Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪಿ.ಓ.ಪಿ ಗಣೇಶ ಮೂರ್ತಿಗಳನ್ನು ಬಳಸಿದರೆ ಕಾನೂನು ಕ್ರಮ

07:32 PM Sep 02, 2024 IST | suddionenews
Advertisement

 

Advertisement

ಚಿತ್ರದುರ್ಗ. ಸೆ.02: ಸರ್ಕಾರ ಸೂಚನೆಯಂತೆ ಪಿ.ಓ.ಪಿ ಮತ್ತು ರಾಸಾಯನಿಕ ಗುಣವುಳ್ಳ ವಸ್ತುಗಳನ್ನು ಬಳಸಿ ಗಣಪತಿ ವಿಗ್ರಹಗಳ ತಾಯಾರಿಕೆ, ಸಂಗ್ರಹ, ಮಾರಾಟ ಮತ್ತು ವಿಸರ್ಜನೆಯನ್ನು ನಿಷೇಧಿಸಲಾಗಿದೆ.

ಸಾರ್ವಜನಿಕರು ಪರಿಸರ ಸ್ನೇಹಿ, ಬಣ್ಣ ರಹಿತ, ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಬೇಕು. ಸಾರ್ವಜನಿಕವಾಗಿ ಮೂರ್ತಿ ಪ್ರತಿಷ್ಠಾಪನೆ ಮೊದಲು ಸಕ್ಷಮ ಪ್ರಾಧಿಕಾರ ಅಥವಾ ಇಲಾಖೆಗಳಿಂದ ಅನುಮತಿ ಪಡೆಯಬೇಕು. ಗಣೇಶ ಉತ್ಸವಗಳಲ್ಲಿ ಏಕ ಬಳಕೆ ಪ್ಲಾಸ್ಟಿಕನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸ್ವಚ್ಚತೆಯನ್ನು ಕಾಪಾಡುವುದು ದಿನನಿತ್ಯ ಉತ್ಪತ್ತಿಯಾಗುವ ತ್ಯಾಜ್ಯವನ್ನು ಪುರಸಭೆ ವಾಹನಕ್ಕೆ ನೀಡಬೇಕು.

Advertisement

ಹೊಳಲ್ಕೆರೆ ಪಟ್ಟಣದಲ್ಲಿನ ಗಣೇಶ ವಿಸರ್ಜನೆಗಾಗಿ ಪುರಸಭೆಯಿಂದ ತಾಲ್ಲೂಕು ಪಂಚಾಯತ್ ಹಿಂಭಾಗದಲ್ಲಿರುವ ಎನ್.ಇ.ಎಸ್ ಕಾಲೋನಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯೇ ಸ್ಥಳದಲ್ಲಿಯೇ ಗಣಪತಿ ವಿಗ್ರಹಗಳನ್ನು ವಿಸರ್ಜಿಸಬೇಕು.

ಆದೇಶವನ್ನು ಮೀರಿ ಪಿ.ಓ.ಪಿ ಮತ್ತು ರಾಸಾಯನಿಕ ಗುಣವುಳ್ಳ ವಸ್ತುಗಳನ್ನು ಬಳಸಿ ವಿಗ್ರಹಗಳನ್ನು ತಯಾರಿಸುತ್ತಿರುವುದು ಮತ್ತು ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಅಥವಾ ನಿಗಧಿತ ಸ್ಥಳದಲ್ಲಿ ಬಿಟ್ಟು ಬೇರೆ ಕಡೆ ವಿಸರ್ಜನೆ ಮಾಡುತ್ತಿರುವುದು ತಿಳಿದುಬಂದಲ್ಲಿ, ಮೂರ್ತಿಗಳನ್ನು ವಶಪಡಿಸಿಕೊಳ್ಳುವುದಲ್ಲದೇ ದಂಡ ಮತ್ತು ಕಾನೂನು ಕ್ರಮಕೈಗೊಳ್ಳಲಾಗುವುದು ಹೊಳಲ್ಕೆರೆ ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Tags :
bengaluruchitradurgaGanesha idolslegal actionPOPsuddionesuddione newsಕಾನೂನು ಕ್ರಮಗಣೇಶ ಮೂರ್ತಿಚಿತ್ರದುರ್ಗಪಿ.ಓ.ಪಿಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article