For the best experience, open
https://m.suddione.com
on your mobile browser.
Advertisement

ಶಿಳ್ಳೆಕ್ಯಾತರ ಕುಟುಂಬಗಳಿಗೆ ಸರ್ಕಾರದಿಂದ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಮಹಾನಾಯಕ ದಲಿತ ಸೇನೆ ಪ್ರತಿಭಟನೆ

06:14 PM Jul 25, 2024 IST | suddionenews
ಶಿಳ್ಳೆಕ್ಯಾತರ ಕುಟುಂಬಗಳಿಗೆ ಸರ್ಕಾರದಿಂದ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಮಹಾನಾಯಕ ದಲಿತ ಸೇನೆ ಪ್ರತಿಭಟನೆ
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜುಲೈ.25 : ಹಿರಿಯೂರು ಪಟ್ಟಣದ ಹರಿಶ್ಚಂದ್ರಘಾಟ್ ಹತ್ತಿರ ಮಾರುತಜ್ಜನ ಕಾಲೋನಿಯಲ್ಲಿರುವ ಶಿಳ್ಳೆಕ್ಯಾತರ ಐವತ್ತು ಕುಟುಂಬಗಳಿಗೆ ಸರ್ಕಾರದಿಂದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಮಹಾನಾಯಕ ದಲಿತ ಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

Advertisement

ತೆಂಗು, ಅಡಿಕೆ, ಈಚಲು ಗರಿಗಳಿಂದ ಗುಡಿಸಲು ಕಟ್ಟಿಕೊಂಡು ನೂರಾರು ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವ ಶಿಳ್ಳೆಕ್ಯಾತರ ಜನಾಂಗ ಯಾರೊಬ್ಬರಿಗೂ ಸ್ವಂತ ನಿವೇಶನಗಳಿಲ್ಲ. ಶಿಳ್ಳೆಕ್ಯಾತರ ಹಿರಿಯ ಮುಖಂಡರಾಗಿ ವಿಧಿವಶರಾಗಿರುವ ಮಾರುತಜ್ಞನ ಹೆಸರಿನಲ್ಲಿ ಸರ್ಕಾರಕ್ಕೆ ಸಂಬAಧಿಸಿದ ಭೂ ದಾಖಲೆಗಳಲ್ಲಿ ಎರಡು ಎಕರೆ ಭೂಮಿ ಮಾರುತಜ್ಜನ ಬಡಾವಣೆ ಎಂದು ಈಗಲೂ ನಮೂದಾಗಿದೆ. ದೇಶಕ್ಕೆ ಸ್ವಾತಂತ್ರö್ಯ ಸಿಕ್ಕು ಎಪ್ಪತ್ತು ವರ್ಷಗಳು ಕಳೆದಿದ್ದರೂ ಶಿಳ್ಳೆಕ್ಯಾತರು ಮೂಲಭೂತ ಸೌಲಭ್ಯಗಳಿಲ್ಲದೆ ನಿಕೃಷ್ಟವಾಗಿ ಜೀವನ ನಡೆಸುತ್ತಿದ್ದಾರೆ. ಹಿರಿಯೂರು ನಗರಸಭೆ, ತಹಶೀಲ್ದಾರ್, ಜಿಲ್ಲಾಡಳಿತವಾಗಲಿ ಇದುವರೆವಿಗೂ ಗಮನಹರಿಸದಿರುವುದು ನೋವಿನ ಸಂಗತಿ. ಗುಣಮಟ್ಟದ ರಸ್ತೆ, ಚರಂಡಿ, ಬೀದಿ ದೀಪ, ಶುದ್ದ ಕುಡಿಯುವ ನೀರು, ಅಂಗನವಾಡಿ, ಪ್ರಾಥಮಿಕ ಶಾಲೆ, ಬ್ಯಾಂಕ್ ಸಾಲ, ವೃದ್ದಾಪ್ಯ ವೇತನ, ಕಲಾವಿದರ ಪಿಂಚಣಿ ಇವುಗಳನ್ನು ಪಡೆದುಕೊಳ್ಳಲು ಆಗುತ್ತಿಲ್ಲ. ಇನ್ನಾದರೂ ಸರ್ಕಾರ ಗಮನ ಹರಿಸಿ ಇಲ್ಲಿನ ಶಿಳ್ಳೆಕ್ಯಾತರ ಐವತ್ತು ಕುಟುಂಬಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಿ ಹಕ್ಕುಪತ್ರಗಳನ್ನು ನೀಡುವಂತೆ ಪ್ರತಿಭಟನಾನಿರತರು ಒತ್ತಾಯಿಸಿದರು.

Tags :
Advertisement