For the best experience, open
https://m.suddione.com
on your mobile browser.
Advertisement

ಕಾಂಗ್ರೆಸ್ ನವರು ಸಿದ್ದರಾಮಯ್ಯ ನವರ ರಾಜೀನಾಮೆ ಪಡೆಯಲಿ : ಆರ್ ಅಶೋಕ್ ಸವಾಲು

02:42 PM Oct 04, 2024 IST | suddionenews
ಕಾಂಗ್ರೆಸ್ ನವರು ಸಿದ್ದರಾಮಯ್ಯ ನವರ ರಾಜೀನಾಮೆ ಪಡೆಯಲಿ   ಆರ್ ಅಶೋಕ್ ಸವಾಲು
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಅ. 04 : ನಾವಂತು ರಾಜ್ಯ ಕಾಂಗ್ರೆಸ್ ಸರ್ಕಾರ ಬೀಳಿಸಲು ಹೋಗಲ್ಲ. ಪಾಪದ ಕೊಡ ತುಂಬಿ ಅದಾಗೇ ಬೀಳಬೇಕು, ನಾವು ಬೀಳಿಸಲ್ಲ ಏಳೆಂಟು ಜನ ಸಚಿವರಿಂದ ಸಿಎಂ ಕುರ್ಚಿಗೆ ಟವಲು ಹಾಕಿದ್ದಾರೆ. ಸಿದ್ಧರಾಮಯ್ಯಗೆ ಅವರ ಪಕ್ಷದವರೇ ವಿರೋಧಿಗಳು. ಕಾಂಗ್ರೆಸ್‍ನವರಿಂದಲೇ ವಿಪಕ್ಷಕ್ಕೆ ದಾಖಲೆಗಳು ಸಿಗುತ್ತಿವೆ ಆದರೆ ಕಾಂಗ್ರೆಸ್‍ನವರು ಬಿಜೆಪಿಯಿಂದ ಸರ್ಕಾರ ಅತಂತ್ರ ಯತ್ನ ಆರೋಪ ಮಾಡ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.

Advertisement

ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್ ಕಾಂಗ್ರೆಸ್‍ನವರು ನನ್ನ ರಾಜೀನಾಮೆ ಕೇಳಿದ್ದರು. ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆಗೆ ಸಿದ್ಧನಿದ್ದೇನೆ. ನಿನ್ನೆ 24 ಗಂಟೆ ಗಡುವು ನೀಡಿದ್ದೆನು. ಅದೇ ರೀತಿ ಸಿದ್ದರಾಮಯ್ಯ ನವರ ರಾಜೀನಾಮೆಯನ್ನು ಕಾಂಗ್ರೆಸ್ ಪಕ್ಷದವರು ಪಡೆಯುವ ಧೈರ್ಯ ತೋರಿಸಲಿ ಎಂದ ಆರ್ ಅಶೋಕ್ ಸಿಎಂ ಸಿದ್ಧರಾಮಯ್ಯ ರಾಜೀನಾಮೆಗೆ ಸವಾಲೆಸೆದು ಆರ್. ಅಶೋಕ್, ಹೆಚ್ ಡಿಕೆ ರಿಂದ ಹುಚ್ಚರಂತೆ ಮಾತು ಎಂಬ ಆರೋಪ ಸಚಿವ ಬೋಸರಾಜು ಹೇಳಿಕೆಗೆ ಆರ್ ಅಶೋಕ್ ತಿರುಗೇಟು ಅಧಿಕಾರ ಹಣ ಇದ್ದಾಗ ಆ ರೀತಿ ಮಾತುಗಳನ್ನಾಡುತ್ತಾರೆ ನಾನು ಕೆಳಮಟ್ಟಕ್ಕಿಳಿದು ಪ್ರತಿಕ್ರಿಯಿಸಲು ಹೋಗಲ್ಲ ಎಂದು ಉತ್ತರಿಸಿದರು.

