For the best experience, open
https://m.suddione.com
on your mobile browser.
Advertisement

ಕಾನೂನು ರೀತಿಯಲ್ಲಿ ರಸ್ತೆ ಆಗಲಿಕರಣ ಆಗಲಿ : ಕಟ್ಟಡ ಮಾಲೀಕರ ಒತ್ತಾಯ

03:05 PM Oct 30, 2024 IST | suddionenews
ಕಾನೂನು ರೀತಿಯಲ್ಲಿ ರಸ್ತೆ ಆಗಲಿಕರಣ ಆಗಲಿ   ಕಟ್ಟಡ ಮಾಲೀಕರ ಒತ್ತಾಯ
Advertisement

ಸುದ್ದಿಒನ್, ಚಿತ್ರದುರ್ಗ ಅ. 30 : ಕಾನೂನು ರೀತಿಯಲ್ಲಿ ರಸ್ತೆ ಆಗಲಿಕರಣ ಆಗಲಿ ಆದೇ ರೀತಿ ನಮಗೆ ಸಿಗಬೇಕಾದ ಪರಿಹಾರವನ್ನು ಕಾನೂನು ರೀತಿಯಲ್ಲಿ ನೀಡಬೇಕು ಎಂದು ಸರ್ಕಾರ ಮತ್ತು ಸಚಿವರನ್ನು ರಸ್ತೆ ಆಗಲೀಕರಣಕ್ಕೆ ಒಳಗಾದ ಕಟ್ಟಡದ ಮಾಲಿಕರು ಒತ್ತಾಯಿಸಿದ್ದಾರೆ.

Advertisement

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಟ್ಟಡದ ಮಾಲಿಕರಾದ ಹೆಚ್.ಎನ್.ಪ್ರಶಾಂತ್, ಸರ್ಕಾರ ಹಿರಿಯೂರಿನಲ್ಲಿ ರಸ್ತೆ ಆಗಲೀಕರಣ ಪ್ರಾರಂಭವಾಗಿದೆ. ಇಲ್ಲಿ ಸುಮಾರು 70 ಅಡಿ ರಸ್ತೆಯನ್ನು ಅಗಲೀಕರಣ ಮಾಡಲು ಸರ್ಕಾರ ಹೊರಟಿದೆ. ಇದರಿಂದ ಹಲವಾರು ಅಂಗಡಿಗಳು ಹಾಗೂ ಮನೆಗಳು ಬಲಿಯಾಗಲಿದೆ. ಇಲ್ಲಿನ ಎಲ್ಲಾ ಆಸ್ತಿಗಳು ನಮ್ಮ ತಾತಂದಿರ ಕಾಲದ್ದಾಗಿದೆ. ಆಗಲೇ ಅವರು ಜಿಲ್ಲಾಧಿಕಾರಿಗಳಿಂದ ನ್ಯಾಯಯುತ ರೀತಿಯಲ್ಲಿ ಪಡೆಯಲಾಗಿದೆ ಇಲ್ಲಿನ ಆಸ್ತಿಗಳು ಯಾವು ಸಹಾ ಬೇನಾಮಿ ಆಸ್ತಿಗಳಲ್ಲ ಎಲ್ಲದಕ್ಕೂ ಸಹಾ ದಾಖಲೆಗಳು ಇವೆ, ಆದರೆ ನಗರಸಭೆಯವರು ಇವುಗಳನ್ನು ಬೇನಾಮಿ ಅಸ್ತಿ ಎಂದು ಪರಿಗಣಿಸಿದ್ದಾರೆ ಯಾವುಧೇ ರೀತಿಯ ನೊಟೀಸ್ ನೀಡದೆ ಆಟೋದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಎಂದು ನಗರಸಭೆಯ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದರು.

Advertisement

ಸರ್ಕಾರವಾಗಲೀ ನಗರಸಭೆಯವರಾಗಲಿ ರಸ್ತೆಯನ್ನು ಆಗಲೀಕರಣ ಮಾಡಲು ನಮ್ಮ ವಿರೋಧ ಇಲ್ಲ ಆದರೆ ನಮಗೆ ಆದ ನಷ್ಠಕ್ಕೆ ಸೂಕ್ತವಾದ ಪರಿಹಾರವನ್ನು ನಿಡಬೇಕಿದೆ ಆದರೆ ಇಲ್ಲಿ ಪರಿಹಾರವನ್ನು ನೀಡುವುದಿಲ್ಲ ಎನ್ನುತ್ತಿದ್ದಾರೆ ಈ ರೀತಿಯಾದರೆ ನಮ್ಮ ಬದುಕು ಬೀದಿಗೆ ಬರಲಿದೆ. ಈ ಅಂಗಡಿಯನ್ನು ನಂಬಿಕೊಂಡು ಜೀವನವನ್ನು ನಡೆಸಲಾಗುತ್ತಿದೆ ಪರಿಹಾರವನ್ನು ನೀಡದಿದ್ದರೆ ಮುಂದಿನ ನಮ್ಮ ಜೀವನ ಹೇಗೇ ಎಂದು ಪ್ರಶ್ನಿಸಿದ ಕಟ್ಟಡದ ಮಾಲಿಕರು ಈಗ 70 ರಸ್ತೆಯನ್ನು ಆಗಲೀಕರಣ ಮಾಡಲು ಸರ್ಕಾರ ಮುಂದಾಗಿದೆ ಆದರೆ ಇದರ ಪಕ್ಕದಲ್ಲಿಯೇ ಹಿರಿಯೂರಿಯನಲ್ಲಿ ಜೀವರ್ಗಿ ಚಾಮರಾಜನಗರ ಹೆದ್ದಾರಿಗೆ ಬೈಪಾಸ್ ರಸ್ತೆ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ ಈ ರಸ್ತೆ ಆದರೆ ಇಲ್ಲಿ ಸಂಚಾರ ಕಡಿಮೆಯಾಗುತ್ತದೆ ಇಲ್ಲಿ ಓಡಾಡುವವರೆ ಇಲ್ಲವಾಗುತ್ತದೆ ಈ ರೀತಿ ಇರುವಾಗ 70 ಅಡಿ ಅಗತ್ಯ ಇಲ್ಲ ಇದರ ಬದಲು 35 ಅಡಿ ರಸ್ತೆ ಅಗಲೀರಣ ಮಾಡಲಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement

