For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಎಂ.ಕೆ.ತಾಜ್‍ಪೀರ್ ಅಧಿಕಾರ ಸ್ವೀಕಾರ

05:56 PM Mar 01, 2024 IST | suddionenews
ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಎಂ ಕೆ ತಾಜ್‍ಪೀರ್ ಅಧಿಕಾರ ಸ್ವೀಕಾರ
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ, ಮಾ. 01 :  ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಎಂ.ಕೆ.ತಾಜ್‍ಪೀರ್ ಇಂದು ಮಧ್ಯಾಹ್ನ ಪ್ರಾಧಿಕಾರದ ಅವರಣದಲ್ಲಿ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕಾರ ಮಾಡಿದರು.

Advertisement

ಈ ಸಂಧರ್ಬದಲ್ಲಿ ಮಾತನಾಡಿದ ಅವರು ಪಕ್ಷ ಅಧಿಕಾರಕ್ಕ ಬಂದ ನಂತರ ಪಕ್ಷದ ಕಾರ್ಯಕರ್ತರಿಗೆ ಜವಾಬ್ದಾರಿಯನ್ನು ನೀಡಬೇಕೆಂದು ಮಾತನ್ನು ನೀಡಿದ್ದರು ಅದರಂತೆ ಇಂದು ಪಕ್ಷದ ಕಾರ್ಯಕರ್ತನಾದ ನನಗೆ ಈ ಸ್ಥಾನವನ್ನು ನೀಡಿದ್ದಾರೆ. ಬೇರೆ ಬೇರೆ ಜಿಲ್ಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಅಧಿಕಾರವನ್ನು ನೀಡಿದ್ದಾರೆ. ಅದರಂತೆ ನನಗೆ ಚಿತ್ರದುರ್ಗದಲ್ಲಿ ಚಿತ್ರದುರ್ಗ ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷನಾಗಿ ಸೇವೆಯನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಜವಾಬ್ದಾರಿಯನ್ನು ನೀಡಿದ್ದಾರೆ ಇದು ನನಗೆ ಹಿರಿಯ ಪುಣ್ಯದ ಫಲವಾಗಿದೆ. ಜವಾಬ್ದಾರಿಯನ್ನು ಉತ್ಸಾಹ, ಗೌರವದಿಂದ ನಿಮ್ಮಗಳ ಪ್ರೀತಿಯಿಂದ ನಿರ್ವಹಿಸುತ್ತೇನೆ ಎಂದರು.

Advertisement
Advertisement

ಈ ಹಿಂದೆ ಪ್ರಾಧಿಕಾರದ ಅಧ್ಯಕ್ಷರಾಗಿದ್ದವರು ಯಾವ ರೀತಿ ಸಿಬ್ಬಂದಿ ಶಾಸಕರ ಜೊತೆಯಲ್ಲಿ ಮಾರ್ಗದರ್ಶನ, ಸಹಕಾರದಿಂದ ಇದ್ದರೂ ಅದೇ ರೀತಿಯಲ್ಲಿ ನಾನು ಸಹಾ ಚಿತ್ರದುರ್ಗವನ್ನು ಅಭೀವೃದ್ದಿಯತ್ತ ಕೊಂಡ್ಯೂಯುವ ಕಾರ್ಯವನ್ನು ಮಾಡಲಾಗುವುದು. ನಮ್ಮ ಸೇವೆಯನ್ನು ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಸೇವೆಯನ್ನು ಸಲ್ಲಿಸುತ್ತೇನೆ, ಚಿತ್ರದುರ್ಗ ಅಭೀವೃದ್ದಿಗೆ ಕೈಜೋಡಿಸುತ್ತೇನೆ, ಶಾಸಕರು ಸಹಾ ಚಿತ್ರದುರ್ಗದ ಅಭೀವೃದ್ದಿಗೆ ದೂರದೃಷ್ಟಿಯನ್ನು ಹೊಂದಿದ್ದಾರೆ. ಅವರ ಜೊತೆಯಲ್ಲಿ ಕೈಜೋಡಿಸಿ ಚಿತ್ರದುರ್ಗವನ್ನು ಇನ್ನಷ್ಟು ಅಭೀವೃದ್ದಿಯತ್ತ ಕೊಂಡ್ಯೂಯಲಾಗುವುದು ಎಂದರು.

