For the best experience, open
https://m.suddione.com
on your mobile browser.
Advertisement

ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು : ರೋಟರಿ ಕ್ಲಬ್‌ನ ನೂತನ ಅಧ್ಯಕ್ಷ ಮಂಜುನಾಥ್ ಭಾಗವತ್

04:35 PM Jun 17, 2024 IST | suddionenews
ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು   ರೋಟರಿ ಕ್ಲಬ್‌ನ ನೂತನ ಅಧ್ಯಕ್ಷ ಮಂಜುನಾಥ್ ಭಾಗವತ್
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜೂ. 17 :
ನನ್ನ ಅವಧಿಯಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಕ್ಲಬ್‍ನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ರೋಟರಿ ಕ್ಲಬ್ ಚಿನ್ಮೂಲಾದ್ರಿಯ ನೂತನ ಅಧ್ಯಕ್ಷರಾದ ಮಂಜುನಾಥ್ ಭಾಗವತ್ ತಿಳಿಸಿದರು.

Advertisement

ಚಿತ್ರದುರ್ಗ ನಗರದ ಎಸ್.ಆರ್.ಬಿ.ಎಂ.ಎಸ್. ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ 2024-25ನೇ ಸಾಲಿಗೆ ಆಯ್ಕೆಯಾದ ರೋಟರಿಕ್ಲಬ್ ಚಿನ್ಮೂಲಾದ್ರಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ನಂತರ ಮಾತನಾಡಿದ ಅವರು, ಅರ್ಹತೆ, ಅವಕಾಶ ಮತ್ತು ಅನುಗ್ರಹ ಇದ್ದಾಗ ಮಾತ್ರ ಇಂತಹ ಹುದ್ದೆಗಳು ದೂರಕಲು ಸಾಧ್ಯವಿದೆ, ಈ ಅರ್ಹತೆ ನನ್ನಲ್ಲಿ ಇದ್ದೇಯೂ ಇಲ್ಲವೂ ಗೋತ್ತಿಲ್ಲ ಆದರೂ ಸಹಾ ಅಧ್ಯಕ್ಷ ಸ್ಥಾನ ಬಂದಿದೆ. ನನ್ನ ಅಧಿಕಾರದ ಅವಧಿಯಲ್ಲಿ ಆರೋಗ್ಯ ಮತ್ತ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುವುದಾಗಿ ತಿಳಿಸಿದರು.

Advertisement


ನಾನು ಈ ಕ್ಲಬ್‍ನ ಅಧ್ಯಕ್ಷನಾಗಿ ಸಮಾಜಕ್ಕೆ ಏನಾದರೂ ಸಹಾ ಕೊಡುಗೆಯನ್ನು ನೀಡಬೇಕಿದೆ, ಜನತೆಯಲ್ಲಿ ಅರೋಗ್ಯದ ಬಗ್ಗೆ ಅರಿವನ್ನು ಮೂಡಿಸುವ ಕಾರ್ಯವನ್ನು ಮಾಡುವುದರ ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಿ ನನ್ನ ಕೈಲಾದ ಸಹಾಯವನ್ನು ಮಾಡುವ ಭರವಸೆಯನ್ನು ನೀಡಿದರು.

ರೋಟರಿಕ್ಲಬ್ ಚಿನ್ಮೂಲಾದ್ರಿಯ ಮಾಜಿ ಅಧ್ಯಕ್ಷರಾದವ ಶಂಕರಪ್ಪ ಮಾತನಾಡಿ, ರೋಟರಿ ಎನ್ನುವುದು ಒಂದು ಕುಟುಂಬ ಇದ್ದಂತೆ ಇಲ್ಲಿ ಎಲ್ಲರು ಸೇರಿ ಸಮಾಜದ ಏಳ್ಗೆಗಾಗಿ ಕೆಲಸವನ್ನು ಮಾಡಬೇಕಿದೆ, ಮನೆಯಲ್ಲಿ ಯಾವ ರೀತಿ ಇರುತ್ತೇಎವ ಅದೇ ರೀತಿ ನಮ್ಮಲ್ಲಿಯೂ ಸಹಾ ಇರಬೇಕಿದೆ. ಬೇರೆಯವರಿಗೆ ಸಹಾಯವನ್ನು ಮಾಡುವುದರ ಮೂಲಕ ಸಮಾಜ ಸೇವೆಯನ್ನು ಮಾಡಬೇಕಿದೆ. ನನ್ನ ಒಂದು ವರ್ಷ ಯಾವ ರೀತಿ ಕಳೆಯಿತು ಎನ್ನುವುದು ಗೊತ್ತಾಗಿಲ್ಲ, ಈ ಕ್ಲಬ್‍ನಲ್ಲಿ ಕೆಲಸವನ್ನು ಮಾಡುವುದರ ಮೂಲಕ ನನ್ನ ಮಾನಸಿಕ ನೆಮ್ಮದಿಯೂ ಸಹಾ ಹೆಚ್ಚಾಗಿದೆ. ಸಂತೋಷವನ್ನು ತಂದಿದೆ. ನಮ್ಮ ತಂಡವೂ ಸಹಾ ನನಗೆ ಹೆಚ್ಚಿನ ರೀತಿಯಲ್ಲಿ ನೆರವನ್ನು ನೀಡಿದೆ ಇದರಿಂದ ಉತ್ತಮವಾದ ಕಾರ್ಯವನ್ನು ಮಾಡಿದ ತೃಪ್ತಿ ನನಗೆ ಇದೆ ಎಂದರು.


