For the best experience, open
https://m.suddione.com
on your mobile browser.
Advertisement

ಕೇಂದ್ರ ಸರ್ಕಾರದಿಂದ ಅಪ್ಪರ್ ಭದ್ರಾ ಯೋಜನೆಗೆ ಹಣ ಬಿಡುಗಡೆ ಮಾಡಿಸುವುದು ನನ್ನ ಮೊದಲ ಆದ್ಯತೆ : ಸಂಸದ ಗೋವಿಂದ ಕಾರಜೋಳ

04:55 PM Jun 13, 2024 IST | suddionenews
ಕೇಂದ್ರ ಸರ್ಕಾರದಿಂದ ಅಪ್ಪರ್ ಭದ್ರಾ ಯೋಜನೆಗೆ ಹಣ ಬಿಡುಗಡೆ ಮಾಡಿಸುವುದು ನನ್ನ ಮೊದಲ ಆದ್ಯತೆ   ಸಂಸದ ಗೋವಿಂದ ಕಾರಜೋಳ
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

Advertisement

ಸುದ್ದಿಒನ್, ಚಿತ್ರದುರ್ಗ,ಜೂ. 13 : ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ನೀರು ಮತ್ತು ರೈಲು ಮಾರ್ಗ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದೆಂದು ಮಾಜಿ ಉಪ ಮುಖ್ಯಮಂತ್ರಿ ಚಿತ್ರದುರ್ಗ ಲೋಕಸಭಾ ಸದಸ್ಯರಾದ ಗೋವಿಂದ ಕಾರಜೋಳ ತಿಳಿಸಿದರು.

Advertisement
Advertisement

ನವದೆಹಲಿಯಿಂದ ಚಿತ್ರದುರ್ಗಕ್ಕೆ ಆಗಮಿಸಿದ ಅವರು ಇಂದು ನಗರದ ವಿವಿಧ ಮಠಗಳಿಗೆ ಬೇಟಿ ನೀಡಿ ಶ್ರೀಗಳ ಆರ್ಶಿವಾದವನ್ನು ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆ ಬರದ ನಾಡಾಗಿದೆ ಇಲ್ಲಿಗೆ ನೀರಿನ ಅವಶ್ಯಕತೆ ಇದೆ ಈ ಹಿನ್ನಲೆಯಲ್ಲಿ ಅಪ್ಪರ್ ಭದ್ರಾ ವನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯಂದು ಪರಿಗಣಿಸಿದೆ ಹಣವನ್ನು ನೀಡುವುದಾಗಿ ಹೇಳಿತ್ತು.

ಈ ಹಿನ್ನಲೆಯಲ್ಲಿ ಇದಕ್ಕೆ ಬೇಕಾದ 5300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಸುವುದಕ್ಕೆ ನನ್ನ ಮೊದಲ ಆದ್ಯತೆಯನ್ನು ನೀಡಲಾಗುವುದು, ಇದಲ್ಲದೆ ಅಪ್ಪರ್ ಭದ್ರಾ ಯೋಜನೆ ಶೀಘ್ರವಾಗಿ ಪೂರ್ಣಗೊಳ್ಳಲು ಅಗತ್ಯವಾದ ಕ್ರಮವನ್ನು ಸಹಾ ಕೈಗ್ಗೊಳ್ಳಲಾಗುವುದು. ಚಿತ್ರದುರ್ಗ ಲೋಕಸಬಾ ಕ್ಷೇತ್ರ 3000ಕ್ಕೂ ಹೆಚ್ಚು ಹಳ್ಳಿಗಳನ್ನು ಹೊಂದಿದೆ. ಇಲ್ಲಿ ರೈತಾಪಿ ವರ್ಗ ಕೃಷಿ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ನೀರಾವರಿಗೆ ಹೆಚ್ಚಿನ ಒತ್ತನ್ನು ನೀಡಲಾಗುವುದೆಂದು ತಿಳಿಸಿದರು.

