For the best experience, open
https://m.suddione.com
on your mobile browser.
Advertisement

ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕಲು ನಿಯಮ ಜಾರಿಯಾಗಲಿ : ಶ್ರೀಬಸವಪ್ರಭು ಸ್ವಾಮೀಜಿ

04:03 PM Nov 18, 2024 IST | suddionenews
ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕಲು ನಿಯಮ ಜಾರಿಯಾಗಲಿ   ಶ್ರೀಬಸವಪ್ರಭು ಸ್ವಾಮೀಜಿ
Advertisement

Advertisement

ದಾವಣಗೆರೆ, ನವೆಂಬರ್. 18 : ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಒಬ್ಬರಿಗೆ ಎರಡೇ ಬಾರಿ ಸ್ಪರ್ಧೆ ಎಂಬ ನಿಯಮ ಜಾರಿಯಾದರೆ ಮಾತ್ರ ದೇಶದಲ್ಲಿ ಮನೆ ಮಾಡಿರುವ ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಪ್ರತಿಪಾದಿಸಿದರು.

ನಗರದ ಎಸ್.ಎಸ್. ಬಡಾವಣೆಯಲ್ಲಿ ಭಾನುವಾರ ನಡೆದ ಸ್ವಾಭಿಮಾನಿ ಬಳಗದ ಉದ್ಘಾಟನೆ, ಸಾಧಕರಿಗೆ ಗೌರವ ಪುರಸ್ಕಾರ ಹಾಗೂ ಮಹರ್ಷಿ ವಾಲ್ಮೀಕಿ, ವೀರವನಿತೆ ಒನಕೆ ಓಬವ್ವ, ಕಿತ್ತೂರು ರಾಣಿ ಚನ್ನಮ್ಮ ಹಾಗೂ ಕನಕ ದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

Advertisement

'ಕೊನೆಯವರೆಗೂ ರಾಜಕಾರಣದಲ್ಲಿ ಇರಬೇಕೆಂಬ ಹಪಾಹಪಿಯಿಂದಾಗಿ ಕುಟುಂಬ ರಾಜಕಾರಣ ದೇಶದ ಎಲ್ಲಾ ಪಕ್ಷಗಳಲ್ಲೂ ಮನೆ ಮಾಡಿದೆ. ಇದಕ್ಕೆ ಕಡಿವಾಣ ಹಾಕಬೇಕಾದರೆ, ಒಬ್ಬರಿಗೆ ಎರಡು ಬಾರಿ ಮಾತ್ರ ಸ್ಪರ್ಧೆಗೆ ಅವಕಾಶ ಎಂಬ ನಿಯಮ ಬಂದರೆ, ಸಾಮಾನ್ಯ ಜನರು ಸಹ ಪ್ರಧಾನಿ, ಮುಖ್ಯಮಂತ್ರಿಯಾಗುವ ವಾತಾವರಣ ನಿರ್ಮಾಣವಾಗಲಿದೆ'' ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಳಗದ ಅಧ್ಯಕ್ಷ ಜಿ.ಬಿ. ವಿನಯ್‌ ಕುಮಾ‌ರ್ ಮಾತನಾಡಿ, ''ಯಾವುದೇ ಕೆಲಸ ಯಶಸ್ಸಾಗಬೇಕಾದರೆ ಸದುದ್ದೇಶ ಮತ್ತು ನಿಸ್ವಾರ್ಥ ಮನೋಭಾವ ಇರಬೇಕು. ದೇಶದಲ್ಲಿ ಶೈಕ್ಷಣಿಕ ಅಸಮಾನತೆ ಸೃಷ್ಟಿಯಾಗಿದೆ. ಹಳ್ಳಿಗಳಲ್ಲಿರುವ ಸರಕಾರಿ ಶಾಲೆಗಳು ಬೀಳುವ ಸ್ಥಿತಿಯಲ್ಲಿವೆ. ಆ ಶಾಲೆಗೆ ಹೋಗುವ ಮಕ್ಕಳಿಗೆ ಭವಿಷ್ಯ ಇಲ್ಲದಂತಾಗಿದೆ. ನೂರಾರು ಕೋಟಿ ಖರ್ಚು ಮಾಡಿ, ಚುನಾವಣೆಯಲ್ಲಿ ಗೆಲುವು ಸಾಧಿಸುವ ರಾಜಕಾರಣಿಗಳು ತಮ್ಮ ಕ್ಷೇತ್ರದ ಸರಕಾರಿ ಶಾಲೆಗಳ ಅಭಿವೃದ್ಧಿಗೆ 20ರಿಂದ 30 ಕೋಟಿ ರೂ. ಏಕೆ ಖರ್ಚು ಮಾಡುತ್ತಿಲ್ಲ'' ಎಂದು ಪ್ರಶ್ನಿಸಿದರು.

"ಸರಕಾರಿ ಶಾಲೆಗಳು ಸದೃಢವಾದರೆ, ಬಡವರು, ಶೋಷಿತರ ಮಕ್ಕಳು ಉತ್ತಮವಾಗಿ ಶಿಕ್ಷಣ ಪಡೆದು ನಮ್ಮನ್ನು ಪ್ರಶ್ನಿಸುವ ಮಟ್ಟಕ್ಕೆ ಬೆಳೆಯುತ್ತಾರೆ. ಇದರಿಂದ ತಮ್ಮ ಮತ ಬ್ಯಾಂಕ್ ಹಾಳಾಗುತ್ತದೆ ಎಂಬ ಏಕೈಕ ಕಾರಣಕ್ಕೆ ಸರಕಾರಿ ಶಾಲೆಗಳ ಅಭಿವೃದ್ಧಿಯನ್ನು ಕಡೆಗಣಿಸಲಾ ಗುತ್ತಿದೆ'' ಎಂದು ಆರೋಪಿಸಿದರು.

ಪತ್ರಕರ್ತ, ಬಸವರಾಜ ದೊಡ್ಡಮನಿ ಸ್ವಾಭಿಮಾನಿ ಬಳಗದ ವೆಬ್‌ ಸೈಟ್ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಡಾನ್ ಬಾಸ್ಕೋ ಸಂಸ್ಥೆಯ ಫಾ. ರೆಜಿ ಜೇಕಬ್, ತಂಜೀಮ್ ಉಲೇಮಾ ಅಹಲೇ ಸುನ್ನತ್ ಅಧ್ಯಕ್ಷ ಮೌಲಾನಾ ಖಾಜಿ ಮಹಮ್ಮದ್ ಇಲಿಯಾಜ್, ಖಾದ್ರಿ ಉಪಸ್ಥಿತರಿದ್ದರು.

ಬಳಗದ ರಾಜು ಮೌರ್ಯ ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ಜಾನಪದ ಕಲಾವಿದ ಯುಗಧರ್ಮ ರಾಮಣ್ಣ, ಹರಿಹರದ ಯೋಗ ಪಟು ಸೃಷ್ಟಿ ಕರಾಟೆ ಪಟು ನಿಧಿ ಬೇತೂರು ಸೇರಿ ಹಲವು ಸಾಧಕರನ್ನು ಸನ್ಮಾನಿಸಲಾಯಿತು.

Advertisement
Tags :
Advertisement