For the best experience, open
https://m.suddione.com
on your mobile browser.
Advertisement

ಮಠವನ್ನು ರಾಜಕೀಯವಾಗಿ ಬಳಸಿಕೊಳ್ಳುವುದಿಲ್ಲ : ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

06:22 PM Feb 25, 2024 IST | suddionenews
ಮಠವನ್ನು ರಾಜಕೀಯವಾಗಿ ಬಳಸಿಕೊಳ್ಳುವುದಿಲ್ಲ   ಕೇಂದ್ರ ಸಚಿವ ಎ ನಾರಾಯಣಸ್ವಾಮಿ
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ ಫೆ. 25 :  ಮಾದಾರ ಚನ್ನಯ್ಯ ಮಠ ಜಾತ್ಯಾತೀತವಾಗಿ ಪಕ್ಷಾತೀತವಾಗಿ ಸಮಾಜಕ್ಕೆ ಜಾಗೃತಿಯನ್ನು ಮೂಡಿಸುವ ಕನಸನ್ನು ಕಾಣಲಾಗುತ್ತಿದೆ. ರಾಜಕೀಯವಾಗಿ ಮಠವನ್ನು ಯಾವುದೇ ಕಾರಣಕ್ಕೂ ಸಹಾ ಬಳಕೆ ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ ತಿಳಿಸಿದರು.

Advertisement

ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾದಾರ ಚನ್ನಯ್ಯ ಶ್ರೀಗಳನ್ನು ರಾಜಕೀಯಕ್ಕೆ ಬಿಜೆಪಿ ಕರೆ ತರಲಾಗುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮದು ಮಠ ಯಾವುದೋ ಒಂದು ರಾಜಕೀಯ ಪಕ್ಷಕ್ಕೆ ಸಿಮೀತವಾದ ಮಠವಲ್ಲ, ನಮ್ಮ ಮಠ ಇಡೀ ಸಮಾಜಕ್ಕೆ ಮಾರ್ಗದರ್ಶನವನ್ನು ನೀಡುವಂತ ಮಠವಾಗಬೇಕಿದೆ. ನಮ್ಮ ಮಠ ಇಡಿ ಸಮಾಜಕ್ಕೆ ಎಲ್ಲಾ ಪಕ್ಷ ಮತ್ತು ನಾಗರೀಕರಿಗೂ ಒಂದು ಸಂದೇಶವನ್ನು ಜಾಗೃತಿಯನ್ನು ಮೂಡಿಸುವಂತ ಕೇಂದ್ರವನ್ನಾಗಿ ಮಠವನ್ನು ಸ್ವೀಕಾರ ಮಾಡಲಾಗಿದೆ. ಮಠ ಜಾತ್ಯಾತೀತವಾಗಿ ಪಕ್ಷಾತೀತವಾಗಿ ಸಮಾಜಕ್ಕೆ ಜಾಗೃತಿಯನ್ನು ಮೂಡಿಸುವ ಕನಸನ್ನು ಕಾಣಲಾಗುತ್ತಿದೆ. ರಾಜಕೀಯವಾಗಿ ಮಠವನ್ನು ಯಾವುದೇ ಕಾರಣಕ್ಕೂ ಸಹಾ ಬಳಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಾರಾಯಣಸ್ವಾಮಿ ಅಧಿಕಾರಕ್ಕಾಗಿ ಬರುವ ಅಧಿಕಾರಕ್ಕಾಗಿ ಕೆಲಸವನ್ನು ಮಾಡುವ ನಾರಾಯಣಸ್ವಾಮಿ ಅಲ್ಲ ನಾನು ಬಿಜೆಪಿ ಕಟ್ಟಿ ಬೆಳಸುವ ಸಿದ್ದಾಂತವನ್ನು ಸ್ವೀಕಾರ ಮಾಡಿಕೊಂಡು ತಳ ಹಂತದಿಂದ ಬೆಳೆದಿರುವ ಕಾರ್ಯಕರ್ತ ನಮಗೆ ಕಮಲ ಮುಖ್ಯ ನಾನು ಕಮಲದ ಸಂದೇಶವನ್ನು ಸೇನಾನಿಗಳಾಗಿ ಕೆಲಸವನ್ನು ಮಾಡುವಂತ ಕಾರ್ಯಕರ್ತರ ಪಡೆ ನಮ್ಮದು ಎಂದರು.

ಮಾದಾರ ಚನ್ನಯ್ಯರವರನ್ನು ಚುನಾವಣೆಗೆ ತರಬೇಕೆಂದು ಯಾವ ಚರ್ಚೆಯೂ ಸಹಾ ಆಗಿಲ್ಲ, ನಮ್ಮಲ್ಲಿ ಅಭ್ಯರ್ಥಿಗಳೇ ಬಗ್ಗೆಯೇ ಚರ್ಚೆಯಾಗುತ್ತಿಲ್ಲ, ಕಮಲ ಚುನಾವಣೆಗೆ ನಿಲ್ಲುತ್ತದೆ, ಕಮಲಕ್ಕೆ ಮತವನ್ನು ಹಾಕಿಸಬೇಕಿದೆ. ರಾಜ್ಯದ ಯಾವುದೇ ಭೂತ್‌ನಲ್ಲಿ ಕಮಲವನ್ನು ಆರಳಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ನಮ್ಮಲ್ಲಿ ಅಭ್ಯರ್ಥಿಗಳಿಗಿಂತ ಕಮಲ ಚಿಹ್ನೆ ಮುಖ್ಯ ಇದರ ಮೇಲೆ ಮತವನ್ನು ಕೇಳಬೇಕಿದೆ. ಇಲ್ಲಿ ಕಮಲವನ್ನು ಗೆಲ್ಲಿಸಬೇಕಿದೆ ಎಂದು ನಾರಾಯಣಸ್ವಾಮಿ ತಿಳಿಸಿದರು.

ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರಿಗೆ ತಮ್ಮ ಪಕ್ಷದ ಶಾಸಕರ ಮೇಲೆ ನಂಬಿಕೆ ಇಲ್ಲದಂತಾಗಿದೆ ರಾಜ್ಯ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಅವರಲ್ಲಿ ಸೋಲಿನ ಭೀತಿ ಕಾಡುತ್ತಿದೆ. ಇದರಿಂದ ತಮ್ಮ ಶಾಸಕರನ್ನು ರೆಸಾರ್ಟ್‌ಗಳಿಗೆ ಕರೆದ್ಯೂಯುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲುತ್ತದೆ ಎಂದು ಮನಗಂಡಿರುವ ಶಿವಕುಮಾರ್ ಬೇರೆ ಪಕ್ಷಗಳಿಂದ ನಮ್ಮ ಪಕ್ಷಕ್ಕೆ ಬರೀ ಎಂದು ದುಂಬಾಲು ಬಿದ್ದಿದ್ದಾರೆ. ಇದನ್ನು ನೋಡಿದರೆ ಅವರ ಪಕ್ಷದಲ್ಲಿ ಶಾಸಕರ ಮೇಲೆ ಎಷ್ಟು ಹಿಡಿತ ಇದೆ ಎಂದು ಗೊತ್ತಾಗುತ್ತದೆ ಎಂದು ಟೀಕಿಸಿದರು.

Tags :
Advertisement