ಮತ್ತೋರ್ವ ಕಟ್ಟಡ ಮಾಲಿಕರಾದ ಜಿ.ಎಸ್.ಕಿರಣ್ ಮಾತನಾಡಿ, ರಸ್ತೆ ಆಗಲೀಕರಣದಲ್ಲಿ ನಮಗೆ ಅನ್ಯಾಯವಾಗುತ್ತಿದೆ. 1956-57ರಲ್ಲಿಯೇ ಈ ಆಸ್ತಿಗಳನ್ನು ಜಿಲ್ಲಾಧಿಕಾರಿಗಳವರ ಸೇಲ್ ಡೀಡ್ ಮೂಲಕ ಖರೀಧಿ ಮಾಡಲಾಗಿದೆ. ಇದ್ದಲ್ಲದೆ 70-80 ವರ್ಷಗಳಿಂಧ ಆಸ್ತಿಯನ್ನು ಅನುಭವಿಸಿಕೊಂಡ ಬರಲಾಗುತ್ತಿದೆ. ಇದರ ಬಗ್ಗೆ ಎಲ್ಲಾ ದಾಖಲಾತಿಗಳನ್ನು ಹೊಂದಲಾಗಿದೆ. ನಮಗೆ ಯಾವುದೆ ರೀತಿಯಲ್ಲಿ ಸೂಚನೆಯನ್ನು ನೀಡದೆ ಆಟೋದಲ್ಲಿ ಪ್ರಚಾರವನ್ನು ಮಾಡುವುದರ ಮೂಲಕ ನಮ್ಮ ಕಟ್ಟಡಗಳನ್ನ ತೆರವುಗೊಳಿಸುವುವಂತೆ ಸೂಚನೆಯನ್ನು ನೀಡಲಾಗುತ್ತಿದೆ. ನಮಗೆ ಪರಿಹಾರವನ್ನು ನೀಡದೆ ಕಟ್ಟಡಗಳನ್ನು ನಾಶ ಮಾಡಲು ನಗರಸಭೆಯವರು ಮುಂದಾಗಿರುವುದು ಕಾನೂನು ವಿರುದ್ದವಾಗಿದೆ. ರಸ್ತೆ ಆಗಲೀಕರಣಕ್ಕೆ ಸಂಬಂಧಪಟ್ಟಂತೆ ನಗರಸಭೆಯವರು ಕಾನೂನು ಪಾಲಿಸಿಲ್ಲ ರಸ್ತೆ ಆಗಲಿಕರಣ ಸಮಯದಲ್ಲಿ ವಿಧಾನಸಭೆ ಅಧಿವೇಶನದಲ್ಲಿ ಆದೇಶವಾಗಬೇಕು, ಗೆಜೆಟ್ ನೋಟಿಫಿಕೇಶನ್ ಆಗಬೇಕು, ಮೌಲ್ಯ ಧೃಡೀಕರಣವಾಗಬೇಕು, ನಂತರ ಪರಿಹಾರ ಕಾರ್ಯವಾಗಬೇಕು, ಆದರೆ ಇಲ್ಲಿ ಏಕಾಏಕಿ ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ರಸ್ತೆ ಆಗಲಿಕರಣಕ್ಕೆ ಮುಂದಾಗಿದ್ಧಾರೆ ಎಂದು ಆರೋಪಿಸಿದರು.

Advertisement

ಗೋಷ್ಟಿಯಲ್ಲಿ ಕಟ್ಟಡದ ಮಾಲಿಕರಾದ ರಾಘವೇಂದ್ರ, ವೆಂಕಟೇಶ್, ಮಂಜುನಾಥ್, ಚೇತನ್, ಪ್ರಭಾಕರ್, ಸುರೇಶ್, ಕಮಲೇಶ್, ರಾಧಿಕಾ, ಶಿವಕುಮಾರ್, ಚಂದ್ರಕೀರ್ತಿ, ಗುರುಕಿರಣ್, ಸತ್ಯನಾರಾಯಣ, ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement
Tags :
Advertisement