For the best experience, open
https://m.suddione.com
on your mobile browser.
Advertisement

ಇಳಕಲ್ಲಿನ ಮಹಾಂತೇಶ್‌ ಎಂ.ಗಜೇಂದ್ರಗಡ ಅವರಿಗೆ ಸಂದ ಶ್ರೀ ಶಿವಕುಮಾರ ಪ್ರಶಸ್ತಿ

05:22 PM Oct 18, 2024 IST | suddionenews
ಇಳಕಲ್ಲಿನ ಮಹಾಂತೇಶ್‌ ಎಂ ಗಜೇಂದ್ರಗಡ ಅವರಿಗೆ ಸಂದ ಶ್ರೀ ಶಿವಕುಮಾರ ಪ್ರಶಸ್ತಿ
Advertisement

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 18 : ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘ ರಂಗಭೂಮಿಗೆ ಸಲ್ಲಿಸಿದ ಜೀವಮಾನದ ಕೊಡುಗೆಯನ್ನು ಮನ್ನಿಸಿ ಪ್ರತಿವರ್ಷ ಕೊಡಮಾಡುವ ಪ್ರತಿಷ್ಠಿತ ಶ್ರೀ ಶಿವಕುಮಾರ ಪ್ರಶಸ್ತಿಗೆ ಈ ಬಾರಿ  ಇಳಕಲ್ಲಿನ ಹಿರಿಯ ರಂಗಕರ್ಮಿ ಮಹಾಂತೇಶ್‌ ಎಂ.ಗಜೇಂದ್ರಗಡ ಅವರನ್ನು ಆಯ್ಕೆ ಮಾಡಿದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

Advertisement
Advertisement

2004 ರಿಂದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರ ಹೆಸರಿನಲ್ಲಿ ಶ್ರೀ ಶಿವಕುಮಾರ ಪ್ರಶಸ್ತಿಯನ್ನು ನಮ್ಮ ಕಲಾಸಂಘವು ಕೊಡುತ್ತಾ ಬಂದಿದೆ. ರಂಗಭೂಮಿ, ರಂಗಚಟುವಟಿಕೆಗಳಲ್ಲಿ, ಮಹತ್ವದ ಸಾಧನೆ ಮಾಡಿದ ಹಿರಿಯ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡುತ್ತಾ ಬರಲಾಗಿದೆ. ಇದುವರೆಗೂ ಪ್ರಸನ್ನ(2004), ಸಿಜಿಕೆ(2005), ಪಿ ಜಿ ಗಂಗಾಧರಸ್ವಾಮಿ(2006), ಅಶೋಕ ಬಾದರದಿನ್ನಿ(2007), ಮಾಲತಿಶ್ರೀ(2008), 2009ರಲ್ಲಿ ಅತಿವೃಷ್ಠಿ ಕಾರಣ ನೀಡಿಲ್ಲ.  ಸಿ ಬಸವಲಿಂಗಯ್ಯ(2010),  ಬಿ ಜಯಶ್ರೀ(2011),  ಡಾ. ಕೆ ಮರುಳಸಿದ್ಧಪ್ಪ(2012),  ಚಿದಂಬರರಾವ್ ಜಂಬೆ(2012),  ಕೋಟಗಾನಹಳ್ಳಿ ರಾಮಯ್ಯ(2014),  ಡಾ. ಸುಭದ್ರಮ್ಮ ಮನ್ಸೂರು (2015), ಲಕ್ಷ್ಮೀ ಚಂದ್ರಶೇಖರ್ (2016), ಶ್ರೀನಿವಾಸ ಜಿ ಕಪ್ಪಣ್ಣ (2017), ಬಸವರಾಜ ಬೆಂಗೇರಿ(2018), ಟಿ ಎಸ್ ನಾಗಾಭರಣ (2019),  2020ರಲ್ಲಿ ಕರೋನಾ ಕಾರಣದಿಂದ ನೀಡಿಲ್ಲ. ಕೆ ವಿ ನಾಗರಾಜಮೂರ್ತಿ (2021), ಡಾ. ಎಂ ಜಿ ಈಶ್ವರಪ್ಪ(2022), ಶಶಿಧರ ಅಡಪ (2023)ಇವರಿಗೆ ನೀಡುತ್ತಾ ಬರಲಾಗಿದೆ. ಈ ವರ್ಷ (2024) ಈ ಪ್ರಶಸ್ತಿಗೆ ಅರ್ಹರಾದವರು ರಂಗಕರ್ಮಿ, ರಂಗಸಂಘಟಕ, ಕಲಾವಿದ, ಕಲಾನಿರ್ದೇಶಕ ಮಹಾಂತೇಶ್ ಎಂ ಗಜೇಂದ್ರಗಡ ಅವರು. ಕಳೆದ 42 ವರ್ಷಗಳಿಂದ ರಂಗಭೂಮಿ ಕ್ಷೇತ್ರ ಹಾಗೂ ವೃತ್ತಿ ನಾಟಕ ಕಂಪನಿಗಳಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ.

ನಮ್ಮನ್ನೂ ಒಳಗೊಂಡ ಆಯ್ಕೆ ಸಮಿತಿಯು ಇಂಥ ಇನ್ನೂ ಹತ್ತಾರು ಪ್ರತಿಭಾವಂತ ರಂಗಕರ್ಮಿಗಳನ್ನು ಗುರುತಿಸಿತ್ತಾದರೂ ನಾವು ಕೊಡುವ ಪ್ರಶಸ್ತಿ ಒಂದೇ ಆದ್ದರಿಂದ ಅಂತಿಮವಾಗಿ ಮಹಾಂತೇಶ್‌ ಎಂ.ಗಜೇಂದ್ರಗಡ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದ್ದು, ಪ್ರಶಸ್ತಿಯನ್ನು ಇದೇ ನವೆಂಬರ್ 4 ರಿಂದ 9 ರವರೆಗೆ ಸಾಣೇಹಳ್ಳಿಯಲ್ಲಿ ನಡೆಯುವ ರಾಷ್ಟ್ರೀಯ ಸಮಾರೋಪ ಸಮಾರಂಭದ ದಿನ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Advertisement
Advertisement

Advertisement
Tags :
Advertisement