For the best experience, open
https://m.suddione.com
on your mobile browser.
Advertisement

ಲೋಕ್ ಅದಾಲತ್ : ಮನಸ್ತಾಪ ಮರೆತು ಮತ್ತೆ ಒಂದಾದ ದಂಪತಿಗಳು

05:55 PM Sep 14, 2024 IST | suddionenews
ಲೋಕ್ ಅದಾಲತ್   ಮನಸ್ತಾಪ ಮರೆತು ಮತ್ತೆ ಒಂದಾದ ದಂಪತಿಗಳು
Advertisement

ಚಿತ್ರದುರ್ಗ. ಸೆ.14 : ಚಿತ್ರದುರ್ಗದ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ್‍ ಅದಾಲತ್ ನಲ್ಲಿ ಮುೂರು ಪ್ರತ್ಯೇಕ ಪ್ರಕರಣಗಳಲ್ಲಿ ದಂಪತಿಗಳು ಒಂದಾಗಿರುತ್ತಾರೆ. 

Advertisement
Advertisement

ವೈವಾಹಿಕ ವಿವಾದಗಳಿಗೆ ಸಂಬಂಧಿಸಿದಂತೆ ಕಾರಣಾಂತರಗಳಿಂದ ನ್ಯಾಯಾಲಯಗಳಲ್ಲಿ ದಾಖಲಾಗಿದ್ದ ಪ್ರಕರಣಗಳು ರಾಜೀ ಮುಖಾಂತರ ಸುಖಾಂತ್ಯವಾಗಿರುತ್ತದೆ.

Advertisement

ವಿಶೇಷವಾಗಿ ಪ್ರಧಾನ ಹಿರಿಯ ಸಿವಿಲ್‍ ನ್ಯಾಯಾಧೀಶರು ಹಾಗೂ ಸಿಜೆಎಂ ಇವರ ನ್ಯಾಯಾಲಯದಲ್ಲಿ  ವೈವಾಹಿಕ ಜೀವನಕ್ಕೆ ಸಂಬಂಧಿಸಿದ 2022ನೇ ಸಾಲಿನಲ್ಲಿ ದಾಖಲಾದ ಒಂದು ಪ್ರಕರಣ ಹಾಗೂ  2023ನೇ ಸಾಲಿನ ದಾಖಲಾದ ಒಂದು ಪ್ರಕರಣ ಹಾಗೂ ಒಂದನೇ ಹೆಚ್ಚುವರಿ ಹಿರಿಯ ಸಿವಿಲ್‍ ನ್ಯಾಯಾಧೀಶರು, ನ್ಯಾಯಾಲಯದಲ್ಲಿ 2021ನೇ ಸಾಲಿನಲ್ಲಿ ದಾಖಲಾದ ಒಂದು ಪ್ರಕರಣವು ನ್ಯಾಯಾಧೀಶರು ಹಾಗೂ ವಕೀಲರ ಮನವೊಲಿಕೆಯಿಂದ ಈ ದಂಪತಿಗಳು ಮನಸ್ತಾಪ ಮರೆತು ರಾಜೀಯಾಗಿ ಜೀವನದಲ್ಲಿ ಒಂದಾಗಿ ಬಾಳುತ್ತೇವೆ ಎಂದು ಒಂದಾಗಿರುತ್ತಾರೆ.

Advertisement

ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ರೋಣ ವಾಸುದೇವ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ಡಿ.ಮಮತ, ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಚೈತ್ರ, ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಸೇರಿದಂತೆ ಲೋಕ್ ಅದಾಲತ್ ನಲ್ಲಿ ವಕೀಲರು, ಸಾರ್ವಜನಿಕರು ಭಾಗವಹಿಸಿದ್ದರು.

Advertisement

Tags :
Advertisement