For the best experience, open
https://m.suddione.com
on your mobile browser.
Advertisement

ಮಗನ ಆತ್ಮಕ್ಕೆ ಶಾಂತಿ ಸಿಗಲಿ : ರೇಣುಕಾಸ್ವಾಮಿ ತಂದೆ ಹೇಳಿದ್ದೇನು ?

06:46 PM Oct 30, 2024 IST | suddionenews
ಮಗನ ಆತ್ಮಕ್ಕೆ ಶಾಂತಿ ಸಿಗಲಿ   ರೇಣುಕಾಸ್ವಾಮಿ ತಂದೆ ಹೇಳಿದ್ದೇನು
Advertisement

ಚಿತ್ರದುರ್ಗ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿದ್ದ ನಟ ದರ್ಶನ್ ಸದ್ಯ ಮಧ್ಯಂತರ ಜಾಮೀನಿನ ಮೇಲೆ ರಿಲೀಸ್ ಆಗಿದ್ದಾರೆ. ಬಳ್ಳಾರಿ ಜೈಲು ಸೇರಿದ ಮೇಲೆ ವಿಪರೀತ ಬೆನ್ನು ನೋವಿನಿಂದ ಬಳಲುತ್ತಿದ್ದರು. ಜೈಲು ಅಧಿಕಾರಿಗಳು ಮೆಡಿಕಲ್ ಬೆಡ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದರು. ಆದರೂ ದರ್ಶನ್ ಅವರನ್ನು ಬೆನ್ನು ನೋವು ಬೆಂಬಿಡದೆ ಕಾಡಿತ್ತು. ಚಿಕಿತ್ಸೆಯ ಅಗತ್ಯವಿದ್ದ ಕಾರಣ ಜಾಮೀನು ನೀಡಲಾಗಿದೆ. ಈ ಬಗ್ಗೆ ಮೃತ ರೇಣುಕಾಸ್ವಾಮಿಯ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.

Advertisement

Advertisement

ಚಿತ್ರದುರ್ಗ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಹೈ ಕೋರ್ಟ್ ಆದೇಶದಂತೆ ದರ್ಶನ್ ಗೆ ವೈದ್ಯಕೀಯ ಚಿಕಿತ್ಸೆ ಬೇಲ್‌ ನೀಡಿದೆ. ಈ ವಿಚಾರ ಕಾನೂನು, ನ್ಯಾಯಾಂಗದ ವಿಚಾರವಾಗಿದೆ.ನಾವು ಈ ಕುರಿತು ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂಬುದು ನಮ್ಮ ಆಗ್ರಹ ಸರಕಾರ, ನ್ಯಾಯಾಂಗದ ಬಗ್ಗೆ ನಮಗೆ ನಂಬಿಕೆಯಿದೆ. ಈ‌ ಮೂಲಕ ನಮ್ಮ ಮಗನ ಆತ್ಮಕ್ಕೆ ಶಾಂತಿ ಸಿಗಲಿ ಎಮಬುದು ನಮ್ಮ ಉದ್ದೇಶ. ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಲಿ, ಅದು ದರ್ಶನ್ ಅಭಿಮಾನಿಗಳಿಗೆ ಬಿಟ್ಟಿದ್ದು, ನಮಗೆ ನ್ಯಾಯಾಂಗದಲ್ಲಿ‌ ನಂಬಿಕೆ ಇದೆ. ನಾವು ದಾವಣಗೆರೆಗೆ ತೆರಳಿ ದೇವರ ದರ್ಶನ ತಗೊಂಡು ಬಂದಿವಿ , ಮೊಮ್ಮಗನ ಮುಖ ನೋಡೀಕೆ ಹೋಗಿದ್ವಿ,ಮಗು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ. ಸಧ್ಯ ತಾಯಿ ಮಗುವಿನ ಆರೋಗ್ಯ ಸುಧಾರಿಸಿದೆ ಎಂದು ತಿಳಿಸಿದರು.

Advertisement

ವೈದ್ಯರು ಕೊಟ್ಟ ಸಲಹೆಯಂತೆ ಅವರ ತಂದೆ ತಾಯಿ ಜೋಪಾನ‌ ಮಾಡ್ತಿದ್ದಾರೆ ಮಗುವಿಗೆ ಲಿಂಗಧಾರಣೆ, ನಾಮಕರಣದಂಥ ಕಾರ್ಯಕ್ರಮ ಆಗಬೇಕಿದೆ. ನಾಮಕರಣ ಬಗ್ಗೆ ನಾವಿನ್ನೂ ನಿರ್ಧಾರ ಮಾಡಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಅನ್ನೋದು ನಮ್ಮ‌ಗುರಿ ಎಂದು ಮೃತ ರೇಣುಕಾಸ್ವಾಮಿ ತಂದೆ ಕಾಶೀನಾಥ ಶಿವನಗೌಡ್ರ ಹೇಳಿದರು.

Advertisement

Advertisement
Tags :
Advertisement