For the best experience, open
https://m.suddione.com
on your mobile browser.
Advertisement

ಸಾಮಾಜಿಕ ಅನಿಷ್ಠ ಪದ್ಧತಿಗಳು ನಡೆಯದಂತೆ ಜಿಲ್ಲಾಡಳಿತ ಕ್ರಮವಹಿಸಲಿ : ಕಾಡುಗೊಲ್ಲ ಮಹಿಳಾ ವೇದಿಕೆ ಒತ್ತಾಯ

05:09 PM Jun 25, 2024 IST | suddionenews
ಸಾಮಾಜಿಕ ಅನಿಷ್ಠ ಪದ್ಧತಿಗಳು ನಡೆಯದಂತೆ ಜಿಲ್ಲಾಡಳಿತ ಕ್ರಮವಹಿಸಲಿ   ಕಾಡುಗೊಲ್ಲ ಮಹಿಳಾ ವೇದಿಕೆ ಒತ್ತಾಯ
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ ಜೂ.25 :  ಕಾಡುಗೊಲ್ಲ ಬುಡಕಟ್ಟು ಹಟ್ಟಿಗಳಲ್ಲಿ ದೇವರು, ಧರ್ಮ, ನಂಬಿಕೆಗಳ ಹೆಸರಿನಲ್ಲಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರನ್ನು ಅಸಹಜವಾಗಿ ನಡೆಸಿಕೊಳ್ಳುತ್ತಿರುವುದು ಇಂದಿಗೂ ಮುಂದುವರಿದಿದೆ ಇಂತಹ ಅನಾಹುತಗಳು ಮತ್ತು ಮಹಿಳಾ ಶೋಷಣೆಗಳು ಕಾಡುಗೊಲ್ಲರ ಹಟ್ಟಿಗಳಲ್ಲಿ ಮಹಿಳೆಯರು, ಮಕ್ಕಳ ಮೇಲೆ ನಡೆಯದಂತೆ ಜಿಲ್ಲಾಡಳಿತ ಆಡಳಿತಾತ್ಮಕ ಮತ್ತು ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವಂತೆ ಗಣೆ ಟ್ರಸ್ಟ್ ಹಾಗೂ ಕಾಡು ಗೊಲ್ಲ ಮಹಿಳಾ ವೇದಿಕೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

Advertisement

ಕಾಡುಗೊಲ್ಲ ಬುಡಕಟ್ಟು ಹಟ್ಟಿಗಳಲ್ಲಿ ದೇವರು, ಧರ್ಮ, ನಂಬಿಕೆಗಳ ಹೆಸರಿನಲ್ಲಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರನ್ನು ಅಸಹಜವಾಗಿ ನಡೆಸಿಕೊಳ್ಳುತ್ತಿರುವುದು ಇಂದಿಗೂ ಮುಂದುವರಿದಿದೆ. ಮಹಿಳೆಯರು ಮತ್ತು ಮಕ್ಕಳಲ್ಲಿ ಸಹಜ ಜೈವಿಕ ಪ್ರಕ್ರಿಯೆಗಳು ಉಂಟಾದಾಗ ಅಂದರೆ; ಮೈನೆರೆದಾಗ, ಮುಟ್ಟಾದಾಗ ಮತ್ತು ಹೆರಿಗೆಯಾದಾಗ 'ಹಟ್ಟಿಯ ಹೊರೆಗೆ' ಬಯಲಿನ ಅಸುರಕ್ಷಿತ ಪ್ರದೇಶದಲ್ಲಿ ಕನಿಷ್ಠ ಸೌಲಭ್ಯಗಳನ್ನೂ ಒದಗಿಸದೆ ಬಿಸಿಲು, ಮಳೆ, ಗಾಳಿಯಲ್ಲಿ ಅವರನ್ನು ಕನಿಷ್ಠ ಮೂರು ದಿನಗಳಿಂದ ತೊಂಭತ್ತು ದಿನಗಳವರೆಗೆ ಹಟ್ಟಿಯ ಆಚೆ ಇಟ್ಟಿರುತ್ತಾರೆ. ಸೂಕ್ತ ರಕ್ಷಣೆಯೂ ಇಲ್ಲದ ಬಯಲು ಪ್ರದೇಶದಲ್ಲಿ ಹೀಗೆ ಇಡಲಾಗುತ್ತಿರುವುದರಿಂದ ಈ ಸಾಮಾಜಿಕ ಅನಿಷ್ಠ ಪದ್ಧತಿಗಳಿಂದ ಕಾಡುಗೊಲ್ಲ ಮಹಿಳೆಯರನ್ನು ಮತ್ತು ಮಕ್ಕಳನ್ನು ಪಾರು ಮಾಡಬೇಕಾಗಿದೆ.

