Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕ್ ಬ್ಯಾಂಕ್‍ಗಳ ಇತಿಹಾಸದಲ್ಲಿಯೇ ಮೈಲಿಗಲ್ಲು : ಸಹಕಾರಿ ರಂಗದಲ್ಲಿ ಪ್ರಥಮ ಸ್ಥಾನ : ಎಸ್.ಆರ್.ಲಕ್ಷ್ಮೀಕಾಂತರೆಡ್ಡಿ

07:43 PM Jul 07, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ. ಜು. 07 : ನಮ್ಮ ಬ್ಯಾಂಕ್‍ನಲ್ಲಿ ಕಳೆದ 17 ವರ್ಷಗಳಿಂದ ಎನ್.ಪಿ.ಎ ಶೂನ್ಯವಾಗಿದೆ. ಇದು ಬ್ಯಾಂಕ್‍ಗಳ ಇತಿಹಾಸದಲ್ಲಿಯೇ ಮೈಲಿಗಲ್ಲು ಎನ್ನಬಹುದಾಗಿದೆ. ಇದರ ಬಗ್ಗೆ ಸಹಕಾರಿ ರಂಗದಲ್ಲಿ ಪ್ರಥಮ ಸ್ಥಾನದಲ್ಲಿ ಇದ್ದೇವೆ. ಎಲ್ಲದರಲ್ಲೂ ಸಹಾ ನಮ್ಮ ಬ್ಯಾಂಕ್ ಪ್ರಥಮ ಶ್ರೇಣಿಯಲ್ಲಿ ಇದೆ ಎಂದು ದಿ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕ್ ನಿ.,ದ ಅಧ್ಯಕ್ಷರಾದ ಸಹಕಾರ ರತ್ನ ಎಸ್.ಆರ್.ಲಕ್ಷ್ಮೀಕಾಂತರೆಡ್ಡಿ ತಿಳಿಸಿದರು.

Advertisement

ಚಿತ್ರದುರ್ಗ ನಗರದ ಚಳ್ಳಕೆರೆ ರಸ್ತೆಯಲ್ಲಿರುವ ಎಸ್.ಜಿ. ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬ್ಯಾಂಕನ 2023-24 ನೇ ಸಾಲಿನ ವಾರ್ಷಿಕ 73ನೇ ಸರ್ವಸದಸ್ಯರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ನಮ್ಮ ಬ್ಯಾಂಕನ ಶಾಖೆಗಳನ್ನು ಜಿಲ್ಲೆಯಿಂದ ಹೊರಗಡೆಯಲ್ಲಿ ನಮ್ಮ ಬ್ಯಾಂಕಿನ ಶಾಖೆಗಳನ್ನು ತೆರೆಯುವುದರ ಬಗ್ಗೆ ಚಿಂತನೆಯನ್ನು ನಡೆಸಲಾಗುತ್ತಿದ್ದು, ಚಿತ್ರದುರ್ಗದ ಮೂರು ಶಾಖೆಗಳಲ್ಲಿ ಎಟಿಎಂ ಯಂತ್ರವನ್ನು ಮುಂದಿನ ದಿನದಲ್ಲಿ ಬಳಕೆಗೆ ಗ್ರಾಹಕರಿಗೆ ನೀಡಲಾಗುವುದು. ಬ್ಯಾಂಕ್ ಇಷ್ಟೊಂದು ಪ್ರಗತಿಯನ್ನು ಸಾಧಿಸಲಾಗಿದೆ ಎಂದರೆ ಅದಕ್ಕೆ ಆಡಳಿತ ಮಂಡಳಿಯ ಸದಸ್ಯರು, ಷೇರುದಾರರು, ಬ್ಯಾಂಕ್‍ನ ಸಿಬ್ಬಂದಿಯ ಸಹಕಾರ ಮುಖ್ಯವಾಗಿದೆ ಎಂದರು.

