Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಮಾಜದಲ್ಲಿ ಸಾಮರಸ್ಯ ಕಾಪಾಡುವುದು ಕಾನೂನು ವಿದ್ಯಾರ್ಥಿಗಳ ಜವಾಬ್ದಾರಿ : ಡಾ. ಬಸವಕುಮಾರ ಸ್ವಾಮೀಜಿ

05:13 PM Nov 17, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ನ,17 : ನಮ್ಮ ವಿದ್ಯಾಪೀಠದ  ಕಾನೂನು ಕಾಲೇಜು  ಗ್ರಾಮೀಣ, ಬಡ ಮಧ್ಯಮ ವರ್ಗದ  ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದೆ.ಅದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಸಮಾಜದ ಹಿತ ರಕ್ಷಕರಾಗಿ ಕರ್ತವ್ಯ ನಿರ್ವಹಿಸಬೇಕಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಹಾಗೂ ಎಸ್ ಜೆ ಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ
ಡಾ. ಬಸವಕುಮಾರ ಸ್ವಾಮಿಗಳು ಕರೆ ನೀಡಿದರು.

Advertisement

 

ಶ್ರೀಗಳವರು ನಗರದ ಎಸ್.ಜೆ. ಎಂ ಕಾನೂನು ಮಹಾವಿದ್ಯಾಲಯದಲ್ಲಿ  ನಡೆದ ಪ್ರಥಮ ವರ್ಷದ ಕಾನೂನು ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ರಾಷ್ಟ್ರೀಯ ಸೇವಾ ಯೋಜನೆಯ ಹಾಗು ಲೆಕ್ಸ್  ಯೂನಿಯನ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ದಿವ್ಯಾಸಾನಿಧ್ಯ ವಹಿಸಿ ಮಾತನಾಡಿದ ಅವರು  ಇಂದಿನ ದುಬಾರಿ ಜಗತ್ತಿನಲ್ಲಿ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಎಸ್.ಜೆ.ಎಂ ವಿದ್ಯಾಪೀಠದ ಎಲ್ಲಾ ಶಾಲಾ-ಕಾಲೇಜುಗಳು  ಶಿಕ್ಷಣ ಸೇವೆಯನ್ನು ಸಮಾಜಕ್ಕೆ ನೀಡುತ್ತಲೇ ಸಮಾಜದಲ್ಲಿ ನ್ಯಾಯ ಅನ್ಯಾಯಗಳ ಒಳಿತು ಕೆಡುಕುಗಳ ಕುರಿತ ಅರಿವನ್ನು ಕಾನೂನು ಮಹಾವಿದ್ಯಾಲಯದ ಮೂಲಕ  ನೀಡುತ್ತಿದೆ ಎಂದರು. ಹಾಗೆಯೇ ಕಾನೂನು ವಿದ್ಯಾರ್ಥಿಗಳ ಮುಖ್ಯ  ಹೊಣೆಗಾರಿಕೆ ಸಮಾಜದಲ್ಲಿ ಸಾಮರಸ್ಯ ಕಾಪಾಡುವುದು ಎಂದು ತಿಳಿಸಿದರು.

