For the best experience, open
https://m.suddione.com
on your mobile browser.
Advertisement

ನೇರ್ಲಗುಂಟೆ ರಾಮಪ್ಪ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ : ಕನಕ

05:25 PM May 25, 2024 IST | suddionenews
ನೇರ್ಲಗುಂಟೆ ರಾಮಪ್ಪ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ   ಕನಕ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಮೇ. 25 :  ಜಿಲ್ಲೆಯ ನೇರ್ಲಗುಂಟೆ ರಾಮಪ್ಪರವರಿಗೆ ಭೋವಿ ಜನಾಂಗದಡಿಯಲ್ಲಿ ವಿಧಾನ ಪರಿಷತ್‍ಗೆ ಸದಸ್ಯರನ್ನಾಗಿ ಮಾಡುವಂತೆ ಶಿಕ್ಷಕರ ಮತ್ತು ಪದವೀಧರರ ರಾಜ್ಯ ಉಪಾಧ್ಯಕ್ಷರಾದ ಕನಕ ಕಾಂಗ್ರೆಸ್ ಮುಖಂಡರನ್ನು ಆಗ್ರಹಿಸಿದ್ದಾರೆ.

Advertisement
Advertisement

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನೆರ್ಲಗುಂಟೆ ರಾಮಪ್ಪ ಅವರು ಕಳೆದ 15 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. 2014 ರಿಂದ ನೆರ್ಲಗುಂಟೆ ರಾಮಪ್ಪರವರು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಪ್ರಯತ್ನ ಮಾಡುತ್ತಿದ್ದಾರೆ.

Advertisement

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ನಮ್ಮ ಸಮುದಾಯಕ್ಕೆ ಯಾವುದೇ ಕ್ಷೇತ್ರದಲ್ಲೂ ಟಿಕೆಟ್ ನೀಡಿರುವುದಿಲ್ಲ. ರಾಜ್ಯದಲ್ಲಿ ಸಾಮಾಜಿಕ ನ್ಯಾಯವನ್ನು ಒದಗಿಸುವಂತಹ ಮುಖ್ಯಮಂತ್ರಿಯಾದ ಸಿದ್ದರಾಮಯ್ಯರವರು ನಮ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಜೂನ್-13 ರಂದು 11 ಸ್ಥಾನಗಳಿಗೆ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಭೋವಿ ಸಮುದಾಯದ ನೆರ್ಲಗುಂಟೆ ರಾಮಪ್ಪರವರನ್ನು ನಾಮ ನಿರ್ದೇಶನ ಮಾಡಬೇಕು. ಆದ್ದರಿಂದ ಕಾಂಗ್ರೆಸ್ ಪಕ್ಷವು ನಮ್ಮ ಸಮುದಾಯವನ್ನು ಪರಿಗಣಿಸಿ ನಮ್ಮ ಸಮುದಾಯದ ನೆರ್ಲಗುಂಟೆ ರಾಮಪ್ಪರವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಬೇಕು. ಈ ವಿಚಾರವಾಗಿ ನಮ್ಮ ಸಮುದಾಯದ ಮುಖಂಡರು ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಒತ್ತಡ ಹೇರಲಿದ್ದೇವೆ ಎಂದು ಕನಕ ತಿಳಿಸಿದರು.

ರಾಮಪ್ಪರವರಿಗೆ ಲೋಕಸಭಾ ಚುನಾವಣೆಯಲ್ಲಿ ಹಲವಾರು ಬಾರಿ ಟೀಕೇಟ್‍ನ್ನು ಕೇಳಲಾಗಿತ್ತು. ಆದರೆ ಕಾಂಗ್ರೆಸ್ ಪಕ್ಷ ನೀಡಿರಲಿಲ್ಲ ಅಲ್ಲದೆ ಈ ಲೋಕಸಭಾ ಚುನಾವಣೆಯ ಸಮಯದಲ್ಲಿಯೂ ಸಹಾ ಭೋವಿ ಸಮುದಾಯಕ್ಕೆ ಚಿತ್ರದುರ್ಗ ಕ್ಷೇತ್ರಕ್ಕೆ ಟೀಕೇಟ್ ನೀಡುವಂತೆ ಮನವಿಯನ್ನು ಮಾಡಲಾಗಿತ್ತು ಆದರೆ ಒಕ್ಷ ನೀಡಲಿಲ್ಲ ಈ ಹಿನ್ನಲೆಯಲ್ಲಿ ವಿಧಾನ ಪರಿಷತ್‍ಗಾದರೂ ನಮ್ಮ ಸಮುದಾಯವರು ಇರಬೇಕಿದೆ ಆದ್ದರಿಂದ ನಮ್ಮ ಸಮುದಾಯದ ಮುಖಂಡರಾದ ನೇರ್ಲಗುಂಟೆ ರಾಮಪ್ಪರವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವಂತೆ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಆಗ್ರಹಿಸಲಾಯಿತು.

ಗೋಷ್ಠಿಯಲ್ಲಿ ಮುದಸಿರ್ ನವಾಜ್, ತಿಪ್ಪೇಸ್ವಾಮಿ, ಚಿಕ್ಕಂದವಾಡಿ, ತಳಕು ತಾ.ಪಂ. ಮಾಜಿ ಸದಸ್ಯ ಜಿ.ತಿಪ್ಪೇಸ್ವಾಮಿ, ಹೆಚ್.ರವೀಂದ್ರನಾಥ್, ಸುಧಾ ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement
Tags :
Advertisement