ಕಾಂಗ್ರೆಸ್ ಸರ್ಕಾರದಿಂದ ತಾಯಿ ಚಾಮುಂಡೇಶ್ವರಿಗೆ ಅವಮಾನ ಆಗಿದೆ ಕಾಂಗ್ರೆಸ್ ಸರ್ಕಾರದಿಂದ ಜಗತ್ ಪ್ರಸಿದ್ಧಿ ಪಡೆದಿರುವಂತಹ ಮೈಸೂರು ದಸರಾಕ್ಕೆ ಅವಮಾನ ಮಾಡುತ್ತಿದ್ದಾರೆ. ರಾಜರ ಇತಿಹಾಸ ಹಿನ್ನೆಲೆ ಹೊಂದಿರುವ ಮೈಸೂರು ದಸರಾದ ಬಗ್ಗೆ ಮಾತನಾಡಬೇಕಾಗಿತ್ತು ಆದರೆ ಯಾವ ಒಬ್ಬ ರಾಜಕಾರಣಿ ಕೂಡಗಳು ಕೂಡ ಮೈಸೂರು ದಸರಾದ ಬಗ್ಗೆ ಮಾತನಾಡುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್ ಆಶೋಕ್ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ. ಈ ಬಾರಿಯ ದಸರಾ ಸಂಪೂರ್ಣವಾಗಿ ರಾಜಕೀಯವಾಗಿದೆ. ಚಾಮುಂಡೇಶ್ವರಿ ತಾಯಿಯ ಆರಾಧನೆ ಪೂಜೆ ಆಗಬೇಕಿದ್ದು ಅದು ಆಗಿಲ್ಲ ಇದು ಸಂಪೂರ್ಣ ರಾಜಕೀಯದ ದಸರಾ ಆಗಿದೆ. ಕಾಂಗ್ರೆಸ್ ನವರು ಕುತಂತ್ರದಿಂದ ರಾಜಕೀಯ ದಸರಾ ಮಾಡುವ ಪರಂಪರೆ ಮಾಡುತ್ತಿದ್ದಾರೆ. ಈ ಬಾರಿ ದಸರಾ ಅಧ್ಯಕ್ಷರು ಸಹ ಕೇಂದ್ರ ಸರ್ಕಾರದ ಬಗ್ಗೆ ಟೀಕೆ ಮಾಡಿದ್ದಾರೆ. ದಸರಾದ ಹಿನ್ನೆಲೆಯನ್ನ ಮರೆತು ಕಾಂಗ್ರೆಸ್ ಸರ್ಕಾರ ದಸರಾ ಚಾಮುಂಡಿಗೆ ಅಪಮಾನ ಮಾಡುತ್ತಿದ್ದು ತಾಯಿ ಚಾಮುಂಡೇಶ್ವರಿ ಇದಕ್ಕೆ ತಕ್ಕ ಶಿಕ್ಷೆ ಕೊಡುತ್ತಾಳೆ ಎಂದು ಆರ್ ಅಶೋಕ್ ಹೇಳಿದ್ದಾರೆ

ದಸರಾ ಆಚರಣೆ ವೇಳೆ ಕೇವಲ ರಾಜಕೀಯ ಭಾಷಣ ಸರ್ಕಾರ ಪತನ, ರಾಜೀನಾಮೆ ಬಗ್ಗೆಯೇ ಭಾಷಣ ದಸರಾ ಉದ್ಘಾಟಿಸಿದ ಸಾಹಿತಿನೋ ಯಾರೋ ಗೊತ್ತಿಲ್ಲ ಅವರೂ ಸಹ ಕೇಂದ್ರದ ವಿರುದ್ಧ ಟೀಕಿಸಿ ಭಾಷಣ ಚಾಮುಂಡಿ ಆರಾಧನೆ, ಮೈಸೂರು ಸಂಸ್ಕೃತಿ ಮರೆತು ರಾಜಕೀಯ ದಸರಾ ಮುಡಾ ಹಗರಣ ರೈಸ್ ಮಾಡದವರು ಯಾರು, ಜ್ಞಾನ ಇರಬೇಕಲ್ಲ ಮುಡಾ ಯಾರ ಅಧಿಕಾರದಲ್ಲಿದೆ, ಮರೀಗೌಡ ಯಾರು? ಎಂದು ಪ್ರಶ್ನಿಸಿದರು. ಸಚಿವ ಭೋಸರಾಜ್ ಹೇಳಿಕೆಗೆ ಆರ್ ಅಶೋಕ್ ಗರಂ ಮುಡಾ ಹಗರಣದ ಸೈಟ್ ಬೆಲೆ 80-90ಲಕ್ಷ ಎಂದೇ ಭಾವಿಸಿದ್ದೆವು ಸಿಎಂ ಹಿಂದೆ ನಿಂತ ವ್ಯಕ್ತಿ ಹೇಳಿದ್ದು ಕೇಳಿ 62 ಕೋಟಿ ಹೇಳಿದ್ದರು ನಿಮ್ಮ ಹಿಂಬಾಲಕರೇ ನಿಮಗೆ ಖೆಡ್ಡಾ ತೋಡಿದ್ದಾರೆ ಸಂಗೊಳ್ಳಿ ರಾಯಣ್ಣಗೆ ಆದ ಸ್ಥಿತಿ ನನಗೂ ಆಗುತ್ತಿದೆ ಎಂದು ಸಿಎಂ ಹೇಳಿದ್ದಾರೆ.

