Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮಾಜಿ ಸಿಎಂ ಬಿಎಸ್ವೈ ವಿರುದ್ದ ಸಮರ ಸಾರಿದ್ರಾ ಪರಮಾಪ್ತ ಶಾಸಕ ಎಂ.ಚಂದ್ರಪ್ಪ. ?

03:11 PM Mar 28, 2024 IST | suddionenews
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ, ಮಾ.28 : ಪುತ್ರನಿಗೆ ಬಿಜೆಪಿ ಟಿಕೇಟ್ ಕೈ ತಪ್ಪಿದ ಹಿನ್ನಲೆ ಶಾಸಕ ಎಂ ಚಂದ್ರಪ್ಪ ಅಸಮಧಾನ ವ್ಯಕ್ತಪಡಿಸಿದ್ದು, ಯಡಿಯೂರಪ್ಪ ಅವರಿಂದಲೇ ನನ್ನ ಮಗನಿಗೆ ಟಿಕೆಟ್ ಕೈತಪ್ಪಿದ್ದು ಶಾಸಕ ಚಂದ್ರಪ್ಪ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಚಿತ್ರದುಗ್ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಮಧ್ಯಾಹ್ನದ ವರೆಗೂ ನನ್ನ ಮಗನ ಹೆಸರು ಪೈನಲ್ ಆಗಿತ್ತು. ಗೋವಿಂದ ಕಾರಜೋಳ ಅವರಿಗೆ ಟಿಕೆಟ್ ನೀಡಿಲ್ಲ ಅಂದ್ರೆ ಕ್ಯಾಂಪೇನ್ ಮಾಡಲ್ಲ ಎಂದಿದ್ದಾರೆ. ಯಡಿಯೂರಪ್ಪ ಹೈಕಮಾಂಡ್‍ಗೆ ಹೀಗೆ ಹೇಳಿದ್ದಕ್ಕೆ ನನ್ನ ಮಗನಿಗೆ ಟಿಕೆಟ್ ಮಿಸ್ ಆಗಿದೆ. ಮಾಜಿ ಸಿಎಂ ಯಡಿಯೂರಪ್ಪ ವಿರುದ್ದ ಶಾಸಕ ಚಂದ್ರಪ್ಪ ತೀವ್ರ ಅಸಮಾಧಾನ ಹೂರ ಹಾಕಿದ್ದಾರೆ.