ಬೋಮ್ಮಾಯಿಯವರ ಸರ್ಕಾರ ಇದ್ದಾಗ ಅಪ್ಪರಭದ್ರಾ ಭದ್ರಕ್ಕೆ ನಾನು ನೀರಾವರಿ ಮಂತ್ರಿಯಾಗಿದ್ದಾಗ ಕೇಂದ್ರದಲ್ಲಿ ಪ್ರಯತ್ನ ಮಾಡಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಪರಿಗಣಿಸಲು ಪ್ರಯತ್ನವನ್ನು ಮಾಡಿ 5300 ಕೋಟಿ ರೂ.ಗಳನ್ನು ಆಯವ್ಯಯದಲ್ಲಿ ಇರಿಸಿದ್ದೆವೆ ಚುನಾವಣೆ ನಂತರ ನಮ್ಮ ಸರ್ಕಾರ ಬರಲಿಲ್ಲ, ಹಣವನ್ನು ಬಿಡುಗಡೆ ಮಾಡಿಸಲು ರಾಜ್ಯ ಸರ್ಕಾರ ಪ್ರಮಾಣಿಕವಾದ ಪ್ರಯತ್ನವನ್ನು ಮಾಡಲಿಲ್ಲ, ಈ ಹಿನ್ನಲೆಯಲ್ಲಿ ನನ್ನ ಮೊದಲ ಆದ್ಯತೆ ಕೇಂದ್ರದಿಂದ 5300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಸುವುದು ಆಗಿದೆ. ಇದರಿಂದ ರೈತಾಪಿ ವರ್ಗಕ್ಕೆ ಕೃಷಿ ಭೂಮಿಗೆ ನೀರಾವರಿಯಾಗಲಿದೆ. ಕೃಷಿ ಕಾರ್ಮಿಕರಿಗೂ ಉದ್ಯೋಗ ಸಿಗಲಿದೆ.

ಕ್ಷೇತ್ರದ ಅನೇಲ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ, ಎಲ್ಲಿ ಸಮಸ್ಯೆಗಳಿವೆ ಎಲ್ಲಿ ಶುದ್ದವಾದ ಕುಡಿಯುವ ನೀರು ಕೂಡಲಿಕ್ಕೆ ಸಾಧ್ಯವಾಗಿಲ್ಲ ಅಂತಹ ಪ್ರದೇಶಗಳನ್ನು ಜಲ ಜೀವನ ಮಿಷನ್ ಅಡಿಯಲ್ಲಿ ತೆಗೆದುಕೊಳ್ಳಲು ನಿಯಾಮಾನುಸಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲು ರಾಜ್ಯ ಸರ್ಕಾರಕ್ಕೆ ವಿನಂತಿಯನ್ನು ಮಾಡಿದರು.

ಇದಾದ ನಂತರ ರೈಲು ಮಾರ್ಗಗಳು ಆಗಬೇಕೆಂದು ಬಹು ದಿನಗಳ ಬೇಡಿಕೆ ಇದೆ ದಾವಣಗೆರೆ- ಬೆಂಗಳೂರು, ಆಲುಮಟ್ಟಿ, ಕೊಪ್ಪಳ, ಚಿತ್ರದುರ್ಗ ಇವುಗಳನ್ನು ಮಾಡಿಸಲು ಪ್ರಮಾಣಿಕ ಪ್ರಯತ್ನವನ್ನು ಮಾಡಲಾಗುವುದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ಕೌಶಲ್ಯ ಅಭೀವೃದ್ದಿ ಕೇಂದ್ರಗಳನ್ನು ಪ್ರಾರಂಭ ಮಾಡಬೇಕಿದೆ, ಇದರಿಂದ ಜನರಿಗೆ ವೃತ್ತಿ ಶಿಕ್ಷಣ, ವೃತ್ತಿ ತರಬೇತಿಯನ್ನು ನೀಡುವ ಕಾರ್ಯವಾಗಬೇಕಿದೆ. ಉದ್ಯೋಗ ಸೃಷ್ಟಿ ಮಾಡುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಿದೆ. ಇದಕ್ಕೆ ಎರಡು ಸರ್ಕಾರಗಳಲ್ಲಿ ಪ್ರಯತ್ನವನ್ನು ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಎ.ಮುರಳಿ, ಗ್ರಾಮಾಂತರ ಅಧ್ಯಕ್ಷರಾದ ಕಲ್ಲೇಶಯ್ಯ, ವಕ್ತಾರರಾದ ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್, ಕಬೀರಾನಂದಾಶ್ರಮದ ಕಾರ್ಯದರ್ಶಿ ವಿ.ಎಲ್. ಪ್ರಶಾಂತ, ಗಣಪತಿ ಶಾಸ್ತ್ರಿ, ನಗರಾಭೀವೃಧ್ದಿ ಪಾಧಿಕಾರದ ಮಾಜಿ ಸದಸ್ಯರಾದ ಓಂಕಾರ್ ಭಾಗವಹಿಸಿದ್ದರು.

Advertisement
Tags :
Advertisement