Advertisement

ನಮ್ಮ ಬ್ಯಾಂಕ್‍ನಲ್ಲಿ ಕಳೆದ 17 ವರ್ಷಗಳಿಂದ ಎನ್.ಪಿ.ಎ ಶೂನ್ಯವಾಗಿದೆ. ಇದು ಬ್ಯಾಂಕ್‍ಗಳ ಇತಿಹಾಸದಲ್ಲಿಯೇ ಮೈಲಿಗಲ್ಲು ಎನ್ನಬಹುದಾಗಿದೆ. ಇದರ ಬಗ್ಗೆ ಸಹಕಾರಿ ರಂಗದಲ್ಲಿ ಪ್ರಥಮ ಸ್ಥಾನದಲ್ಲಿ ಇದ್ದೇವೆ. ಎಲ್ಲದರಲ್ಲೂ ಸಹಾ ನಮ್ಮ ಬ್ಯಾಂಕ್ ಪ್ರಥಮ ಶ್ರೇಣಿಯಲ್ಲಿ ಇದೆ. ಮುಂದಿನ ದಿನದಲ್ಲಿ ಬರುವ ಅಮೃತ ವರ್ಷದ ಕಾರ್ಯಕ್ರಮಕ್ಕಾಗಿ 50 ಲಕ್ಷ ರೂ.ಗಳನ್ನು ತೆಗೆದಿರಿಸಲು ನಿರ್ಧಾರ ಮಾಡಲಾಯಿತು. ಈಗಾಗಲೇ ಕಳೆದ ವರ್ಷ 30 ಲಕ್ಷ ರೂ.ಗಳನ್ನು ತೆಗದಿರಿಸಲಾಗಿದೆ ಎಂದು ತಿಳಿಸಿದರು.

ನಗರದ ಮರ್ಚೆಂಟ್ ಬ್ಯಾಂಕ್ ಪ್ರಗತಿ ಪಥದಲ್ಲಿ ಇದೆ. ತಾವು ಯಾರೂ ಸಹಾ ಬ್ಯಾಂಕಿನ ಬಗ್ಗೆ ಯೋಚನೆ ಮಾಡಬೇಕಾದ್ದಿಲ್ಲ, ನಮ್ಮ ಬ್ಯಾಂಕ್‍ನಲ್ಲಿಯೇ ಠೇವಣಿಯನ್ನು ಮಾಡಬೇಕಿದೆ ಬೇರೆ ಬ್ಯಾಂಕ್‍ನಲ್ಲಿ ಠೇವಣಿ ಯನ್ನು ಮಾಡದೇ ನಮ್ಮ ಬ್ಯಾಂಕ್‍ನಲ್ಲಿಯೇ ಠೇವಣಿ ಮಾಡುವಂತೆ ಮನವಿ ಮಾಡಿದ್ದು, ಲಾಭವನ್ನು ನಿಮಗೆ ನೀಡಲಾಗುವುದು. ಬೇರೆ ರಾಷ್ಟ್ರೀಕೃತ ಬ್ಯಾಂಕ್ ನೀಡಿದಂತೆ ವಿವಿಧ ರೀತಿಯ ಪ್ರಯೋಜನಗಳನ್ನು ನಮ್ಮ ಬ್ಯಾಂಕ್‍ನಲ್ಲಿಯೂ ಸಹಾ ನೀಡಲಾಗುತ್ತಿದೆ ಇದರ ಸದುಪಯೋಗವನ್ನು ಗ್ರಾಹಕರು ಪಡೆಯಬೇಕಿದೆ. ಬ್ಯಾಂಕ್ ಅಭೀವೃದ್ದಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಮನವಿ ಮಾಡಿದರು.