ನನ್ನ ಮಗನಿಗೆ 2019 ರಲ್ಲಿ ಟಿಕೇಟ್ ಕೇಳಿದ್ದೆ, ಆಗ ಮುಂದಿನ ಬಾರಿ ಎಂದು ಹೇಳಿದ್ದರು. ನಾರಾಯಣ ಸ್ವಾಮಿ ಪರ ಕಳೆದ ಬಾರಿ 40 ಸಾವಿರ ಲೀಡ್ ಕೊಟ್ಟಿದ್ದೆ. 2024 ರ ಎಲೆಕ್ಷನ್ ನಲ್ಲಿ ಟಿಕೆಟ್ ಕೊಡ್ತೇವೆ ಎಂದ ಸಂತೋಷ್ ಜೀ ಕೂಡಾ ಹೇಳಿದ್ದರು. ಇದೇ ಗೋವಿಂದ ಕಾರಜೋಳ ನನ್ನ ಮಗನ ಓಡಾಡಲು ಹೇಳಿದ್ರು. ಪಾರ್ಟಿ ಸಭೆಯಲ್ಲಿ ಕೂಡಾ ಹೊರಗಿನ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದಾಗಿ ದ್ವನಿ ಎತ್ತಿದ್ದೆ. ಸರ್ವೆ ಬಂದವರಿಗೆ ನಮ್ಮ ಜಿಲ್ಲೆಯವರಿಗೆ ಟಿಕೆಟ್ ನೀಡಿ ಎಂದಿದ್ದೆ. ಮೋದಿ, ಅಮೀತ್ ಷಾ ಸರ್ವೆಯಲ್ಲಿ ರಘುಚಂದನ್ ಹೆಸರಿತ್ತು. ಸಿಇಸಿ ಕಮಿಟಿಯಲ್ಲಿ ನನ್ನ ಮಗನ ಹೆಸರು ಪೈನಲ್ ಆಗಿತ್ತು. ನಿನ್ನೆ ಸಂಜೆ ಯಡಿಯೂರಪ್ಪ ಅವರಿಂದ ನನ್ನ ಮಗನಿಗೆ ಟಿಕೆಟ್ ತಪ್ಪಿದೆ ಎಂದು ಯಡೆಯೂರಪ್ಪರವರ ವಿರುದ್ದ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಯಡಿಯೂರಪ್ಪ ಕೆ.ಜೆಪಿ.ಕಟ್ಟಿದ್ದಾಗ ಅವರ ಸಮಾಜದವರು ಬರ್ಲಿಲ್ಲ. ನಾನು 6 ತಿಂಗಳ ಮುಂಚೆಯೇ ನಾನು ರಾಜೀನಾಮೆ ಕೊಟ್ಟಿದ್ದೆ. ಅವರ ಮಗ ಬಿವೈ ರಾಘವೇಂದ್ರ ಬಿಜೆಪಿಯಲ್ಲೇ ಇದ್ದರು. 2008 ರಲ್ಲಿ 110 ಸ್ಥಾನ ಗೆದ್ದಾಗ ನಮ್ಮ ಸಮಾಜದವರು ತ್ಯಾಗ ಮಾಡಿದ್ದರು. ಶಿವರಾಜ್ ತಂಗಡಗಿ, ವೆಂಕಟರಮಣಪ್ಪ, ಗೂಳಿಹಟ್ಟಿ ಬೆಂಬಲಿಸಿದ್ದರು ಮೂರು ಮಂದಿ ವಡ್ಡರಿಂದ ಯಡಿಯೂರಪ್ಪ ಸಿಎಂ ಆಗಿದ್ದರು. ಅಂಥ ಮೂರು ಮಂದಿಯನ್ನ ಸಂಪುಟದಿಂದ ತೆಗೆದು ಅನ್ಯಾಯ ಮಾಡಿದ್ದರು. ಆದರೂ ಕೂಡಾ ನಾನು ಇವರನ್ನ ಎಂದೂ ಕೈಬಿಟ್ಟು ಹೋಗಿರಲಿಲ್ಲ. ನಮಗೆ ಯಡಿಯೂರಪ್ಪ ಈ ಬಹುಮಾನ ಕೊಟ್ಟಿದ್ದಾರೆ ಎಂದು ಚಂದ್ರಪ್ಪ ನೂಂದು ನುಡಿದರು.

ಕಾರಜೋಳ ಯಡಯೂರಪ್ಪ ನಡುವೆ ಅದೇನು ಸಂಮ್ತಿಂಗ್ ಇದೆಯೋ ಗೊತ್ತಲ್ಲ. 550 ಕಿಲೋಮೀಟರ್ ದೂರ ವ್ಯಕ್ತಿಗೆ ಟಿಕೆಟ್ ಕೊಡುವಂತದ್ದು ಏನಿತ್ತು. ನಮಗೆ ತುಂಭಾನೇ ಅನ್ಯಾಯ ಮಾಡಿದ್ದಾರೆ. ಕಾರ್ಯಕರ್ತರ ಅಭಿಪ್ರಾಯ ನಂತರ ಮುಂದಿನ ನಿರ್ಧಾರ. ವಿಜಯೇಂದ್ರ ಯುವಕ ಎಂದು ಅಧ್ಯಕ್ಷ ಮಾಡಿದ್ದಾರೆ, ನನ್ನ ಮಗನಿಗೆ ಟಿಕೆಟ್ ಕೊಡ್ಲಿಲ್ಲ. ನಮ್ಮ ಸಮಾಜದ ಎಲ್ಲರೂ ಕೈ ಬಿಟ್ಟು ಹೋಗಿದ್ದಾರೆ, ನಾನು ಮಾತ್ರ ಆಧಾರವಾಗಿದ್ದೆ. ಈಗ ನಮ್ಮ ಸಮಾಜ ಮುಂದಿನ ಹೆಜ್ಜೆ ಇಡುತ್ತದೆ. ಮೋದಿ ದೇಶ & ರಾಜ್ಯಕ್ಕೆ ಅಗತ್ಯ ಎಂದು ನಾನು ಭಾವಿಸಿದ್ದೇನೆ. ಬೊಮ್ಮಾಯಿ ಸಂಪುಟದಲ್ಲಿ ನನಗೆ ಅನ್ಯಾಯ ಮಾಡಿದ್ರು. ಹಗಲು ರಾತ್ರಿ ಯಡಿಯೂರಪ್ಪ ಮನೆಗೆ ನಾನು ದುಡಿದೆ, ನಾನು ಏನೂ ಅನ್ಯಾಯ ಮಾಡಿದ್ದೆ. ನಿನ್ನೆ ಮಧ್ಯಾಹ್ನ ಘೋಷಣೆ ಮಾಡ್ತಾ ಇದ್ರು, ಇದನ್ನ ತಪ್ಪಿಸಿದ್ದಾರೆ.

