For the best experience, open
https://m.suddione.com
on your mobile browser.
Advertisement

ಚಿತ್ರದುರ್ಗದಲ್ಲಿ ಮದಕರಿನಾಯಕರ 242 ನೇ ಪುಣ್ಯ ಸ್ಮರಣೆ | ಗೌರವ ಸಲ್ಲಿಸಿದ ಗಣ್ಯರು

02:34 PM May 15, 2024 IST | suddionenews
ಚಿತ್ರದುರ್ಗದಲ್ಲಿ ಮದಕರಿನಾಯಕರ 242 ನೇ ಪುಣ್ಯ ಸ್ಮರಣೆ   ಗೌರವ ಸಲ್ಲಿಸಿದ ಗಣ್ಯರು
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

Advertisement

ಸುದ್ದಿಒನ್, ಚಿತ್ರದುರ್ಗ ಮೇ. 15 : ಮದಕರಿ ನಾಯಕರು ಮಾಡಿದ ಶೌರ್ಯ, ಪರಾಕ್ರಮ ಹಾಗೂ ಅವರು ಮಾಡಿದ ಕೆಲಸವನ್ನು ಸ್ಮರಣೆ ಮಾಡುವ ಕಾರ್ಯ ಇದಾಗಿದೆ ಎಂದು ಶಾಸಕರಾದ ರಘುಮೂರ್ತಿ ತಿಳಿಸಿದರು.

Advertisement
Advertisement

ನಗರದ ಮದಕರಿ ವೃತ್ತದಲ್ಲಿ ಸರಳ ರೀತಿಯಲ್ಲಿ ಮದಕರಿ ನಾಯಕರ 242ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮದಕರಿ ನಾಯಕರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಮದಕರಿ ನಾಯಕರು ರಾಜರಾಗಿ ಯಾವ ರೀತಿಯಾಗಿ ಇರಬೇಕೆಂದು ತೋರಿಸಿ ಕೊಟ್ಟಿದ್ದಾರೆ.

1740ರಲ್ಲಿ ಜನನ 1780ರಲ್ಲಿ ನಿಧನ 242ನೇ ವರ್ಷದ ಪುಣ್ಯ ಸ್ಮರಣೆ, ಅವರ ಇತಿಹಾಸವನ್ನು ಚಿತ್ರದುರ್ಗದ ಕೊನೆಯ ಪಾಳೇಗಾರರಾಗಿದ್ದರು. ನಾಯಕ ಸಮಾಜ ಪಾಳೇಗಾರರ ಸಮಾಜವಾಗಿದೆ, ಚಿತ್ರದುರ್ಗದ ಕೋಟೆಯನ್ನು ಆಳಿದವರು ಮದಕರಿ ನಾಯಕರು ಇವರಾಗಿದ್ದಾರೆ.

ಇತಿಹಾಸವನ್ನು ನೆನಸುವ ಕಾರ್ಯಕ್ರಮ ಇದಾಗಬೇಕಿದೆ. ಪಾಳೇಗಾರರಲ್ಲಿ ರಾಜರು ಅವರದೇ ರೀತಿಯಲ್ಲಿ ಮದಕರಿ ನಾಯಕರು 12ನೇ ವಯಸ್ಸಿಗೆ ಪಟ್ಟಾಭೀಷೇಕವಾಗುತ್ತದೆ. 25 ವರ್ಷಗಳ ಕಾಲ ಆಳ್ವಿಕೆಯನ್ನು ಮಾಡಿದರು. 40 ವರ್ಷದಲ್ಲಿ ನಿಧನರಾಗುತ್ತಾರೆ. ಇತಿಹಾಸ ಇದೆ ಆವರ ಆತ್ಮಕ್ಕೆ ಶಾಂತಿಯನ್ನು ಕೋರಬೇಕಿದೆ ಆವರು ಮಾಡಿದ ಶೌರ್ಯ ಪರಾಕ್ರಮವನ್ನು ರಾಜರಾಗಿ ಯಾವ ರೀತಿಯಾಗಿ ಇರಬೇಕೆಂದು ತೋರಿಸಿ ಕೊಟ್ಟಿದ್ದಾರೆ. ಅವರು ಮಾಡಿದ ಕೆಲಸವನ್ನು ಸ್ಮರಣೆ ಮಾಡುವ ಕಾರ್ಯ ಮಾಡಬೇಕಿದೆ ಎಂದರು.

