For the best experience, open
https://m.suddione.com
on your mobile browser.
Advertisement

ಸಚಿವ ನಾಗೇಂದ್ರ ರಾಜಿನಾಮೆ ನೀಡಲಿ : ಮಾಜಿ ಶಾಸಕ ನೇರ‍್ಲಗುಂಟೆ ತಿಪ್ಪೇಸ್ವಾಮಿ ಆಗ್ರಹ

05:42 PM Jun 01, 2024 IST | suddionenews
ಸಚಿವ ನಾಗೇಂದ್ರ ರಾಜಿನಾಮೆ ನೀಡಲಿ   ಮಾಜಿ ಶಾಸಕ ನೇರ‍್ಲಗುಂಟೆ ತಿಪ್ಪೇಸ್ವಾಮಿ ಆಗ್ರಹ
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜೂ. 01:  ವಾಲ್ಮಿಕೀ ಅಭಿವೃದ್ದಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ರವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕು ಹಾಗೆಯೇ ಅದಕ್ಕೆ ತಕ್ಕ ಶಿಕ್ಷಯಾಗಬೇಕು ಎಂದು ಮಾಜಿ ಶಾಸಕ ನೇರ‍್ಲಗುಂಟೆ ತಿಪ್ಪೇಸ್ವಾಮಿ ಆಗ್ರಹಿಸಿದ್ದಾರೆ.

Advertisement

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಇಂದು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರ ನಾಯಕ ಜನಾಂಗದವರಿಗಾಗಿಯೇ ಹಣವನ್ನು ಮಿಸಲಿಸಿದೆ. ಇದರಲ್ಲಿ ಈ ಜನಾಂಗದ ಅಭೀವೃದ್ದಿಯನ್ನು ಮಾಡಬೇಕು, ಗಂಗಕಲ್ಯಾಣ ಯೋಜನೆಯಡಿ ಕೊಳವೆಬಾವಿಗಳನ್ನು ಕೊರೆಯಿಸಿ ಕೊಡಬೇಕು ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಕಾಲರಶಿಪ್ ನೀಡಬೇಕು.

ಆದರೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಇಲ್ಲಿ ಇದ್ದ ಹಣವನ್ನು ಬೇರೆ ಕಡೆಗೆ ವರ್ಗಾಯಿಸಿಕೊಂಡು ಚುನಾವಣೆಯನ್ನು ನಡೆಸಿದೆ. ಇದರಲ್ಲಿ ಸಚಿವರ ಪಾತ್ರ ಬಹಳ ಮುಖ್ಯವಾಗಿದೆ ಅವರ ಅನುಮತಿ ಇಲ್ಲದೆ ಇಷ್ಟೋಂದು ಹಣ ಬೇರೆ ಕಡೆಗೆ ವರ್ಗಾವಣೆಯಾಗಲು ಸಾಧ್ಯವಿಲ್ಲ ಈ ಹಿನ್ನಲೆಯಲ್ಲಿ ನಾಗೇಂದ್ರ ರವರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕೆಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಆಯಿತು ಈ ಅವಧಿಯಲ್ಲಿ ಯಾವುದೇ ಪ್ರಗತಿಪರ ಚಟುವಟಿಕೆಗಳು ನಡೆದಿಲ್ಲ. ರಾಜ್ಯ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ತೊಡಗಿದೆ.. ಇವರು ರಾಜ್ಯದ ಜನತೆಗೆ ನಿರಾಶೆ ಉಂಟು ಮಾಡಿದ್ದಾರೆ.. ಸುಳ್ಳು ಹೇಳುವುದೇ ಸಿದ್ದರಾಮಯ್ಯರವರ ಸಾಧನೆ.ಮಾರ್ಚ ತಿಂಗಳಲ್ಲೇ ಎಸ್ ಟಿ ಕಾರ್ಪೊರೇಷನ್ ನಿಂದ ೧೮೭ ಕೋಟಿ ರೂ ಹಗಲು ದರೋಡೆಯಾಗಿದೆ.. ಖಜಾನೆಯಿಂದ ವರ್ಗಾವಣೆ ಮಾಡಿ ಚುನಾವಣೆಗೆ ಹೋಗಿದೆ. ಪ್ರಕರಣ ಬಯಲಿಗೆ ಬಂದರು ಮುಖ್ಯಮಂತ್ರಿಗಳು, ಮಂತ್ರಿಗಳು ಬಾಯಿ ಬಿಡುತ್ತಿಲ್ಲ ಎಂದು ದೂರಿದರು.