2025-26ನೇ ಸಾಲಿನ ರೋಟೇರಿಯನ್ ಡಿ.ಜಿ. ರವೀಂದ್ರ ಮಾತನಾಡಿ, ಅಧಿಕಾರವ ಸಿಕ್ಕಾಗಿ ಅದರ ಸದುಪಯೋಗ ಮಾಡಿಕೊಳ್ಳಬೇಕಿದೆ, ಪ್ರಪಂಚದಲ್ಲಿ ರೋಟರಿ ಕ್ಲಬ್‍ಗೆ 144 ಲಕ್ಷ ಜನ ಸದಸ್ಯರಿದ್ದಾರೆ. ಇದು ಪ್ರಪಂಚದಲ್ಲಿ ಉತ್ತಮವಾದ ಕಾರ್ಯವನ್ನು ಮಾಡುತ್ತಿದೆ. ಕಳೆದ 35 ವರ್ಷದಂದ ದೇಶದಲ್ಲಿ ಪೋಲಿಯೂ ರೋಗವನ್ನು ನಿರ್ಮೂಲನೆ ಮಾಡಲು ಉಚಿತವಾಗಿ ಪೋಲೊಯೂನ ಹನಿಯನ್ನು ನೀಡಲಾಗುತ್ತಿದೆ. ಇದರೊಂದಿಗೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವನ್ನು ನೀಡುವುದರ ಮೂಲಕ ಎಲ್ಲರು ಜ್ಞಾನವನ್ನು ಪಡೆಯಲು ಪ್ರೇರೆಪಿಸುತ್ತಿದೆ ಎಂದರು.

ರೋ.ಡಿ.ಜಿ. ಮಧುಪ್ರಸಾದ್ ಮಾತನಾಡಿ, ರೋಟರಿ ಕ್ಲಬ್ ಚಳ್ಳಕೆರೆ ರಸ್ತೆಯಲ್ಲಿ ಉತ್ತಮವಾದ ಆರೋಗ್ಯ ಕೇಂದ್ರವನ್ನು ನಿರ್ಮಾಣ ಮಾಡುತ್ತಿದೆ ಇಲ್ಲಿ ಡಯಾಲಿಸೀಸ್ ಸೆಂಟರ್, ಕೌಶಲ್ಯಾಭಿವೃಧ್ದಿ ಕೇಂದ್ರ ಸೇರಿದಂತೆ ಇತರೆ ಆರೋಗ್ಯ ತಪಾಸಣೆಯನ್ನು ಮಾಡುವ ಕೇಂದ್ರವನ್ನು ಸುಮಾರು 3 ಕೋಟಿ ವೆಚ್ಚದಲ್ಲಿ ನಿರ್ಮಾಣ ಮ ಮಾಡಲಾಗುತ್ತಿದೆ ಅತಿ ಶೀಘ್ರದಲ್ಲಿಯೇ ಇದರ ಉದ್ಘಾಟನೆಯಾಗಲಿದ್ದು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ರೋಟರಿಕ್ಲಬ್ ಚಿನ್ಮೂಲಾದ್ರಿನ ಹಿಂದಿನ ಕಾರ್ಯದರ್ಶಿಗಳಾದ ಲಕ್ಷ್ಮೀಕಾಂತ ವಾರ್ಷಿಕ ವರದಿಯನ್ನು ಮಂಡಿಸಿದರು.
ವೇದಿಕೆಯಲ್ಲಿ ರೋಟರಿಕ್ಲಬ್ ಚಿನ್ಮೂಲಾದ್ರಿನ 2024-25ನೇ ಸಾಲಿನ ಕಾರ್ಯದರ್ಶಿಗಳಾದ ಶಿವರಾಂ, ಗೌರ್ನರ್ ಉಮ್ಮೇಶ್ ತುಪ್ಪದ್, ಸುದರ್ಶನ್ ಉಪಸ್ಥಿತರಿದ್ದರು.

ಗುರುಮೂರ್ತಿ ಪ್ರಾರ್ಥಿಸಿದರೆ, ಶಂಕ್ರಪ್ಪ ಸ್ವಾಗತಿಸಿದರು, ತಿಪ್ಪೇಸ್ವಾಮಿ ಮತ್ತು ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು. ಪ್ರಾರಂಭದಲ್ಲಿ ಲಾಸ್ಯ ಫೌಂಡೇಶನ್ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

Tags :
Advertisement