ಗಣಿ ಅಧಿಕಾರಿಗಳ ದಾಳಿ : ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬ್ಲಾಕ್ ಗ್ರಾನೈಟ್ ಕಲ್ಲು ಮತ್ತು ಲಾರಿ ವಶ
ಸುದ್ದಿಒನ್, ಚಿತ್ರದುರ್ಗ. ಜನವರಿ.21 : ಪರವಾನಗಿ ಇಲ್ಲದೆ ಅನಧಿಕೃತವಾಗಿ ಗ್ರಾನೈಟ್ ಕಲ್ಲನ್ನು ಸಾಗಣೆ ಮಾಡುತ್ತಿದ್ದ ಒಂದು ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ಜಿಲ್ಲೆಯ ಹೊಸದುರ್ಗ ಪಟ್ಟಣ ಬಳಿ ಗಣಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ
ಬ್ಲಾಕ್ ಗ್ರಾನೈಟ್ ಹೊಂದಿದ್ದ 72 ಚಕ್ರಗಳನ್ನು ಹೊಂದಿದ್ದ ಲಾರಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ವಿಗ್ರಹ ನಿರ್ಮಾಣಕ್ಕೆ ಬಳಸಲಾಗುವ ಬೃಹತ್ ಕಪ್ಪುಶಿಲೆಯನ್ನು
ಹೆಗ್ಗೆರೆ ಬೆಟ್ಟದಿಂದ ಸಾಗಿಸುತ್ತಿದ್ದರು ಎನ್ನಲಾಗಿದೆ. ಖಚಿತವಾದ ಮಾಹಿತಿ ಮೇರೆಗೆ ಚಿತ್ರದುರ್ಗ ಗಣಿ ಇಲಾಖೆಯ ಡಿಡಿ ಮಹೇಶ್ ಮತ್ತು ಶ್ರಾವಣಿಯವರ ನೇತೃತ್ವದಲ್ಲಿ ಈ ದಾಳಿಯನ್ನು ನಡೆಸಲಾಗಿದೆ.
ಹೊಸದುರ್ಗ ವ್ಯಾಪ್ತಿಯಿಂದ ಬೆನ್ನತ್ತಿದ್ದ ಗಣಿ ಅಧಿಕಾರಿಗಳು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರ್ ವ್ಯಾಪ್ತಿಯಲ್ಲಿ ಟ್ರಕ್ ಅನ್ನು ತಡೆಯಲಾಗಿದ್ದು, ದಾಳಿ ತಿಳಿದ ಆರೋಪಿಗಳು ಶಿಲೆಯಿರುವ ವಾಹನ ಬಿಟ್ಟು ಪರಾರಿಯಾಗಿದ್ದಾರೆ. ತುಮಕೂರು ಜಿಲ್ಲೆ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.