ಇದು ನನಗೆ ಬಯಸದೇ ಬಂದ ಭಾಗ್ಯವಾಗಿದೆ. ನಮ್ಮ ಪಕ್ಷದಲ್ಲಿ ಹಲವಾರು ವರ್ಷಗಳಿಂದು ದುಡಿಮೆಯನ್ನು ಮಾಡಿರುವ ಕಾರ್ಯಕರ್ತರಿಗೆ ಈ ಸ್ಥಾನವನ್ನು ನೀಡುವಂತೆ ನಾನು ಪಕ್ಷದ ವರಿಷ್ಠರಿಗೆ ಜಿಲ್ಲಾಧ್ಯಕ್ಷನಾಗಿಯೇ ನಾನು ತಿಳಿಸಿದ್ದೇ ಅದರೆ ಪಕ್ಷದ ವರಿಷ್ಠರು ಮುಂಚೆ ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷರಿಗೆ ಜವಾಬ್ದಾರಿಯನ್ನು ನೀಡುವುದಾಗಿ ತಿಳಿಸಿ, ನಂತರ ಬೇರೆಯವರಿಗೆ ಎಂದು ನನಗೆ ಆದೇಶವನ್ನು ನೀಡಿದ್ದರಿಂದ ಇಂದು ನಾನು ಅಧಿಕಾರವನ್ನು ತೆಗೆದುಕೊಳ್ಳುತ್ತಿದ್ದೇನೆ ಪಕ್ಷ ನೀಡಿದ ಸೂಚನೆಯನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತೇನೆ ಎಂದರು.

ಶಾಸಕರಾದ ಕೆ.ಸಿ.ವಿರೇಂದ್ರ ಪಪ್ಪಿ ಮಾತನಾಡಿ, ಕಾಂಗ್ರಸ್ ಜಿಲ್ಲಾಧ್ಯಕ್ಷರು ಪಕ್ಷಕ್ಕೆ ಮಾಡಿರುವ ಸೇವೆಯನ್ನು ಗುರುತಿಸಿ ಪಕ್ಷದ ರಾಜ್ಯ ನಾಯಕರು ಅವರಿಗೆ ಅಧಿಕಾರವನ್ನು ನೀಡಿದೆ. ಅವರಿಂದ ಸಲಹೆಯನ್ನು ಪಡೆಯುವಷ್ಟು ಅನುಭವವನ್ನು ತಾಜ್‍ಪೀರ್ ಹೊಂದಿದ್ದಾರೆ. ಅವರ ನೇತೃತ್ವದಲ್ಲಿ ಸಹಯೋಗದೊಂದಿಗೆ ಚಿತ್ರದುರ್ಗವನ್ನು ಅಭೀವೃದ್ದಿ ಪಥದತ್ತ ತೆಗೆದುಕೊಂಡು ಹೋಗಬೇಕಿದೆ. ನಮ್ಮ ಸಂಪೂರ್ಣವಾದ ಸಹಕಾರ ಪೂರ್ಣ ಪ್ರಮಾಣದಲ್ಲಿ ಇದೆ. ಎಂದರು.

ನಗರಾಭೀವೃದ್ದಿ ಪ್ರಾಧಿಕಾರದ ಆಯುಕ್ತರಾದ ವಿಜಯಕುಮಾರ್, ಕಾಂಗ್ರೆಸ್ ಮುಖಂಡರಾದ ಹಾಲಸ್ವಾಮಿ, ಸಂಪತ್ ಕುಮಾರ್, ಮೈಲಾರಪ್ಪ, ನೇತಾಜಿ, ಸುರೇಶ್ ಬಾಬು, ಖಾಸಿಂಆಲಿ ಎನ್.ಡಿ.ಕುಮಾರ್, ಮಧುಗೌಡ, ಲಕ್ಷ್ಮೀಕಾಂತ, ಸೇರಿದಂತೆ ಇತರೆ ಹಲವಾರು ಜನ ಭಾಗವಹಿಸಿದ್ದರು.

Advertisement
Tags :
Advertisement