ಬ್ಯಾಂಕ್ ಈ ವರ್ಷದಲ್ಲಿ 310 ಕೋಟಿ ರೂ.ಗಳ ವ್ಯವಹಾರವನ್ನು ಮಾಡಿದೆ. ಸಲ ವಸೂಲಾತಿಯಲ್ಲಿಯೂ ಸಹಾ ಬ್ಯಾಂಕ್ ಉತ್ತಮ ಸ್ಥಿತಿಯಲ್ಲಿದೆ, ಎನ್.ಪಿ.ಎ. ಶೇ. 0.75 ರಷ್ಟಿದ್ದು, ನಿವ್ವಳ ಎನ್.ಪಿ.ಎ. ಶೂನ್ಯ ಪ್ರಮಾಣದಲ್ಲಿದೆ. ಬ್ಯಾಂಕಿನ ವರಮಾನದಲ್ಲಿಯೂ ಸಹಾ ಉತ್ತಮ ಸ್ಥಿತಿಯಲ್ಲಿ ಇದೆ. 2023-24ನೇ ಸಾಲಿನ ಆರ್ಥಿಕ ವರ್ಷದಲ್ಲಿ ಬ್ಯಾಂಕು 6.38 ಕೋಟಿಯನ್ನು ಗಳಿಸಿದೆ. ಬ್ಯಾಂಕ್ ಇದುವರೆವಿಗೂ 5777 ಸದಸ್ಯರನ್ನು ಹೊಂದಿದ್ದು, 1.47 ಕೋಟಿ ಷೇರು ಬಂಡವಾಳವನ್ನು ಹೊಂದಿದೆ. ಈ ಸಾಲಿನಲ್ಲಿ 78 ಜನ ಹೂಸ ಸದಸ್ಯತ್ವವನ್ನು ಪಡೆದಿದ್ದಾರೆ. 91 ಜನ ಸದಸ್ಯರು ತಮ್ಮ ಸದಸ್ಯತ್ವವನ್ನು ಸಮಾಪನಗೊಳಿಸಿದ್ದಾರೆ.

ಬ್ಯಾಂಕ್ 31.03.2023ರ ಅಂತ್ಯಕ್ಕೆ ಮೀಸಲು ನಿಧಿ ಹಾಗೂ ಇತರೆ ನಿಧಿಗಳ ಬಾಬ್ತು 38.09 ಕೋಟಿಗಳಿದ್ದು, 2023-24ನೇ ಸಾಲಿನಲ್ಲಿ ನಿವ್ವಳ ಲಾಭದ ವಿಲೇವಾರಿ ನಂತರ ನಿದಿಗಳ ಬಾಬ್ತು 42.14 ಕೋಟಿಗಳಾಗುತ್ತದೆ. 2023ರ ಅಂತ್ಯಕ್ಕೆ ಬ್ಯಾಂಕಿನ ಸ್ವಂತ ಬಂಡವಾಳವು 39.56 ಕೋಟಿಗಳಿದ್ದು, 2024ನೇ ಸಾಲಿನ ಲಾಭದ ವಿಲೇವಾರಿ ನಂತರ ಸ್ವಂತ ಬಂಡವಾಳವು 43.61 ಕೋಟಿಗಳಾಗಿವೆ. ಇದ್ದಲ್ಲದೆ ಬ್ಯಾಂಕಿನ ಠೇವಣಿ ಸಂಗ್ರಹದ ಪ್ರಮಾಣವೂ ಸಹಾ ಹೆಚ್ಚಾಗಿದೆ. ಕಳೆದ ಸಾಲಿನಲ್ಲಿ ಬ್ಯಾಂಕಿನ ಒಟ್ಟು ಠೇವಣಿಯೂ 164.75 ಕೋಟಿಗಳಿದ್ದು, 2024ಕ್ಕೆ 188.59 ಕೋಟಿಗಳಾಗಿದೆ. ವರ್ಷದಿಂದ ವರ್ಷಕ್ಕೆ ಬ್ಯಾಂಕ್‍ನ ಠೇವಣಿಗಳ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ಸಾಲಿಗಿಂತ 23.84 ಕೋಟಿ ಹೆಚ್ಚುವರಿಯಾಗಿ ಸಂಗ್ರಹವಾಗಿದೆ ಎಂದು ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.

