Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮೊಳಕಾಲ್ಮೂರು | ಎತ್ತಿನ ಗಾಡಿಗೆ ಲಾರಿ ಡಿಕ್ಕಿ, ಓರ್ವ ವ್ಯಕ್ತಿ ಹಾಗೂ ನಾಲ್ಕು ಎತ್ತುಗಳ ಸಾವು

10:05 AM Dec 05, 2024 IST | suddionenews
Advertisement

ಸುದ್ದಿಒನ್, ಮೊಳಕಾಲ್ಮೂರು, ಡಿಸೆಂಬರ್. 05 : ರಾಷ್ಟ್ರೀಯ ಹೆದ್ದಾರಿ 150ಎ ರಲ್ಲಿ ಸಾಗುತ್ತಿದ್ದ ಎತ್ತಿ ಗಾಡಿಗೆ ಟಿಪ್ಪರ್ ಲಾರಿ ಡಿಕ್ಕಿಯಾಗಿ ಓರ್ವ ವ್ಯಕ್ತಿ ಸೇರಿದಂತೆ 4 ಎತ್ತುಗಳು ಸಾವನ್ನಪ್ಪಿದ ಘಟನೆ ಗುರುವಾರ ಬೆಳಗ್ಗೆ ಬೈರಾಪುರ ಬಳಿ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ.

Advertisement

ಚಳ್ಳಕೆರೆ ಕಡೆಯಿಂದ ಮೊಳಕಾಲ್ಮೂರು ಕಡೆಗೆ ಬರುತ್ತಿರುವಾಗ ಹಿಂಬದಿಯಿಂದ ಲಾರಿ ಎತ್ತಿನ ಗಾಡಿಗೆ ಡಿಕ್ಕಿ ಹೊಡೆದ ರಭಸಕ್ಕೆ ನಾಲ್ಕು ಎತ್ತುಗಳು ಸ್ಥಳದಲ್ಲೇ ಮೃತಪಟ್ಟಿವೆ. ಮೃತ ಚಾಲಕನನ್ನು ದಾವಣಗೆರೆಯ ಇಬ್ರಾಹಿಂ (40 ವರ್ಷ) ಎಂದು ಗುರುತಿಸಲಾಗಿದೆ. ಇನ್ನು ಡಿಕ್ಕಿಯ ರಭಸಕ್ಕೆ ಲಾರಿ ಪಲ್ಟಿಯಾಗಿ ಲಾರಿ ಚಾಲಕ ಕೂಡ ಅಲ್ಲೆ ಅಸುನೀಗಿದ್ದಾನೆ. ಮೃತನ ವಿಳಾಸ ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.

Advertisement
Advertisement
Tags :
bengaluruchitradurgakannadaKannadaNewssuddionesuddionenewsಎತ್ತಿನ ಗಾಡಿಓರ್ವ ವ್ಯಕ್ತಿಕನ್ನಡಕನ್ನಡವಾರ್ತೆಕನ್ನಡಸುದ್ದಿಚಿತ್ರದುರ್ಗನಾಲ್ಕು ಎತ್ತುಗಳ ಸಾವುಬೆಂಗಳೂರುಮೊಳಕಾಲ್ಮೂರುಲಾರಿ ಡಿಕ್ಕಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article