Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಗಣಿ ಅಧಿಕಾರಿಗಳ ದಾಳಿ : ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬ್ಲಾಕ್ ಗ್ರಾನೈಟ್ ಕಲ್ಲು ಮತ್ತು ಲಾರಿ ವಶ

12:06 PM Jan 21, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ. ಜನವರಿ.21 : ಪರವಾನಗಿ ಇಲ್ಲದೆ ಅನಧಿಕೃತವಾಗಿ ಗ್ರಾನೈಟ್ ಕಲ್ಲನ್ನು ಸಾಗಣೆ ಮಾಡುತ್ತಿದ್ದ ಒಂದು ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಜಿಲ್ಲೆಯ ಹೊಸದುರ್ಗ ಪಟ್ಟಣ ಬಳಿ ಗಣಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ
ಬ್ಲಾಕ್ ಗ್ರಾನೈಟ್ ಹೊಂದಿದ್ದ 72 ಚಕ್ರಗಳನ್ನು ಹೊಂದಿದ್ದ ಲಾರಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Advertisement

ವಿಗ್ರಹ ನಿರ್ಮಾಣಕ್ಕೆ ಬಳಸಲಾಗುವ ಬೃಹತ್ ಕಪ್ಪುಶಿಲೆಯನ್ನು
ಹೆಗ್ಗೆರೆ ಬೆಟ್ಟದಿಂದ ಸಾಗಿಸುತ್ತಿದ್ದರು ಎನ್ನಲಾಗಿದೆ. ಖಚಿತವಾದ ಮಾಹಿತಿ ಮೇರೆಗೆ ಚಿತ್ರದುರ್ಗ ಗಣಿ ಇಲಾಖೆಯ ಡಿಡಿ ಮಹೇಶ್ ಮತ್ತು ಶ್ರಾವಣಿಯವರ ನೇತೃತ್ವದಲ್ಲಿ ಈ ದಾಳಿಯನ್ನು ನಡೆಸಲಾಗಿದೆ.

ಹೊಸದುರ್ಗ ವ್ಯಾಪ್ತಿಯಿಂದ ಬೆನ್ನತ್ತಿದ್ದ ಗಣಿ ಅಧಿಕಾರಿಗಳು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರ್ ವ್ಯಾಪ್ತಿಯಲ್ಲಿ ಟ್ರಕ್ ಅನ್ನು ತಡೆಯಲಾಗಿದ್ದು, ದಾಳಿ ತಿಳಿದ ಆರೋಪಿಗಳು ಶಿಲೆಯಿರುವ ವಾಹನ ಬಿಟ್ಟು  ಪರಾರಿಯಾಗಿದ್ದಾರೆ. ತುಮಕೂರು ಜಿಲ್ಲೆ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
block granite stonechitradurgahosadurgahuliyaruillegallyLorryMineOfficialsraidseizedsuddionesuddione newstransportedಅಕ್ರಮಕಲ್ಲುಗಣಿ ಅಧಿಕಾರಿಗಳುಚಿತ್ರದುರ್ಗತುಮಕೂರುದಾಳಿಬ್ಲಾಕ್ ಗ್ರಾನೈಟ್ಮೌಲ್ಯಲಕ್ಷಾಂತರ ರೂಪಾಯಿಲಾರಿವಶಸುದ್ದಿಒನ್ಸುದ್ದಿಒನ್ ನ್ಯೂಸ್ಹುಳಿಯಾರುಹೊಸದುರ್ಗ
Advertisement
Next Article