Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮೌಲ್ಯಯುತ ಜೀವನಕ್ಕೆ ಮಹಾತ್ಮರ ತತ್ವಾದರ್ಶ ಪಾಲಿಸೋಣ : ಎಂ.ನಾಸಿರುದ್ದೀನ್

01:46 PM Oct 17, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 17 : ನಾವು ಮೌಲ್ಯಯುತ ಜೀವನ ನಡೆಸಲು ಮಹಾತ್ಮರ ಜೀವನ, ತತ್ವಾದರ್ಶಗಳನ್ನು ಅನುಸರಣೆ ಮಾಡಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.

Advertisement

ನಗರದ ಡಯಟ್‌ನಲ್ಲಿ ಗುರುವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಾತ್ಮರ ಜೀವನ ಮತ್ತು ತತ್ವಾದರ್ಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿದ್ದು ನಮ್ಮ ಉತ್ತಮ ಬದುಕಿಗೆ ಪ್ರೇರಣೆ ನೀಡುತ್ತವೆ ಎಂದರು.

ವಾಲ್ಮೀಕಿ ರಚಿಸಿದ ರಾಮಾಯಣ ನಮ್ಮ ನೆಲದ ಮೊದಲ ಮಹಾಕಾವ್ಯವಾಗಿದ್ದು ಅವರು ತಾತ್ವಿಕತೆ, ಆದರ್ಶ, ಸಮನ್ವಯತೆಯನ್ನೊಳಗೊಂಡ ಕವಿಯಾಗಿದ್ದಾರೆ. ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ದಾರ್ಶನಿಕರ ಜೀವನ ಮೌಲ್ಯಗಳನ್ನು ತಿಳಿಸುವುದರ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿ ಭವಿಷ್ಯದ ಉತ್ತಮ ಜೀವನ ನಡೆಸಲು ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.

Advertisement

ಉಪ ಪ್ರಾಚಾರ್ಯ ಅಶ್ವಥ್ ನಾರಾಯಣ, ಹಿರಿಯ ಉಪನ್ಯಾಸಕರಾದ ಎಸ್.ಸಿ.ಪ್ರಸಾದ್, ಎಸ್.ಜ್ಞಾನೇಶ್ವರ, ತಿಪ್ಪೇಸ್ವಾಮಿ, ಎಚ್.ಗಿರಿಜಾ, ಉಪನ್ಯಾಸಕರಾದ ಆರ್.ನಾಗರಾಜು, ಎಸ್.ಬಸವರಾಜು, ನಿತ್ಯಾನಂದ, ಸಿದ್ದೇಶಿ, ಲೀಲಾವತಿ, ಶಿವಲೀಲಾ, ಪದ್ಮ, ಅರ್ಜುಮಂದ್ ಬಾನು, ರಂಗಸ್ವಾಮಿ, ತಾಂತ್ರಿಕ ಸಹಾಯಕ ಅವಿನಾಶ್, ಅಧೀಕ್ಷಕಿ ಗೀತಾ ಮತ್ತು ಸಿಬ್ಬಂದಿ ವರ್ಗದವರು ಇದ್ದರು.

 

Advertisement
Tags :
bengaluruchitradurgaM. NasiruddinMahatmaphilosophysuddionesuddione newsvaluable lifeಎಂ.ನಾಸಿರುದ್ದೀನ್ಚಿತ್ರದುರ್ಗತತ್ವಾದರ್ಶಬೆಂಗಳೂರುಮಹಾತ್ಮಮೌಲ್ಯಯುತ ಜೀವನಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article