Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹರ್‌ಘರ್ ತಿರಂಗಾ ಮೆರವಣಿಗೆಗೆ ಸಂಸದ ಗೋವಿಂದ ಕಾರಜೋಳ ಚಾಲನೆ

06:20 PM Aug 13, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552

ಸುದ್ದಿಒನ್, ಚಿತ್ರದುರ್ಗ,ಆಗಸ್ಟ್.13  : ಬ್ರಿಟಿಷರ ವಿರುದ್ದ ಹೋರಾಡಿ ಹಿರಿಯರು ತಂದುಕೊಟ್ಟಂತ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

Advertisement

ಭಾರತದ 78 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಹರ್‌ಘರ್ ತಿರಂಗಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

13, 14, 15 ರಂದು ಮೂರು ದಿನಗಳ ಕಾಲ ಪ್ರತಿಯೊಬ್ಬರ ಮನೆಯ ಮೇಲೆ ರಾಷ್ಟçಧ್ವಜ ಹಾರಾಡಬೇಕೆಂದು ದೇಶದ ಪ್ರಧಾನಿ ಮೋದಿ ಕರೆ ನೀಡಿರುವುದರಿಂದ ಶಾಲಾ-ಕಾಲೇಜು, ಸರ್ಕಾರಿ ಕಚೇರಿ, ಸಂಘ ಸಂಸ್ಥೆಗಳು, ಗ್ರಾಮ ಪಂಚಾಯಿತಿ ಸೇರಿದಂತೆ ಪ್ರತಿಯೊಬ್ಬ ಪ್ರಜೆಯ ಮನೆ ಮೇಲೆ ಹರ್‌ಘರ್ ತಿರಂಗಾ ತ್ರಿವರ್ಣ ಧ್ವಜ ಹಾರಿಸಿ ದೇಶಭಕ್ತಿ ಪ್ರದರ್ಶಿಸಬೇಕು. 1147 ಅಡಿ ಉದ್ದದ ತ್ರಿವರ್ಣ ಧ್ವಜವನ್ನು ಹಿಡಿದು ವಿದ್ಯಾರ್ಥಿಗಳು ಮೆರವಣಿಗೆ ಮೂಲಕ ನಗರದೆಲ್ಲೆಡೆ ಸಂಚರಿಸಲಿದ್ದಾರೆಂದು ತಿಳಿಸಿದರು.

ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ನಮ್ಮ ಹಿರಿಯರು ಬ್ರಿಟೀಷರ ವಿರುದ್ದ ಹೋರಾಡಿ ಪ್ರಾಣ ತ್ಯಾಗ ಮಾಡಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದರಿಂದ ನಾವುಗಳು ಈಗ 78 ನೇ ಸ್ವಾತಂತ್ರೋತ್ಸವ ಆಚರಿಸುತ್ತಿದ್ದೇವೆ.

ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದವರೆಗೆ ಮೂರು ದಿನಗಳ ಕಾಲ ಪ್ರತಿಯೊಬ್ಬರ ಮನೆಯ ಮೇಲೆ ರಾಷ್ಟçಧ್ವಜ ಹಾರಾಡಬೇಕೆಂದು ಪ್ರಧಾನಿ ಮೋದಿ ಕರೆ ಕೊಟ್ಟಿರುವುದಿಂದ ಎಲ್ಲರೂ ರಾಷ್ಟçಭಕ್ತಿ ತೋರಬೇಕು. 1147 ಅಡಿ ಉದ್ದದ ತ್ರಿವರ್ಣ ಧ್ವಜದೊಂದಿಗೆ ವಿದ್ಯಾರ್ಥಿಗಳು ನಗರ ಪ್ರದಕ್ಷಿಣೆ ಹಾಕುತ್ತಿರುವುದು ನಿಜಕ್ಕೂ ಸ್ವಾತಂತ್ರ್ಯೋತ್ಸವಕ್ಕೆ ತೋರುವ ಗೌರವ ಎಂದರು.

ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್‌ಕುಮಾರ್, ಜಿ.ಟಿ.ಸುರೇಶ್‌ಸಿದ್ದಾಪುರ, ಖಜಾಂಚಿ ಮಾಧುರಿ ಗಿರೀಶ್, ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್‌ಯಾದವ್, ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್, ನಗರಸಭೆ ಸದಸ್ಯ ಹರೀಶ್, ಶ್ರೀನಿವಾಸ್, ಮಹಿಳಾಧ್ಯಕ್ಷೆ ಶೈಲಜಾರೆಡ್ಡಿ, ಬಸಮ್ಮ, ಭಾರತಿ, ಕಾಂಚನ, ತಿಪ್ಪೇಸ್ವಾಮಿ ಛಲವಾದಿ, ನಂದಿ ನಾಗರಾಜ್, ಜಿ.ಎಸ್.ಅನಿತ್‌ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಜೆಡಿಎಸ್. ಜಿಲ್ಲಾಧ್ಯಕ್ಷ ಜಯಣ್ಣ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ಚಂದ್ರು, ಯಶವಂತ್, ಕುಮಾರ್, ಕಿರಣ್, ಪರಶುರಾಮ್, ವಸಂತ, ಓಬಳೇಶ, ಪ್ರಭು, ತಿಮ್ಮಣ್ಣ, ಈ ಸಂದರ್ಭದಲ್ಲಿ ಹಾಜರಿದ್ದರು.

Advertisement
Tags :
bengaluruchitradurgaHarghar TirangaMP Govinda Karajolaprocessionsuddionesuddione newsಚಾಲನೆಚಿತ್ರದುರ್ಗಬೆಂಗಳೂರುಮೆರವಣಿಗೆಸಂಸದ ಗೋವಿಂದ ಕಾರಜೋಳಸುದ್ದಿಒನ್ಸುದ್ದಿಒನ್ ನ್ಯೂಸ್ಹರ್‌ಘರ್ ತಿರಂಗಾ
Advertisement
Next Article