲು ನಮ್ಮ ಸಂಘವು ನಿರಂತರವಾಗಿ ಶ್ರಮಿಸುತ್ತದೆ. ಅದೇ ರೀತಿ ಚಿತ್ರದುರ್ಗ ನಗರದಲ್ಲಿ ಕರ್ನಾಟಕ ರತ್ನ ಡಾ.ಪುನೀತ್‍ರಾಜ್‍ಕುಮಾರ್ ಇವರ ಹೆಸರನ್ನು ಯಾವುದಾದರೂ ವೃತ್ತಕ್ಕೆ ಹೆಸರಿಸಬೇಕೆಂದು ಆಗ್ರಹಿಸಿದರು.

ಭರಮಸಾಗರದಲ್ಲಿ ಈಡಿಗ ಸಮಾಜಕ್ಕೆ ಸಮುದಾಯಭವನವನ್ನು ನಿರ್ಮಾಣ ಮಾಡಲು ಒಂದು ಜಾಗವನ್ನು ಕೊಡಿಸಿಕೊಡಬೇಕೆಂದು ಶಾಸಕರಿಗೆ ಮನವಿ ಸಲ್ಲಿಸಿದರು.
ಚಿತ್ರದುರ್ಗ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಸುಮಿತಾ ರಾಘವೇಂದ್ರ, ಕೆಡಿಪಿ ಸದಸ್ಯರಾದ ಕೆ.ಸಿ ನಾಗರಾಜ್, ಉಪಾಧ್ಯಕ್ಷರಾದ ಸಿ.ರಮೇಶ್, ಪ್ರಕಾಶ್, ನಾರಾಯಣಸ್ವಾಮೀ, ಪ್ರಧಾನ ಕಾರ್ಯದರ್ಶಿ ಆರ್ ಕುಮಾರಸ್ವಾಮಿ ಹಾಗೂ ನಾಗೇಂದ್ರಪ್ರಸಾದ್ ಮುಂತಾದ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪೂಜಾ ಪ್ರಾರ್ಥಿಸಿದರು.

Advertisement
Tags :
bengaluruchitradurgaDr. PuneethrajkumarJagadishsuddionesuddione newsಚಿತ್ರದುರ್ಗಜಗದೀಶ್ಡಾ.ಪುನೀತ್‍ರಾಜ್‍ಕುಮಾರ್ಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article