Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮೊಬೈಲ್ ಗೀಳು ಆರೋಗ್ಯಕ್ಕೆ ಮತ್ತು ಪ್ರತಿಭೆಗೆ ಹಾನಿಕರ : ಎಸ್. ಜೆ. ಕುಮಾರಸ್ವಾಮಿ

07:31 PM Jun 19, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಜೂನ್.19 : ಮಕ್ಕಳ ಪ್ರತಿಭೆಯನ್ನು ಗುರುತಿಸಲು ಹೌಸ್‍ಗಳು ಸಹಾಯಕ. ಮೊಬೈಲ್ ಗೀಳು ಆರೋಗ್ಯಕ್ಕೆ ಮತ್ತು ಪ್ರತಿಭೆಗೆ ಹಾನಿಕರ ಎಂದು ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಎಸ್. ಜೆ. ಕುಮಾರಸ್ವಾಮಿ ಕಿವಿ ಮಾತು ಹೇಳಿದರು.

Advertisement

ಅವರು ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ “ಶಾಲಾ ಮಟ್ಟದ ಹೌಸ್‍ಗಳ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

Advertisement

ಒನಕೆ ಓಬವ್ವಳ ಸಾಹಸ ಗಾಥೆಯನ್ನು ಸ್ಮರಿಸಿದರು. ಶಿಸ್ತಿನಿಂದ ಇದ್ದರೆ ನಿಮ್ಮ ಗುರಿ ಸಾಧಿಸಲು ಅವಕಾಶವಾಗುತ್ತದೆ ಎಂದರು. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಚೆನ್ನಾಗಿ ನಿಭಾಯಿಸಿ ಎಂದರು.

ಮಕ್ಕಳ ಸರ್ವತೋಮುಖ ಅಭಿವೃದ್ಧಿಯ ದೃಷ್ಠಿಯಿಂದ ಶೈಕ್ಷಣಿಕವಾಗಿ, ಕ್ರೀಡೆ ಮತ್ತು ಸಾಂಸ್ಕøತಿಕವಾಗಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು “ಪದ್ಮಶ್ರೀ, ಪದ್ಮ ವಿಭೂಷಣ, ಪದ್ಮಭೂಷಣ, ಭಾರತ ರತ್ನ ” ಎಂಬ ನಾಲ್ಕು ಹೌಸ್‍ಗಳನ್ನು ರಚಿಸಲಾಗಿದೆ ಎಂದರು.

ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ವಿಜಯ್ ಕುಮಾರ್‍ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳ ಅಭಿವೃದ್ದಿಗೆ ಹೌಸ್‍ಗಳ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಎಸ್.ಎಂ ಪೃಥ್ವೀಶ ಸರ್ ಶ್ರೀಮತಿ ಸುನೀತಾ ವಿಜಯ್ ಕುಮಾರ್, ಮುಖ್ಯೋಪಾಧ್ಯಾಯರಾದ ತಿಪ್ಪೇಸ್ವಾಮಿ ಎನ್.ಜಿ ಐಸಿಎಸ್‍ಸಿ  ಪ್ರಾಚಾರ್ಯರಾದ ಶ್ರೀ ಬಸವರಾಜಯ್ಯ ಪಿ.  ಉಪಪ್ರಾಚಾರ್ಯರಾದ ಶ್ರೀ ಅವಿನಾಶ್.ಬಿ. ಶಿಕ್ಷಕ/ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಸನಿಹಾ ಸಿಂಚನ ನಿರೂಪಿಸಿದರು,  ಜುಹಾ ಸಾರಾ, ಸ್ವಾಗತಿಸಿದರು,  ವರ್ಷಿತಾ ವಂದಿಸಿದರು.

Advertisement
Tags :
bengaluruchitradurgahealthmobileobsessionS. J. Kumaraswamysuddionesuddione newstalentಆರೋಗ್ಯಎಸ್.ಜೆ.ಕುಮಾರಸ್ವಾಮಿಗೀಳುಚಿತ್ರದುರ್ಗಪ್ರತಿಭೆಪ್ರತಿಭೆಗೆ ಹಾನಿಕರಬೆಂಗಳೂರುಮೊಬೈಲ್ಸುದ್ದಿಒನ್ಸುದ್ದಿಒನ್ ನ್ಯೂಸ್ಹಾನಿಕರ
Advertisement
Next Article