For the best experience, open
https://m.suddione.com
on your mobile browser.
Advertisement

ಪರಿಸರ ನಾಶವಾದರೆ ಮನುಕುಲಕ್ಕೆ ಆಪತ್ತು : ಮಂಜುನಾಥ್ ಭಾಗವತ್

05:47 PM Jul 01, 2024 IST | suddionenews
ಪರಿಸರ ನಾಶವಾದರೆ ಮನುಕುಲಕ್ಕೆ ಆಪತ್ತು   ಮಂಜುನಾಥ್ ಭಾಗವತ್
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ ಜು. 01 : ಪರಿಸರದ ಬಗ್ಗೆ ಎಲ್ಲರೂ ಕಾಳಜಿಯನ್ನು ವಹಿಸಬೇಕಿದೆ. ಪರಿಸರ ನಾಶವಾದರೆ ಮನುಕುಲಕ್ಕೆ ಆಪತ್ತು ಇದೆ. ಇದ್ದಲ್ಲದೆ ಸೂರ್ಯನಿಂದ ಸಿಗುವಂತೆ ಉಚಿತವಾದ ಶಾಖವನ್ನು ಬಳಕೆ ಮಾಡಿಕೊಂಡು ವಿದ್ಯುತ್ ಆಗಿ ಪರಿವರ್ತನೆ ಮಾಡಿಕೊಂಡು ಬಳಕೆ ಮಾಡಿಕೊಂಡು ಮಾರಾಟವನ್ನು ಸಹಾ ಮಾಡಬಹುದಾಗಿದೆ ಎಂದು ರೋಟರಿ ಕ್ಲಬ್ ಚಿನ್ಮೂಲಾದ್ರಿಯ ಅಧ್ಯಕ್ಷರಾದ ಮಂಜುನಾಥ್ ಭಾಗವತ್ ತಿಳಿಸಿದರು.

Advertisement

ಚಿತ್ರದುರ್ಗ ನಗರದ ವಿ.ಪಿ.ಬಡಾವಣೆಯಲ್ಲಿನ ಸೆಲ್ಕೋ ಸೋಲಾರ್ ಸಂಸ್ಥೆಯ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಮತ್ತು ನವೀಕರಿಸಬಹುದಾದ ಇಂಧನದ ಸಾಧ್ಯತೆಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ತಾಪಮಾನ ಹೆಚ್ಚಾಗುತ್ತಿದೆ ಇದನ್ನು ಕಡಿಮೆ ಮಾಡಲು ಮರ-ಗಿಡಗಳಿಂದ ಮಾತ್ರ ಸಾಧ್ಯವಿದೆ ಆದರೆ ನಾವುಗಳು ಅಭೀವೃದ್ದಿಯ ನೆಪದಲ್ಲಿ ಮರಗಳನ್ನು ಕಡಿದು ಹಾಕುತ್ತಿದ್ದೇವೆ, ಮತ್ತೇ ಸಸಿಗಳನ್ನು ನೆಡುವ ಕಾರ್ಯವಾಗಬೇಕಿದೆ. ಇದರಿಂದ ಮಾತ್ರ ನಮ್ಮ ತಾಪಮಾನ ಕಡಿಮೆಯಾಗುತ್ತದೆ ಎಂದರು.

Advertisement
Advertisement

ಇತ್ತಿಚಿನ ದಿನಮಾನದಲ್ಲಿ ಎಲ್ಲರು ಸಹಾ ವಿದ್ಯುತ್ ಬಳಕೆಯನ್ನು ಹೆಚ್ಚಾಗಿ ಮಾಡುತ್ತಿದ್ದಾರೆ ಆದರೆ ಉತ್ಪಾದನೆ ಮಾತ್ರ ಕಡಿಮೆ ಇದೆ. ನೀರಿನಿಂದ ಉತ್ಪಾದನೆಯಾಗುವ ವಿದ್ಯುತ್ ಬದಲಾಗಿ ಸೂರ್ಯನಿಂದ ತಯಾರಿಗುವ ವಿದ್ಯುತ್‌ನ್ನು ನಮ್ಮ ಮನೆಯ ಮೇಲೆ ತಯಾರು ಮಾಡುವುದರ ಮೂಲಕ ಬಳಕೆ ಮಾಡಬಹುದಾಗಿದೆ ಇದಕ್ಕೆ ಸಹಕಾರ ನೀಡುವುದ್ದಲ್ಲದೆ ಸಹಾಯಧನವನ್ನು ಸಹಾ ನೀಡುತ್ತಿದೆ, ಮಂದಿನ ದಿನದಲ್ಲಿ ನೀರಿನಿಂದ ತಯಾರುಗುವ ವಿದ್ಯುತ್ ಪ್ರಮಾಣ ಕಡಿಮೆಯಾಗಿ ಎಲ್ಲದಕ್ಕೂ ಸಹಾ ಸೋಲಾರ ಬಳಕೆಯನ್ನು ಮಾಡುವ ದಿನಗಳು ದೂರ ಇಲ್ಲ ಈಗಾಗಲೇ ಸೋಲಾರನ ವಾಹನಗಳು ಒಲೆಗಳು, ವಿವಿಧ ರೀತಿಯ ಯಂತ್ರಗಳು ಸಹಾ ಮಾರುಕಟ್ಟೆಗೆ ಬಂದಿವೆ ಇದರ ಬಳಕೆ ಹೆಚ್ಚಾಗಬೇಕಿದೆ ಎಂದರು.

ಉದ್ಯಮಿ ಅರುಣ್ ಕುಮಾರ್ ಮಾತನಾಡಿ, ಪರಿಸರವನ್ನು ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ. ಯಾವುದೇ ಕಾರಣಕ್ಕೂ ಪರಿಸರವನ್ನು ನಿರ್ಲಕ್ಷ ಮಾಡಬಾರದು, ಮನೆಯಲ್ಲಿ ಮಕ್ಕಳಿಗೆ ಚಿಕ್ಕವರಿಂದಾಗಲೇ ಪರಿಸರದ ಬಗ್ಗೆ ತಿಳಿಸುವ ಕಾರ್ಯವನ್ನು ಮಾಡಬೇಕಿದೆ, ಅವರಿಂದಲೇ ಸಸಿಯನ್ನು ನಡೆಸುವುದರ ಮೂಲಕ ಪ್ರತಿ ದಿನ ನೀರನ್ನು ಹಾಕಿಸುವ ಕಾರ್ಯವನ್ನು ಮಾಡಬೇಕಿದೆ, ಇಂದಿನ ದಿನದಲ್ಲಿ ಸೂರ್ಯನ ಬಳಕನ್ನು ವಿದ್ಯುತ್ ಆಗಿ ಪರಿವರ್ತನೆ ಮಾಡಿ ಅದನ್ನು ಬಳಕೆ ಮಾಡುವುದರಿಂದ ನಮಗೆ ಉಳಿತಾಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಚಿನ್ಮೂಲಾದ್ರಿಯ ಜಂಟಿ ಕಾರ್ಯದರ್ಶಿ ಶೈಲಾ ಆರುಣ್ ಕುಮಾರ್, ಉಪಾಧ್ಯಕ್ಷರಾದ ಗುರುಮೂರ್ತಿ, ಹಾಸ್ಯ ಕವಿ ಜಗನ್ನಾಥ್,ತಿಪ್ಪೇಸ್ವಾಮಿ, ಅಜ್ಜಯ್ಯ, ನಳಿನ ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement
Tags :
Advertisement