14ಜನ ಶಾಸಕರಿಗೆ ಆಪರೇಷನ್ ಕಮಲಕ್ಕೆ ಯತ್ನ ಆರೋಪ ಮಾಡಿರುವವರ ಯಾವ ಶಾಸಕರು ಯಾರೆಂದು ಹೇಳಲಿ, ದೂರು ದಾಖಲಿಸಲಿ ಕೊಟ್ಟವನು ಯಾರು ತೆಗೆದುಕೊಂಡವನು ಯಾರು ಹೇಳಲಿ ಎಂದ ಅಶೋಕ್ ಕೇಂದ್ರ ಸಚಿವ ಸ್ಥಾನದ ಉಳುವಿಗಾಗಿ ಹೆಚ್ ಡಿಕೆ ಪಾದಯಾತ್ರೆ ಎಂದು ಡಿಕೆಶಿ ಹೇಳಿಕೆ ವಿಚಾರ ಡಿ ಕೆ ಶಿವಕುಮಾರ್ ಅವರಿಗೆ ಭಯ ಇರಬಹುದು ಎಂದರು.

ಬಿಜೆಪಿ- ಜೆಡಿಎಸ್ ಮೈತ್ರಿ ಲೋಕಸಭೆ ಚುನಾವಣೆ ಫಲಿತಾಂಶ ನೀಡಿದೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ವೇಳೆಯ ಫಲಿತಾಂಶವೂ ನಮ್ಮ ಮುಂದಿದೆ ಹೊಟ್ಟೆ ಉರಿಯಿಂದ ಒಂದಷ್ಟು ಜನ ಮಾತಾಡಬಹುದು ಜಿ ಟಿ ದೇವೇಗೌಡ ಸ್ಥಳೀಯ ಶಾಸಕರಾಗಿ ಸಿಎಂ ಬಗ್ಗೆ ಹೊಗಳಿದ್ದಾರೆಪ್ರಧಾನಿ ಮೋದಿ ತೆಲಂಗಾಣಕ್ಕೆ ಹೋದಾಗ ಅಲ್ಲಿನ ಸಿಎಂ ಹಿರಿಯಣ್ಣ ಅಂದಿದ್ದರು ಎಂದರು.

ಜಾತಿ ಗಣತಿ ವರದಿ ಸ್ವೀಕಾರ ಬಗ್ಗೆ ಸಿಎಂ ಹೇಳಿಕೆ ವಿಚಾರ 2013ರಿಂದ ಅಧಿಕಾರದಲ್ಲಿದ್ದಾಗ ಮಾಡಬಹುದಾಗಿತ್ತು ಮಾಡಲಿಲ್ಲ ಕಾಂಗ್ರೆಸ್ ನ ಒಕ್ಕಲಿಗ ಸಚಿವರೇ ವಿರೋಧಿಸಿದ್ದಾರೆ ಲಿಂಗಾಯತ ಶಾಸಕರು ಜಾತಿ ಗಣತಿ ವಿರೋಧಿಸಿದ್ದಾರೆ ಬಿಜೆಪಿ ಜಾತಿಗಣತಿಯನ್ನು ವಿರೋಧ ಮಾಡೋದಿಲ್ಲ ಆದರೆ ವೈಜ್ಞಾನಿಕವಾಗಿ ಜಾತಿ ಗಣತಿ ಆಗಬೇಕು ಅಶೋಕ್ ಸರ್ಕಾರವನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ,ಎಸ್,ನವೀನ್, ಚಿದಾನಂದ ಗೌಡ, ಮಾಜಿ ಶಾಸಕರಾದ ತಿಪ್ಪಾರೆಡ್ಡಿ, ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ, ಮುಖಂಡರಾದ ಲಕ್ಷ್ಮೀಕಾಂತ್, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ವಕ್ತಾರ ನಾಗರಾಜ್ ಬೇದ್ರೇ, ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags :
Advertisement