Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಶಿಕ್ಷಕರ ದಿನಾಚರಣೆಯಂದೇ ಪಾಠ ಹೇಳಿಕೊಟ್ಟ ಗುರುಗಳ ಆಶೀರ್ವಾದ ಪಡೆದ ನಗರಸಭೆ ಅಧ್ಯಕ್ಷೆ ಸುಮೀತಾ

09:28 PM Sep 05, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 05 : ಇಂದು ಶಿಕ್ಷಕರ ದಿನಾಚರಣೆ. ಗುರುವೇ ದೇವರು ಎಂದು ನಂಬಿರುವ ಸಂಸ್ಕೃತಿ ನಮ್ಮದು. ದಾರಿ ತೋರಿದ ಗುರುವನ್ನು ನೆನಪಿಸಿಕೊಳ್ಳುವುದಕ್ಕಾಗಿ ಪಾಠ‌ಕಲಿಸಿದ, ಭವಿಷ್ಯ ಉಜ್ವಲವಾಗುವಂತೆ ಮಾಡಿದ ಗುರುಗಳಿಗೆ ಧನ್ಯವಾದ ತಿಳಿಸುವುದಕ್ಕೆ ಇರುವ ಅವಕಾಶ. ನಮ್ಮನ್ನು ಕೈಹಿಡಿದು ಬರೆಸಿ, ಓದಿಸಿದ ಮೇಷ್ಟ್ರುಗಳು ನಾವೂ ದೊಡ್ಡವರಾದ ಮೇಲೆ ಅವರನ್ನು ಭೇಟಿಯಾಗುವುದೇ ಅಪರೂಪ.

ನಗರಸಭೆಗೆ ನೂತನವಾಗಿ ಅಧ್ಯಕ್ಷೆಯಾಗಿರುವ ಸುಮೀತಾ ಅವರು ಇಂದು ಅಂತಹುದೊಂದ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಶಿಕ್ಷಕರ ದಿನಾಚರಣೆಯ ಅಂಗವಾಗಿ ಜೀವನದಲ್ಲಿ ಗುರಿ ಸೇರಲು ಮಾರ್ಗದರ್ಶನ ಮಾಡಿದ ಗುರುವನ್ನು ನೆನಪಿಸಿಕೊಂಡಿದ್ದಾರೆ. 24 ವರ್ಷದ ಹಿಂದೆ ಪಾಠ‌ಮಾಡಿದ್ದ ಗುರುಗಳನ್ನು ನೆನೆದು ಭೇಟಿಯಾಗಿ ಗೌರವ ಸಲ್ಲಿಸಿ ಆಶೀರ್ವಾದ ಪಡೆದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.

Advertisement

ನಗರದಲ್ಲಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ನಗರಸಭೆಯ ಮುಂದೆಯೇ ಇದೆ. ಈ ಕಾಲೇಜಿನಲ್ಲಿ ಪರಮೇಶ್ವರ್ ಅವರು ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನೂತನ ನಗರಸಭೆ ಅಧ್ಯಕ್ಷೆ ಸುಮೀತಾ ಅವರು ಪಾವಗಡ ತಾಲೂಕಿನ ತಿರುಮಣಿಯಲ್ಲಿ ಪ್ರೌಢಶಾಲಾ ವ್ಯಾಸಾಂಗ ಮಾಡುತಿದ್ದ ವೇಳೆ, ಇದೇ ಪರಮೇಶ್ ಅವರು ಶಿಕ್ಷಕರಾಗಿದ್ದರು. ಸುಮಾರು 24 ವರ್ಷಗಳ ನಂತರ ತಮಗೆ ಪಾಠ ಹೇಳಿ ಕೊಟ್ಟ ಗುರುಗಳು ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆಂದು ತಿಳಿದು ಸುಮೀತಾ ಖುಷಿಯಾಗಿದ್ದಾರೆ. ತಕ್ಷಣ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಜೊತೆಗೆ ಪ್ರಾಚಾರ್ಯರಾದ ನಾಗರಾಜ್ ಅವರ ಆಶೀರ್ವಾದವನ್ನು ಕೂಡಾ ಪಡೆದು ಸರಳತೆ ಮೆರೆದಿದ್ದಾರೆ.

ಇದೆ ವೇಳೆ ಕಾಲೇಜಿನ ಅಭಿವೃದ್ಧಿ ಕುರಿತಂತೆ ಸಮಗ್ರ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಕಾಲೇಜಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು. ಅಷ್ಟೇ ಅಲ್ಲ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಜೊತೆಗೆ ನಿನ್ನೆಯಷ್ಟೇ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರೂ ತಮ್ಮ ಶಕ್ತಿ ಸಾಮರ್ಥ್ಯಕ್ಕೆ ತಕ್ಕಂತೆ ಆಟ ಆಡಬೇಕು ಎಂದು ಸಲಹೆ ನೀಡಿದರು. ಮೈದಾನದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೇ ತಮ್ಮ ನೈಜ ಆಟವನ್ನು ಪ್ರದರ್ಶಿಸಬೇಕು ಎಂದು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳು ಮೊಬೈಲ್ ಬಳಸುವುದನ್ನು ಬಿಟ್ಟು ಶಿಸ್ತು ಮತ್ತು ಶ್ರದ್ಧೆಯಿಂದ ಪಾಠ ಪ್ರವಚನ ಕಲಿತು ಜೀವನದಲ್ಲಿ ನಿರ್ದಿಷ್ಟ ಗುರಿಯೊಂದಿಗೆ ಓದುವುದನ್ನು ಅಭ್ಯಾಸ ಮಾಡಿಕೊಳ್ಳ ಬೇಕು. ಹೆಣ್ಣು ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಬೇಡಿ, ತಮ್ಮ ಕಾಲ ಮೇಲೆ ತಾವು ನಿಂತು, ಜೀವನದಲ್ಲಿ ಗುರಿಯನ್ನು ತಲುಪುವ ಮೂಲಕ ಸಾಧನೆಯ ಶಿಖರವನ್ನೇರಬೇಕೆಂದು ಕಿವಿ ಮಾತು ಹೇಳಿ ಅವರಲ್ಲಿ ಆತ್ಮವಿಶ್ವಾಸ ತುಂಬುವ ಮಾತುಗಳನ್ನು ಆಡಿದರು.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಎ. ನಾಗರಾಜ್, ಎನ್. ಟಿ. ನಾಗರಾಜ್ , ಸುರೇಶ್ ಮೂರ್ನಾಲ್ ಹಾಗೂ ವಿದ್ಯಾರ್ಥಿಗಳ ಪ್ರತಿನಿಧಿ ಕುಮಾರಿ ರಜಿನಿ , ಕುಮಾರಿ ಜ್ಯೋತಿ
ಮತ್ತು ಇತರರು ಹಾಜರಿದ್ದರು.

Advertisement
Tags :
bengaluruBlessingschitradurgaMunicipal Council President Sumitasuddionesuddione newsTeacher's Dayಆಶೀರ್ವಾದಗುರುಗಳುಚಿತ್ರದುರ್ಗನಗರಸಭೆ ಅಧ್ಯಕ್ಷೆ ಸುಮೀತಾಪಾಠಬೆಂಗಳೂರುಶಿಕ್ಷಕರ ದಿನಾಚರಣೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article