ರಾಷ್ಟ್ರೀಯ ಸೇವಾ ಯೋಜನೆಯ ಸಮನ್ವಯಾಧಿಕಾರಿಗಳಾದ ಶ್ರೀ ಕೆ.ವಿ.ಲೋಕೇಶ ರೆಡ್ಡಿಯವರು 2023-24ನೆಯ ಸಾಲಿನ ವಾರ್ಷಿಕ ಕಾರ್ಯಕ್ರಮದ ವಿವರಣೆಯನ್ನು ವಿಡಿಯೋ ತುಣುಕುಗಳ ಮೂಲಕ ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಿಕ್ಷಣತಜ್ಞರು, ಹಾಗೂ ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಕಾರ್ಯದರ್ಶಿಗಳಾದ ಡಾ. ಕೆ.ಎಂ .ವೀರೇಶ್ ಮಾತನಾಡಿ ಕರ್ನಾಟಕದ ಶೈಕ್ಷಣಿಕ ಪರಂಪರೆಯಲ್ಲಿ ಎಸ್. ಜೆ.ಎಂ  ವಿದ್ಯಾಪೀಠಕ್ಕೆ ತನ್ನದೇ ಆದ ಅನನ್ಯತೆ ಇದೆ.ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದವರು ಅಚ್ಚಳಿಯದೆ  ನಾಡಿನ ಜನ ಮಾನಸದಲ್ಲಿ ಗಟ್ಟಿಯಾಗಿ  ಉಳಿಯುತ್ತಾರೆ.ಕಾನೂನನ್ನು ಸರಿಯಾಗಿ ಪಾಲಿಸಿದಲ್ಲಿ ಮಾತ್ರ ಪದವಿ ಪಡೆದದ್ದಕ್ಕೆ  ಸಾರ್ಥಕತೆ ಬರುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರಸ್ತಾವಿಕ ನುಡಿಗಳನ್ನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ.ಎಸ್ ದಿನೇಶ್ ರವರು  ಕಾಲೇಜಿನ ವಾರ್ಷಿಕ ಕಾರ್ಯಕ್ರಮಗಳ ಪಕ್ಷಿ ನೋಟವನ್ನುತಿಳಿಸಿ ಕಾನೂನು ವಿದ್ಯಾರ್ಥಿಗಳು ಸಮಾಜದ ಅನ್ಯಾಯಗಳ ವಿರುದ್ಧ ಹೋರಾಡಲು ಕಾನೂನನ್ನು ಶ್ರದ್ಧೆಯಿಂದ  ಅಭ್ಯಾಸಿಸಿ ಅನ್ವಯಿಸಬೇಕು ಸಮಾನತೆಗಾಗಿ ಶ್ರಮಿಸಬೇಕು ಎಂದರು.

ಕಾಲೇಜಿನ ಹಿರಿಯ ಸಹಪ್ರಾಧ್ಯಾಪಕರಾದ  ಕೆ. ಎನ್. ವಿಶ್ವನಾಥ್ ಮಾತನಾಡಿ ವಕೀಲ ವೃತ್ತಿಗೆ ನಿವೃತ್ತಿ ಇಲ್ಲ. ಸಾಯುವರೆಗೂ  ಇದು ನಿಮ್ಮ ಜೀವನ ನಿರ್ವಣೆಗೆ ಅವಕಾಶ ಮಾಡಿಕೊಡುತ್ತದೆ.ಆದರೆ ಶ್ರಮ ಅಗತ್ಯ ಎಂದರು.   ಕಾರ್ಯಕ್ರಮದಲ್ಲಿ ಶಿಲ್ಪಶ್ರೀ ಸ್ವಾಗತಿಸಿ,ದರ್ಶನ್ ಹಾಗೂ ಅನುಶ್ರೀ ನಿರೂಪಿಸಿ, ಹಿಮಗಿರಿ.ಎಚ್ವಂದಿಸಿದರು.

ಕಾಲೇಜಿನ  ಸಹ ಪ್ರಾಧ್ಯಾಪಕರುಗಳಾದ ಶ್ರೀಮತಿ ಸುಮನ.ಎಸ್. ಅಂಗಡಿ, ಲೊಕೇಶ್ ರೆಡ್ಡಿ .ಹಾಗೂ ಸಹಾಯಕ ಪ್ರಾಧ್ಯಾಪಕರುಗಳಾದ ಶೈಲಜಾ ಟಿ,ಗಿರೀಶ್ ಟಿ.ಎಸ್.,ಶ್ವೇತ ,ಬಿ.ವೈ .ಸ್ಮಿತಾ, ಅಂಬಿಕಾ,ಸಲ್ಮಾ ಸುಲ್ತಾನ್, ಹಾಗೂ ಗುರುಪ್ರಸಾದ್, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಂದೀಪ್ ಕುಮಾರ್,ಬೋಧಕೇತರ ಸಿಬ್ಬಂದಿಗಳಾದ ಶ್ರೀಮತಿ ವಿಜಯಮ್ಮ, ವಿಜಯ್ ಹಾಗೂ ಅಶೋಕ್  ಪಾಲ್ಗೊಂಡು  ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Advertisement
Tags :
bengaluruchitradurgaDr. Basavakumar SwamijikannadaKannadaNewsLaw studentssuddionesuddionenewsಕನ್ನಡಕನ್ನಡವಾರ್ತೆಕನ್ನಡಸುದ್ದಿಕಾನೂನುಚಿತ್ರದುರ್ಗಡಾ. ಬಸವಕುಮಾರ ಸ್ವಾಮೀಜಿಬೆಂಗಳೂರುಸಮಾಜಸಾಮರಸ್ಯಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article