Advertisement
Advertisement

ಇಂತಹ ವಿಲಕ್ಷಣವಾದ ನಂಬಿಕೆಗಳಿಂದ ಮಹಿಳೆಯರು ಮಕ್ಕಳ ಅಸಹಜವಾದ ಸಾವುಗಳು ಉಂಟಾಗುತ್ತಿವೆ. ಮಹಿಳೆಯರು ಗರ್ಭಪಾತಕ್ಕೂ ಒಳಗಾಗುತ್ತಿದ್ದಾರೆ. ಗರ್ಭಕೋಶವನ್ನು ತೆಗೆಸಿಕೊಳ್ಳುತ್ತಿರುವ ಒತ್ತಡಕ್ಕೂ ಒಳಗಾಗುತ್ತಿದ್ದಾರೆ. ಇಂತಹ ಅವಸ್ತವಿಕವಾದ ನಂಬಿಕೆಗಳನ್ನು ದೇವರು ಧರ್ಮಗಳ ಹೆಸರಿನಲ್ಲಿ ಹಟ್ಟಿಯ ಗೌಡರು, ಪೂಜಾರರು, ಯಜಮಾನರು ಮುಂದುವರಿಸಿಕೊಂಡು ಬಲವಂತವಾಗಿ ಭಯ ಹುಟ್ಟಿಸುವ ಮೂಲಕ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಬಲವಂತವಾದ ಇಂತಹ ನಂಬಿಕೆಗಳನ್ನು ಮಹಿಳೆಯರು ವಿರೋಧಿಸಲಾಗದ ಅಸಹಾಯಕತೆಯಲ್ಲಿ ಆತಂಕದಲ್ಲೇ ಹಟ್ಟಿಗಳಲ್ಲಿ ಬದುಕುತ್ತಿರುವರು. ಅವರು ಶಿಕ್ಷಣ, ಉದ್ಯೋಗ, ಆರೋಗ್ಯ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಬಾಲ್ಯ ವಿವಾದಂತಹ ದುರಂತಕ್ಕೆ ಮಕ್ಕಳು ಒಳಗಾಗಿ ಅಸಹಜವಾಗಿ ಸಾವುಗಳಾಗುತ್ತಿವೆ. ಹೆರಿಗೆಯ ಸಮಯದಲ್ಲಿ ರಕ್ತಸ್ರಾವಗಳಾಗಿ ತಾಯಿ ಮಗುವೂ ಕೂಡ ಸಾವನ್ನಪ್ಪಿರುವ ದುರ್ಘಟನೆಗಳು ಅಲ್ಲಲ್ಲಿ ಕೇಳಿಬರುತ್ತಿವೆ ದಯವಿಟ್ಟು ಇಂತಹ ಅನಾಹುತಗಳು ಮತ್ತು ಮಹಿಳಾ ಶೋಷಣೆಗಳು ಕಾಡುಗೊಲ್ಲರ ಹಟ್ಟಿಗಳಲ್ಲಿ ಮಹಿಳೆಯರು, ಮಕ್ಕಳ ಮೇಲೆ ನಡೆಯದಂತೆ ಜಿಲ್ಲಾಡಳಿತ ಆಡಳಿತಾತ್ಮಕ ಮತ್ತು ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತು.

ಜಿಲ್ಲಾ ಆಡಳಿತದ ಇಲಾಖೆಗಳಾದ ಕಂದಾಯ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ,ಆರೋಗ್ಯ ಇಲಾಖೆ, ಜಿಲ್ಲಾ ರಕ್ಷಣಾ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ, ಪಂಚಾಯತ್ ರಾಜ್ ಇಲಾಖೆ ಇವುಗಳ ಸಹಯೋಗದಲ್ಲಿ ಕಾನೂನು ಅರಿವು ಮತ್ತು ನೆರವು ಒದಗಿಸಲು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ನ್ಯಾಯಾವಾದಿಗಳಾದ ಶಿವುಯಾದವ್, ಕುವೆಂಪು ವಿವಿಧ ಅಧ್ಯಾಪಕರಾದ ಡಾ.ಪ್ರೇಮ, ರಾಮಣ್ಣ ಕೂಣಿಕೆರೆ, ತುಮಕೂರು ಕಾಡುಗೊಲ್ಲರ ಸಂಘದ ಖಂಜಾಚಿ ಶ್ರೀಮತಿ ಸುನಂದ ಗಣಿ ಟ್ರಸ್ಟ್ ನ ಸಂಪತ್ ಕುಮಾರ್, ಕರ್ನಾಟಕ ರಾಜ್ಯ ಬುಡಕಟ್ಟು ಮಹಾಸಭಾದ ಜಿಲ್ಲಾಧ್ಯಕ್ಷ ಉಜ್ಜಿಜ್ಜಿ ರಾಜಣ್ಣ ಆನ್ನಪೂರ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement
Tags :
Advertisement