ನಮ್ಮ ಕಾರ್ಯಕರ್ತರ ಸಭೆ ಬಳಿಕ ಮುಂದಿನ ತೀರ್ಮಾನ. ನೂರಾರು ಬಾರಿ ಯಡಿಯೂರಪ್ಪ ಜೊತೆ ಚರ್ಚೆ ಮಾಡಿದ್ದೆ, ಅವರು ಕಾಳಜಿ ತೋರಿಲ್ಲ. ಯಡಿಯೂರಪ್ಪ ಕಿಚನ್ ಕ್ಯಾಬಿನೆಟ್ ನಲ್ಲಿ ಇದಿದ್ದಕ್ಕೆ ಈ ಬಹುಮಾನ. ಏಎP ನಿಂತಾಗ ನಯಾ ಪೈಸೆ ಪಾರ್ಟಿ ಫಂಡ್ ಕೊಡ್ಲಿಲ್ಲ.

ನಮ್ಮ ದುರ್ಗದಲ್ಲಿ ಮಹಾನ್ ನಾಯಕ ಇದ್ದಾನೆ, ಜಾಸ್ತಿ ಆಗಿದೆ ಈಗಾಗಲೇ ಶಾಸ್ತಿ ಆಗಿದೆ, ಮುಂದಿಯೂ ಶಾಸ್ತಿ ಆಗುತ್ತದೆ ನಮ್ಮ ಪಕ್ಷದಲ್ಲಿ ಸೋತವರನ್ನ ಕರೆತಂದು ಒಐಅ ಮಾಡಿದ್ವಿ ಅಷ್ಟು ನಿಯತ್ತಿಂದ ಮಾಡಿದ್ದೇವೆ, ನಾನು ನಂಬಿಸಿ ಮೋಸ ಮಾಡಲ್ಲ ಆ ಮಹಾನ್ ನಾಯಕನನ್ನ ಅರ್ಥ ಮಾಡಿಕೊಂಡು ಹೇಳುತ್ತೇನೆ. ಮದಕರಿ ಕೋಟೆಗೆ ನುಗ್ಗಲು ಸಂಧಿ ತೋರಿಸಲು ಇರ್ಬೇಕು, ಅಂಥವರು ಇದ್ದಾರೆ ಒಳಗೆ ಬಂದಾಗ ಏನಾಯ್ತು, ಮುಂದೆ ಮಹಾನ್ ನಾಯಕನಿಗೆ ಅದೇ ಆಗುತ್ತೆ ಪರೋಕ್ಷವಾಗಿ ಮಾಜಿ ಶಾಸಕ ತಿಪ್ಪಾರೆಡ್ಡಿ ವಿರುದ್ದ ಗುಡುಗಿದ ಚಂದ್ರಪ್ಪ

Advertisement
Tags :
bengaluruchitradurgaformer CM BSYMLA M chandrappasuddionesuddione newsSupremeಚಿತ್ರದುರ್ಗಪರಮಾಪ್ತಬೆಂಗಳೂರುಮಾಜಿ ಸಿಎಂ ಬಿಎಸ್ಯಡಿಯೂರಪ್ಪಶಾಸಕ ಎಂ.ಚಂದ್ರಪ್ಪಸಮರಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article