ನಾಯಕ ಸಮಾಜದ ತಾಲೂಕು ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ಮದಕರಿನಾಯಕ ಹೆಸರು ಎಲ್ಲೋ ಒಂದು ಕಡೆ ಮರೆಯಗಬಾರದು ಎಂಬ ದೃಷ್ಟಿಯಿಂದ ವರ್ಷಕ್ಕೆ ಮೂರು ಬಾರಿ ನೆನಪು ಮಾಡಿಕೊಳ್ಳುವ ಕಾರ್ಯಕ್ರಮ ನಡೆಸಲಾಗುತ್ತಿದೆ. ನಾಡು ಕಂಡ ವೀರ ಪರಾಕ್ರಮಿ, ನಾಡದೊರೆ  ರಾಜವೀರ ಮದಕರಿ ನಾಯಕ ಉತ್ತಮ ಆಳ್ವಿಕೆ ಮೂಲಕ ನಾಡನ್ನು ರಕ್ಷಿಸಿ ಸರ್ವ ಜನಾಂಗದ ನಾಯಕನಾಗಿ ಹೊರಹೊಮ್ಮಿ ರಾಜ್ಯದ ಅನೇಕ ಭಾಗಗಳಲ್ಲಿ  ಅಭಿವೃದ್ಧಿಗೆ ಶ್ರಮಿಸಿದರು ಮದಕರಿ ನಾಯಕ ಆಳ್ವಿಕೆಯಲ್ಲಿ ಕೆರೆ ಕಟ್ಟೆಗಳನ್ನು ಕಟ್ಟಿಸಿ ನಗರದ ಅಭಿವೃದ್ಧಿಗೆ ಪಣ ತೊಟ್ಟಿದ್ದರು ಅವರು ಮಾಡಿದ ಕೆಲಸಗಳನ್ನು  ದುರ್ಗದ ಜನರು ಮರೆಯಲು ಸಾಧ್ಯವಿಲ್ಲ, ಅವರು ಕಟ್ಟಿಸಿ ನೀರಿನ ಹೊಂಡಗಳಿಂದ ಜಲ ರಕ್ಷಣೆ ಮಾಡಿದರು ಎಂದರು.

ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮದಕರಿ ನಾಯಕರ ಪ್ರತಿಮೆ ಅವರ ಪುಣ್ಯ ಸ್ಮರಣೆಯ ಅಂಗವಾಗಿ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಚಿತ್ರದುರ್ಗ ಆಳ್ವಿಕೆ ಮಾಡಿದ ಮದಕರಿ ನಾಯಕ ಅವರು ಮಾಡಿದ ಉತ್ತಮ ಕಾರ್ಯಗಳನ್ನು  ನಾವು ಮರೆಯಲು ಸಾಧ್ಯವಿಲ್ಲ, ಅವರು ಹಾಕಿಕೊಟ್ಟಂತಹ ದಾರಿಯಲ್ಲಿ ನಾವು ನಡೆಯಬೇಕಿದೆ, ನಾಯಕ ಸಮಜದ ಜೊತೆಗೆ ಎಲ್ಲಾ ಸಮಾಜದವರು ಮದಕರಿನಾಯಕರಿಗೆ ಗೌರವ ಸಲ್ಲಿಸಿ ನೆನಪು ಮಾಡಿಕೊಳ್ಳಬೇಕು ಎಂದರು.

ಮದಕರಿ ನಾಯಕರ ಪ್ರತಿಮೆ ಮುಂಭಾಗದಲ್ಲಿ ವಿವಿಧ ರೀತಿಯ ಹೂವಿನ ಅಲಂಕಾರವನ್ನು ಮಾಡಲಾಗಿತ್ತು ಕೆಂಪು ಮತ್ತು ಬಿಳಿ ಹೂಗಳಿಂದ ಮಾಡಲಾದ ಬೃಹತಾದ ಹೂವಿನ ಹಾರವನ್ನು ಮದಕರಿ ನಾಯಕರ ಪ್ರತಿಮೆಗೆ ಕ್ರೇನ್ ಮೂಲಕ ಹಾಕಲಾಯಿತು, ತದನಂತರ ಕಾರ್ಯಕ್ರಮದಲ್ಲಿ ನೆರೆದಿದ್ದವರೆಲ್ಲಾ ಮದಕರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.

ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ಗೋಪಾಲಸ್ವಾಮಿನಾಯಕ್, ಮದಕರಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಸಂದೀಪ್, ಜಾಹ್ನವಿ ನಾಗರಾಜ್, ಉಮೇಶ್ ಕಾರಜೋಳ, ಸಿ.ಟಿ.ಕೃಷ್ಣಮೂರ್ತಿ, ರಾಜ ಮದಕರಿನಾಯಕ, ದೀಪು, ತಿಪ್ಪೇಸ್ವಾಮಿ ಎಟಿಟ್ ತಿಪ್ಪೇಸ್ವಾಮಿ, ಗುರುಸಿದ್ದಪ್ಪ, ತಮಟಕಲ್ ಸ್ವಾಮಿ, ಅಂಜನಪ್ಪ, ಪ್ರಕಾಶ್ ರೈಲ್ವೆ ಸ್ಟೇಷನ್, ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement
Tags :
Advertisement