ನೂತನವಾಗಿ ಕರ್ನಾಟಕದ ಸರ್ಕಾರದ ಆದಿ ಜಾಂಬವ ಅಭಿವೃದ್ದಿ ನಿಗಮ ಅಧ್ಯಕ್ಷರಾಗಿ ನೇಮಕವಾಗಿರುವ ಜಿ.ಎಸ್. ಮಂಜುನಾಥ್‍ರವರನ್ನು ಈ ಸಂದರ್ಭದಲ್ಲಿ ದಿ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕ್ ನಿಯಮಿತದವತಿಯಿಂದ ಸನ್ಮಾನಿಸಲಾಯಿತು. ಇದರೊಂದಿಗೆ ಎಸ್.ಎಸ್.ಎಲ್.ಸಿ. ಮತ್ತು ದ್ವೀತೀಯ ಪಿಯುಸಿ ಯಲ್ಲಿ ಉತ್ತಮವಾದ ಅಂಕಗಳನ್ನು ಪಡೆದ ಬ್ಯಾಂಕ್‍ನ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು ಹಾಗೂ ಬ್ಯಾಂಕ್‍ನ ಹಿರಿಯ ಸದಸ್ಯರನ್ನು ಅಭಿನಂದಿಸಲಾಯಿತು. ಕಳೆದ ಒಂದು ವರ್ಷದಲ್ಲಿ ನಿಧನರಾದ ಬ್ಯಾಂಕ್ ಸದಸ್ಯರ ಆತ್ಮಕ್ಕೆ ಒಂದು ನಿಮಿಷ ಮೌನವನ್ನು ಆಚರಿಸುವುದರ ಮೂಲಕ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.

ಸರ್ವ ಸದಸ್ಯರ ಸಭೆಯಲ್ಲಿ ಬ್ಯಾಂಕ್ ಉಪಾಧ್ಯಕ್ಷರಾದ ಎಲ್.ಈ.ಶ್ರೀನಿವಾಸ್ ಬಾಬು, ನಿರ್ದೇಶಕರುಗಳಾದ ಎನ್.ಜಯ್ಯಣ್ಣ, ಪಿ.ಎಲ್.ಸುರೇಶ್ ಬಾಬು, ರಘುರಾಮ ರೆಡ್ಡಿ, ಜಿ.ರಾಜಾನಾಯ್ಕ್, ಎಸ್.ಮಂಜುನಾಥ್, ಟಿ.ಎಚ್.ರಾಜಣ್ಣ, ಜೆ.ವಿ.ಮುಕುಂದರಾವ್, ಜೆ.ಸುರೇಶ್, ಡಿ.ಪ್ರಕಾಶ್, ಶ್ರೀಮತಿ ಎಸ್.ಇಂದ್ರಮ್ಮ, ಶ್ರೀಮತಿ ಸಿ.ಸುಜಾತ, ವೃತ್ತಿ ಪರ ನಿರ್ದೇಶಕರಾದ ಎಂ.ವಿ.ರಾಜೀವ್, ಕೆ.ಸುಹಾಸ್ ಮತ್ತು ವ್ಯವಸ್ಥಾಪನ ಮಂಡಳಿ ಸದಸ್ಯರಾದ ಕೆ.ಸಿದ್ದಯ್ಯ, ವಿ.ಸೋಮಶೇಖರ್, ಶ್ರೀಮತಿ ರಮ್ಯ ಮಂಜುನಾಥ್ ಭಾಗವಹಿಸಿದ್ದರು. ಸೂರ್ಯ ರಾಜೇಶ್ವರಿ ಪ್ರಾರ್ಥಿಸಿದರೆ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಕೆ.ಆರ್.ಮಲ್ಲಿಕಾರ್ಜನ್ ಕಾರ್ಯಕ್ರಮ ನಿರೂಪಿಸಿದರು.

Advertisement
Tags :
bengaluruchitradurgaCooperative ArenaFirst placeMerchants Souhardha Sahakar Bankmilestone in the history of banksS.R. Lakshmikanthareddysuddionesuddione newsಇತಿಹಾಸಎಸ್.ಆರ್.ಲಕ್ಷ್ಮೀಕಾಂತರೆಡ್ಡಿಚಿತ್ರದುರ್ಗಪ್ರಥಮ ಸ್ಥಾನಬೆಂಗಳೂರುಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕ್ಮೈಲಿಗಲ್ಲುಸಹಕಾರಿ ರಂಗಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article