ಈಗ ಖಜಾನೆ ಹಗಲು ದರೋಡೆ ಆದರು ಸಿದ್ದರಾಮಯ್ಯರವರು ಬಂಡತನ ಪ್ರದರ್ಶನ ಮಾಡಿದ್ದಾರೆ. ಹಗರಣ ಮುಚ್ಚಿ ಹಾಕಲು ಪ್ರಯತ್ನ ಮಾಡ್ತಿದ್ದಾರೆ. ಇವರು ಎಸ್.ಐ.ಟಿ ಗೆ ಕೊಟ್ಟರೆ ನಿಷ್ಪಕ್ಷಪಾತ ತನಿಖೆ ಆಗಲ್ಲ.. ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳಿಗೆ ವಹಿಸಬೇಕು. ಸಿಬಿಐ  ತನಿಖಾ ತಂಡಕ್ಕೆ ಈ ಪ್ರಕರಣ ಕೊಡಬೇಕು.ಈ ಹಗರಣದಲ್ಲಿ ಸರ್ಕಾರದ ಪಾಲುದಾರಿಕೆ ಇದೆ.. ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ತಿಪ್ಪೇಸ್ವಾಮಿ ಒತ್ತಾಯಿಸಿದರು.

ಮೊಳಕಾಲ್ಮೂರು ತಾಲ್ಲೂಕು ಮಂಡಲ ಅಧ್ಯಕ್ಷ ಡಾ.ಪಿ. ಮಂಜುನಾಥ್ ಮಾತನಾಡಿ, ಸಿದ್ದರಾಮಯ್ಯರವರು ಶೋಷಿತ ಸಮುದಾಯಗಳ ಪರವಾದ ಸರ್ಕಾರ ಅಂತ ಹೇಳುತ್ತಾರೆ ಆದರೆ ಅವರ ಕಲ್ಯಾಣಕ್ಕಾಗಿ ಇಟ್ಟಂತಹ ಹಣವನ್ನು ಏಕೆ ದುರುಪಯೋಗ ಪಡಿಸಿಕೊಂಡಿದ್ದೀರಿ.ವಾಲ್ಮೀಕಿ ಸಮುದಾಯಕ್ಕೆ ಇಟ್ಟಂತ ಹಣವನ್ನು ತೆಲಂಗಾಣ ಆಂಧ್ರಪ್ರದೇಶಕ್ಕೆ ಕಳಿಸಿದ್ದೀರಿ. ಕಣ್ಣು ಹೊರೆಸುವ ಸಲುವಾಗಿ ಎಸ್‌ಐಟಿ ತಂಡ ರಚನೆ ಮಾಡಿ ಎಂ.ಡಿ ಅರೆಸ್ಟ್ ಮಾಡುವ ಪ್ರಯತ್ನ ಮಾಡುತ್ತಿದ್ದೀರಿ.

ಸಿದ್ದರಾಮಯ್ಯರವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು. ಸಮಾಜ ಕಲ್ಯಾಣ ಇಲಾಖೆ ಸಚಿವರು ಆರೋಪ ಬಂದಾಗ ರಾಜೀನಾಮೆ ಕೊಡಬೇಕು.. ಅವರು ಹಗರಣ ಮುಚ್ಚಿಹಾಕಲು ಸಂಪುಟವೇ ಮುಂದಾಗಿದೆ. ಇಂದು ಸಚಿವರು ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಬೇಕು ಎಂದರು.

Tags :
Advertisement